Opinion

ಸ್ನಾನಕ್ಕೆ ನಮ್ಮ ಹಿರಿಯರು ಕೊಟ್ಟ ಮಹತ್ವ | ಪೂರ್ವಜರು ವಿಶ್ಲೇಷಿಸಿದ 5 ರೀತಿಯ ಸ್ನಾನ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಿಂದೂ ಸನಾತನ(Hindu Sanatan) ಧರ್ಮದಲ್ಲಿ(Religion) ಸ್ನಾನಕ್ಕೆ(Bath) ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಹೇಳಲಾಗಿದೆ. ಸ್ನಾನವನ್ನು ಮನುಷ್ಯನ(Human) ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ 5 ಬಗೆಯ ಸ್ನಾನಗಳನ್ನು ಉಲ್ಲೇಖಿಸಲಾಗಿದೆ. ಮುನಿ ಸ್ನಾನ, ದೇವ ಸ್ನಾನ, ಮಾನವ ಸ್ನಾನ, ಸ್ತ್ರೀ ಸ್ನಾನ ಮತ್ತು ರಾಕ್ಷಸಿ ಸ್ನಾನ ಅವುಗಳಲ್ಲಿ ಪ್ರಮುಖವಾಗಿವೆ. ಮುನಿ ಸ್ನಾನ ಎಲ್ಲಕ್ಕಿಂತ ಉತ್ತಮವಾಗಿದೆ. ಮುನಿ ಸ್ನಾನ ಮಾಡುವ ವ್ಯಕ್ತಿಯು ಎಲ್ಲಾ ರೀತಿಯ ಸಂಕೋಲೆಗಳಿಂದ ಮುಕ್ತನಾಗಿರುತ್ತಾನೆ. ಮುನಿ ಸ್ನಾನ ಹಿಂದೂ ಧರ್ಮದ ಅತ್ಯುತ್ತಮ ಸ್ನಾನವೆಂದು ಪರಿಗಣಿಸಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಐದು, ರೀತಿಯಾದಂತಹ ಸ್ನಾನದ ಸಮಯವನ್ನು ನಮ್ಮ ಪೂರ್ವಜರು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿರುತ್ತಾರೆ.

Advertisement

1. ಬ್ರಾಮ್ಮಿ ಸ್ನಾನ : ಇದನ್ನು ಹಿಂದಿನ ಕಾಲದಲ್ಲಿ ಋಷಿಮುನಿಗಳು, ಮಾಡುತ್ತಿದ್ದರು.ಈಗಿನ ಕಾಲಘಟ್ಟದಲ್ಲಿ, ಎಲ್ಲೋ ಕೆಲವರು {ಮಠಾಧಿಪತಿಗಳು ಮಾಡುತ್ತಾರೆ}ಈ ಸ್ನಾನ ಮಾಡುವ ಸಮಯ ಬೆಳಗಿನ ಜಾವ 03:00 ರಿಂದ 04:00 ರವರೆಗೆ, ಈ ಸಮಯದಲ್ಲಿ ಸ್ನಾನ ಮಾಡುವುದರಿಂದ, ಮನುಷ್ಯನ ಆರಿಷಡ್ವರ್ಗಗಳು ಹಿಡಿತಕ್ಕೆ ಬರುತ್ತದೆ. { ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ} ಮುಂತಾದವುಗಳು ಇದರಿಂದ ಅಖಂಡ ಪುಣ್ಯ ಫಲಗಳು ಸಿಗುತ್ತದೆ. ಜೀವನದಲ್ಲಿ ಎಲ್ಲಾ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.

2. ದೈವೀ ಸ್ನಾನ: ಇದನ್ನು ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರು, ಪುರೋಹಿತ ವರ್ಗದವರು, ಮಾಡುತ್ತಾರೆ. ಸಮಯ ಬೆಳಗಿನ ಜಾವ 04:00 ರಿಂದ 05:00 ರವರೆಗೆ. ಇದರಿಂದ ಮಂತ್ರ ಸಿದ್ಧಿ, ವಾಕ್ಸಿದ್ಧಿ, ದೇವತಾ ಪೂಜೆಯ ಫಲ, ಸನ್ಮಾರ್ಗ ದೊರೆಯುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ದೇವಾನುದೇವತೆಗಳಿಗೆ ದೇವಸ್ಥಾನಗಳಲ್ಲಿ ವಿಗ್ರಹಗಳಲ್ಲಿ ಅಭಿಷೇಕವನ್ನು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ದೈವಬಲ ಪ್ರಾಪ್ತಿಯಾಗುತ್ತದೆ.

3. ಮನುಷ್ಯ ಸ್ನಾನ : ಅಂದರೆ ಮಾನವ ಸ್ನಾನ. ಸಮಯ, ಬೆಳಗಿನಜಾವ 5:00 ರಿಂದ 06:00ವರೆಗೆ. ಈ ಸಮಯದಲ್ಲಿ, ಸ್ನಾನ ಮಾಡುವವರು ಸಂಸಾರಿಕ ಜೀವನದಲ್ಲಿರುವ, ಪುರುಷ ಮತ್ತು ಸ್ತ್ರೀಯರು, ವಿದ್ಯಾರ್ಥಿಗಳು, ವಯೋ ವೃದ್ಧರು, ಈ ಸಮಯದಲ್ಲಿ ಸ್ನಾನ ಮಾಡಿದರೆ, ಸಂಸಾರಿಕ ಜೀವನ ಸುಂದರವಾಗಿರುತ್ತದೆ, ಮನೆ ಶಾಂತವಾಗಿ ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ, ವಿದ್ಯಾರ್ಥಿಗಳಿಗೆ ವಿದ್ಯೆ, ಲಭಿಸುತ್ತದೆ. ವಯೋ ವೃದ್ಧರಿಗೆ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕಷ್ಟಕಾರ್ಪಣ್ಯಗಳು ಕಳೆಯುತ್ತ ಬರುತ್ತದೆ. ವಿಶೇಷವಾಗಿ ಸಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಉಂಟಾಗುತ್ತದೆ.

4. ರಾಕ್ಷಸ ಸ್ಥಾನ : ಇನ್ನು ಬೆಳಿಗ್ಗೆ, 8:00ರ ನಂತರ ಮಾಡುವ ಸ್ನಾನವನ್ನು ರಾಕ್ಷಸ ಸ್ನಾನ ಎಂದು ಕರೆಯುತ್ತಾರೆ. ಒಂದು ವೇಳೆ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ರಾಕ್ಷಸ ತತ್ವ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಯಾವಾಗಲೂ ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತದೆ. ಎಷ್ಟೇ ಕೆಲಸ ಕಾರ್ಯವನ್ನು ಮಾಡಿದರು ಕೂಡ ನೆಮ್ಮದಿ ಎನ್ನುವುದು ಇರುವುದಿಲ್ಲ. ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬರುತ್ತಿರುತ್ತದೆ.

Advertisement

5. ಸ್ತ್ರೀ ಸ್ನಾನ :  ಸಂಜೆಯ ನಂತರ, ಈ ಸಮಯದಲ್ಲಿ ಪುರುಷರು ಸ್ನಾನ ಮಾಡಬಾರದು, {ಸ್ತ್ರೀಯರು, ರಜಾ ದಿನಗಳಲ್ಲಿ, ಶೃಂಗಾರ, ಪ್ರಣಯ, ಇಂತಹ ಕಾರ್ಯಗಳಲ್ಲಿ, ಮಾಡುವ ಸ್ನಾನ} ಇದರಿಂದ ಸ್ತ್ರೀಯರಿಗೆ, ಶುಚಿತ್ವ ಉಂಟಾಗುತ್ತದೆ, ಸಾಂಸಾರಿಕ ಜೀವನದಲ್ಲಿ ಸಾಮರಸ್ಯವಿರುತ್ತದೆ, ಮನೆಯಲ್ಲಿ ಪತಿ ಪತ್ನಿ ಶಾಂತವಾಗಿರುತ್ತಾರೆ, ಕುಟುಂಬ ವೃದ್ಧಿಯಾಗುತ್ತದೆ.

Service title
ಸಂಗ್ರಹ: ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯ

A bath rids a person of the black energy enveloping it and also destroys the Raja-Tama components in its body, thus making every cell in its body conducive to absorb Chaitanya (Divine consciousness). The distressing components generated during brushing of the teeth and evacuation of faeces, which are yet not expelled by the body, are destroyed through a bath.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 06.07.2025 | ಮುಂದಿನ 10 ದಿನಗಳ ಕಾಲ ಹೇಗಿರಬಹುದು ಹವಾಮಾನ?

07.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

12 hours ago

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ

2047ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ…

18 hours ago

ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ

ತುಂಗ-ಭದ್ರಾ ಎರಡೂ ಜಲಾಶಯಗಳಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ೮೦ ಸಾವಿರಕ್ಕೂ ಅಧಿಕ ಕ್ಯೂಸೆಕ್…

18 hours ago

ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |

ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು  ಬಳಸಿಕೊಂಡು ಜಾಗತಿಕವಾಗಿ ವೇಗವಾಗಿ ಬೆಳೆಯುವ ಮರಗವನ್ನು…

18 hours ago

ಬದುಕು ಪುರಾಣ | ದಾನಕ್ಕೆ ಬಂದ ಮಾನ

ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…

21 hours ago

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಚಂದನ್‌ ಕೆ ಪಿ

ಚಂದನ್‌ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…

1 day ago