ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ಮಹಾಕುಸಿತವನ್ನು ಕಂಡಿದ್ದು, ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಏರಿಕೆ ಕಂಡಿದೆ. ಅಸ್ಥಿರತೆ ಮುಂದುವರಿದಿದೆ. ಆದರೆ ಆಶಾದಾಯಕ ವಾತಾವರಣ ಇದೆ. ಈ ನಡುವೆಯೂ ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಷೇರು ಮಾರುಕಟ್ಟೆ ಹಾಗೂ ಅಡಿಕೆ ಧಾರಣೆಯ ಮೇಲೆ ನೇರವಾಗಿ ಯಾವುದೇ ಸಂಬಂಧಗಳು ಇಲ್ಲ. ಹಾಗಿದ್ದರೂ ಈ ಹಿಂದೆ ಷೇರು ಮಾರುಕಟ್ಟೆಯ ಅಸ್ಥಿರವಾದ ಪರಿಸ್ಥಿತಿಗಳು ಅಡಿಕೆಯ ಮೇಲೆ ಪರಿಣಾಮ ಬಿದ್ದಿದೆ. ಇದಕ್ಕಾಗಿ ಈಗ ಅಡಿಕೆ ಬೆಳೆಗಾರರು ಎಚ್ಚರ ವಹಿಸಬೇಕಿದೆ. ಮಾರುಕಟ್ಟೆ ಏರಿಕೆ, ನಷ್ಟವನ್ನು ತಪ್ಪಿಸಲು ವಿಪರೀತ ನಿರೀಕ್ಷೆಯ ಧಾರಣೆಯ ಬಗ್ಗೆಯೂ ಯೋಚಿಸಿ ನಿರ್ಧರಿಸಬೇಕಿದೆ.……..ಮುಂದೆ ಓದಿ…..
ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ಕುಸಿತವನ್ನು ಕಂಡಿದ್ದು, ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 3.5 ಪರ್ಸೆಂಟ್‌ಕ್ಕಿಂತ ಹೆಚ್ಚು ಇಳಿಕೆಗೊಂಡಿತ್ತು. ಡೊನಾಲ್ಡ್ ಟ್ರಂಪ್ ಪ್ರತಿ ಸುಂಕವನ್ನು ಘೋಷಣೆ ಮಾಡಿದ ಬಳಿಕ ಕುಸಿತಗೊಂಡ ಷೇರುಪೇಟೆ ಪತನಕ್ಕೆ ಕಾರಣವಾಯಿತು. ಮುಂದೆ ಮತ್ತಷ್ಟು ಇಳಿಕೆಯಾಯಿತು. ಷೇರು ಮಾರುಕಟ್ಟೆಯಲ್ಲಿನ ಈ ಭೀಕರ ಕುಸಿತಕ್ಕೆ ಹಲವು ಕಾರಣಗಳಿವೆ. ಟ್ರಂಪ್ ಆಡಳಿತವು 180 ಕ್ಕೂ ಹೆಚ್ಚು ದೇಶಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸಿದೆ. ಇದು ಮಾರುಕಟ್ಟೆ ನಡುಕವನ್ನು ಸೃಷ್ಟಿಸಿತ್ತು.
ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಸುಂಕ ವಿಧಿಸುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ, ಅದದರ ಬದಲಾಗಿ “ಸುಂಕಗಳು ಒಂದು ರೀತಿಯ ಔಷಧಿ ಇದ್ದಂತೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ನಷ್ಟದ ಬಗ್ಗೆ ನನಗೆ ಚಿಂತೆಯಿಲ್ಲ.ಆದರೆ ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿಯನ್ನು ತೆಗೆದುಕೊಳ್ಳಬೇಕು” ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ನಡುವೆ ಮಂಗಳವಾರ ಷೇರು ಮಾರುಕಟ್ಟೆ ಚೇತರಿಸಿಕೊಂಡಿವೆ.ಮಾರುಕಟ್ಟೆ ಸೂಚ್ಯಂಕಗಳು ಮೇಲೆದ್ದಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಭರ್ಜರಿ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಗಳ ಧನಾತ್ಮಕ ಸೂಚನೆಗಳು ಮಾರುಕಟ್ಟೆಯ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಭಾರತದ ಸ್ಥಿರವಾದ ಆರ್ಥಿಕ ಮೂಲಭೂತ ಅಂಶಗಳನ್ನು ಮಾರುಕಟ್ಟೆಯ ಬೆಂಬಲಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪರಿಸ್ಥಿತಿ ಸುಧಾರಣೆಯಾಗಬಹುದು ಎನ್ನುವ ನಿರೀಕ್ಷೆ ಇದೆ.
ಆದರೆ ಅಡಿಕೆ ಬೆಳೆಗಾರರು ಷೇರುಮಾರುಕಟ್ಟೆಯ ಅಸ್ಥಿರತೆಯ ಬಗ್ಗೆಯೂ ಗಮನಿಸಬೇಕಾಗಿದೆ. ಈ ಹಿಂದೆ ಷೇರುಮಾರುಕಟ್ಟೆಯ ಅಸ್ಥಿರತೆಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳು ಮತ್ತು ವಿನಿಮಯ ದರದ ಏರಿಳಿತಗಳು ಅಡಿಕೆ ಮಾರುಕಟ್ಟೆಯ ಮೇಲೆ ಪರೋಕ್ಷ ಪರಿಣಾಮ ಬೀರಿದೆ. ಷೇರು ಮಾರುಕಟ್ಟೆಯ ಅಸ್ಥಿರವಾದಂತೆಯೇ ಅಡಿಕೆ ಧಾರಣೆ ಏರಿಕೆ ಹಾಗೂ ಮಾರುಕಟ್ಟೆ ಇನ್ನಷ್ಟು ಏರಿಕೆಯ ಸುದ್ದಿಗಳು ಬಂದವು. ಆದರೆ ಆ ಸಮಯದ ನಂತರ ಮಾರುಕಟ್ಟೆ ಇಳಿಕೆಯಾದ ಉದಾಹರಣೆ ಇದೆ. ಹೀಗಾಗಿ ವಿಪರೀತವಾದ ಧಾರಣೆ ಏರಿಕೆಯ ನಿರೀಕ್ಷೆಗೆ ಅಡಿಕೆ ಬೆಳೆಗಾರರು ಒಳಗಾಗದೆ , ಅಗತ್ಯದಂತೆ ಅಡಿಕೆ ಮಾರಾಟ ಮಾಡಿ ಮಾರುಕಟ್ಟೆಯನ್ನು ಸ್ಥಿರವಾಗುವಂತೆ ಮಾಡಬಹುದಾಗಿದೆ.
ಅಡಿಕೆ ಮಾರುಕಟ್ಟೆಯು ಹವಾಮಾನ , ಮಣ್ಣಿನ ಸ್ಥಿತಿ, ಪೂರೈಕೆ ಮತ್ತು ಬೇಡಿಕೆ, ಸರ್ಕಾರದ ನೀತಿ, ವಿಶ್ವ ಆರ್ಥಿಕತೆ ಸ್ಥಿತಿ, ನಕಲಿ ಉತ್ಪನ್ನಗಳು ಅಥವಾ ಕಳಪೆ ಉತ್ಪನ್ನಗಳ ಅಂಶಗಳ ಮೇಲೆ ಮಾರುಕಟ್ಟೆ ನಿಂತಿದೆ. ಅದರ ಜೊತೆಗೆ ಈಗ ಪ್ರಮುಖವಾಗಿ ಊಹಾಪೋಹಗಳು ಅಡಿಕೆ ಮಾರುಕಟ್ಟೆಯನ್ನು ಹಿಡಿದು ನಿಲ್ಲಿಸುತ್ತವೆ. ಎಲ್ಲೇ ಏನೇ ಆದರೂ ಪರಿಣಾಮ ಅಡಿಕೆ ಬೆಳೆಗಾರರ ಮೇಲೆ.ಇದಕ್ಕಾಗಿ ಈಗ ಷೇರು ಮಾರುಕಟ್ಟೆಯ ಅಸ್ಥಿರದ ವೇಳೆಯೂ ಅಡಿಕೆ ಬೆಳೆಗಾರರು ಗಮನಿಸುವುದು ಉತ್ತಮ.