Advertisement
MIRROR FOCUS

ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಹೆಚ್ಚಳ | ಹೆಚ್ಚುತ್ತಿರುವ ರಬ್ಬರ್‌ ಬೇಡಿಕೆ |

Share

ಅಂತರಾಷ್ಟ್ರೀಯ ರಬ್ಬರ್‌ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಳೀಯ ಧಾರಣೆಗಿಂತಲೂ ಸುಮಾರು 20 ರೂಪಾಯಿ ಹೆಚ್ಚಳ ಇದೆ. ಸದ್ಯ ರಬ್ಬರ್‌ ಬೇಡಿಕೆ ಮುಂದುವರಿದಿದ್ದು, ರಬ್ಬರ್‌ ಬೆಳೆಗಾರರಿಗೆ ಆಶಾದಾಯಕ ವಾತಾವರಣ ಸದ್ಯದ ಮಟ್ಟಿಗೆ ಕಂಡುಬಂದಿದೆ.

ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ತನ್ನ ದಾಖಲೆಯನ್ನು ಮುಂದುವರೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 211 ರೂಪಾಯಿ ಇದ್ದರೆ ಕೊಟ್ಟಾಯಂನಲ್ಲಿ ಆರ್‌ಎಸ್‌ಎಸ್ 4 ಗ್ರೇಡ್‌ ರಬ್ಬರ್‌ಗೆ  ಕೆಜಿಗೆ 184 ರೂಪಾಯಿ ಇತ್ತು. ಅಂತರಾಷ್ಟ್ರೀಯ ರಬ್ಬರ್‌ ಧಾರಣೆಯು  ಜನವರಿ  ಮಧ್ಯದಿಂದ ಭಾರತೀಯ ಬೆಲೆಯನ್ನು ಮೀರಿಸಿದೆ. ಬೆಲೆ ವ್ಯತ್ಯಾಸವಿದ್ದರೂ, ವಿಯೆಟ್ನಾಂನಂತಹ ವಿವಿಧ‌ ರಬ್ಬರ್ ಉತ್ಪಾದಕ  ರಾಷ್ಟ್ರಗಳಿಗೆ ಕೂಡಾ ಆಮದು-ರಫ್ತು ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಜಾಗತಿಕವಾಗಿ, ಶೀಟ್ ರಬ್ಬರ್ ಬಳಕೆಯು ಸುಮಾರು 10% ರಷ್ಟು ಹೆಚ್ಚಾಗಿದೆ. ಚೀನಾ, ಮಲೇಷ್ಯಾ ಮತ್ತು ಶ್ರೀಲಂಕಾ ರಬ್ಬರ್‌ ಬಳಕೆಯಲ್ಲಿ ಮುಂಚೂಣಿಯಲ್ಲಿದೆ, ವಿವಿಧ ಕಂಪನಿಗಳು ರಬ್ಬರ್‌ ಬೇಡಿಕೆ ವ್ಯಕ್ತಪಡಿಸಿವೆ.

ಸದ್ಯ ಭಾರತದಲ್ಲೂ ಕೈಗಾರಿಕೆಗಳಿಗೆ ಅನುಕೂಲಕರ ದರದಲ್ಲಿ ರಬ್ಬರ್‌ ಬೇಕಾಗಿದೆ. ಅಂತರಾಷ್ಟ್ರೀಯ ರಬ್ಬರ್‌ ಬೆಲೆ ಏರಿಕೆಯಾದಂತೆಯೇ ದೇಶೀಯ ವಲಯದಲ್ಲಿ ರಬ್ಬರ್‌ ಧಾರಣೆ ಆಶಾದಾಯಕವಾಗಿ ಏರಿಕೆ ಸಾಧ್ಯತೆ ಇದೆ. ಹೀಗಾಗಿ ಧಾರಣೆ ಏರಿಕೆ ಇನ್ನಷ್ಟು ಸಾಧ್ಯತೆ ಇದೆ.

ಸದ್ಯ ಬೇಸಗೆಯ ಕಾರಣದಿಂದ ರಬ್ಬರ್‌ ಟ್ಯಾಪಿಂಗ್‌ ಭಾರತದ ಹಲವು ಕಡೆ ಸ್ಥಗಿತಗೊಂಡಿದೆ. ಮಳೆಗಾಲ ಆರಂಭದಿಂದ ರಬ್ಬರ್‌ ಟ್ಯಾಪಿಂಗ್‌ ಮತ್ತೆ ಆರಂಭಗೊಳ್ಳಲಿದೆ. ಅದುವರೆಗೂ ರಬ್ಬರ್‌ ಧಾರಣೆಯಲ್ಲಿ ಏರಿಕೆ ಕಾಣಲಿದೆ. ಆ ಬಳಿಕದ ವಾತಾವರಣವೂ ಈಗಿನ ಲೆಕ್ಕಾಚಾರದಲ್ಲಿ ಆಶಾದಾಯಕ ವಾತಾವರಣ ಇದೆ.

Source : NRR News

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

4 minutes ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

18 minutes ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

20 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

20 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

20 hours ago