Advertisement
MIRROR FOCUS

ಚುನಾವಣೆಯ ಹೆಸರಿನಲ್ಲಿ ಕೃಷಿಕರ ಕೋವಿ ಠೇವಣಾತಿ | ವಿಶೇಷ ಸಭೆ ಸೇರಿ ವಿನಾಯಿತಿ ನೀಡಿದ ಸ್ಕ್ರೀನಿಂಗ್‌ ಕಮಿಟಿ…! |

Share

ಚುನಾವಣೆಯ ಸಂದರ್ಭ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ವಿವಿಧ ಕ್ರಮಗಳನ್ನು ಚುನಾವಣಾ ಆಯೋಗ ಜಾರಿಗೊಳಿಸುತ್ತದೆ. ಅದರಲ್ಲಿ  ಕೃಷಿ ರಕ್ಷಣೆಗೆ ಪರವಾನಿಗೆಯನ್ನು ಪಡೆದ ಕೋವಿಯನ್ನು ಠಾಣೆಗಳಲ್ಲಿ ಕೃಷಿಕರು ಠೇವಣಾತಿ ಇಡುವ ಪ್ರಕ್ರಿಯೆಯೂ ಒಂದು. ಆದರೆ ಕೃಷಿ ರಕ್ಷಣೆಗೆಂದು ಹೊಂದಿರುವ ಕೋವಿಯನ್ನು ಠೇವಣಾತಿ ಇಡುವುದು ಸ್ಥಗಿತಗೊಳ್ಳಬೇಕು ಎನ್ನುವ ಬೇಡಿಕೆಯ ನಡುವೆ ನ್ಯಾಯಾಲಯ ಮೆಟ್ಟಿಲೇರಿದ್ದ ಕೃಷಿಕರ ಕೋವಿ ಠೇವಣಾತಿಗೆ ಈ ಬಾರಿ ವಿನಾಯಿತಿ ಸಿಕ್ಕಿದೆ. ಇದಕ್ಕಾಗಿ ಸ್ಕ್ರೀನಿಂಗ್‌ ಕಮಿಟಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದು, ಸಂಬಂಧಿತ ಕೃಷಿಕರಿಗೆ ಆದೇಶವನ್ನೂ ಕಳುಹಿಸಿದೆ.

ಚುನಾವಣೆಯ ಸಂದರ್ಭ ಕೃಷಿಕರ ಕೋವಿಯನ್ನು ಠೇವಣಾತಿ ಇಡುವ ಪ್ರಕ್ರಿಯೆ ಸ್ಥಗಿತಗೊಳ್ಳಬೇಕು, ಯಾವುದೇ ಕ್ರಮಿನಲ್‌ ಹಿನ್ನೆಲೆ ಇಲ್ಲದ ಕೃಷಿಕರು ಕೂಡಾ ಕೋವಿಯನ್ನು ಹಣ ಪಾವತಿ ಮಾಡಿ ಡಿಪಾಸಿಟ್‌ ಮಾಡಬೇಕಾದ ಸ್ಥಿತಿ ಹಲವು ಸಮಯಗಳಿಂದ ಇದೆ. ಕಳೆದ ಮೂರು ವರ್ಷಗಳಿಂದ ಅಂದರೆ ಮೂರು ಚುನಾವಣೆಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಈ ಬಗ್ಗೆ ಕೃಷಿಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಂದರ್ಭ ಸ್ಕ್ರೀನಿಂಟ್‌ ಕಮಿಟಿ ರಚನೆ ಮಾಡಿ ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬೇಕು ಎಂದು ಮಾನ್ಯ ಹೈಕೋರ್ಟ್‌ ನಿರ್ದೇಶನ ನೀಡಿತ್ತು.  ಚುನಾವಣೆ ಘೋಷಣೆಯಾಗುವ ಜೊತೆಗೇ ಕಮಿಟಿ ರಚನೆಯಾಗಬೇಕು, ಅದಕ್ಕೆ ಕೃಷಿಕರು ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.

ಈ ಬಾರಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಸ್ಕ್ರೀನಿಂಗ್‌ ಕಟಿಮಿ ರಚನೆಯಾಗಿತ್ತು. ಈ ಸಮಿತಿ ಅರ್ಜಿ ಸಲ್ಲಿಸಿದ ಬಹುತೇಕ ಎಲ್ಲಾ ಕೃಷಿಕರದೂ ಅರ್ಜಿ ತಿರಸ್ಕಾರಗೊಂಡು ಎಲ್ಲಾ ಕೃಷಿಕರೂ ಕೋವಿ ಠೇವಣಾತಿ ಇಡಬೇಕು ಎಂದು ಸೂಚನೆ ನೀಡಿತ್ತು. ಇದಕ್ಕೆ ಕಾರಣ ನೀಡಿದ ಸ್ಕ್ರೀನಿಂಗ್‌ ಕಮಿಟಿಯು, ಈಗ ಯಾವುದೇ ಕೃಷಿಗೆ ಮಂಗಗಳು ಹಾನಿ ಮಾಡುವುದಿಲ್ಲ, ಇದರಿಂದ ಸಮಸ್ಯೆಯೂ ಇಲ್ಲ ಎಂದು ಹೇಳಿತ್ತು.

ಈ ಬಗ್ಗೆ ಕೃಷಿಕರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಂಟ್ವಾಳದ ಗೋವಿಂದ ಭಟ್‌ ಮಾಣಿಮೂಲೆ ಹಾಗೂ ಬೆಳ್ಳಾರೆಯ ಜಯಪ್ರಸಾದ್‌ ಜೋಶಿ, ಪುರುಷೋತ್ತಮ ಮಲ್ಕಜೆ ಹಾಗೂ ಗಿರಿಜಾ ಶಂಕರ್‌ ಮತ್ತುಸುದರ್ಶನ್‌ ಕುಮಾರ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಒಟ್ಟು ಒಂಭತ್ತು ಮಂದಿ ಕೃಷಿಕರು ಜೊತೆಯಾಗಿದ್ದರು. ಈ ಅರ್ಜಿ ವಿಚಾರಣೆ ನಡೆದಿದ್ದು, ಎರಡು ದಿನದಲ್ಲಿ ತೀರ್ಪು ಪ್ರಕಟವಾಗಲಿದೆ.

ಈ ನಡುವೆ ಸ್ಕ್ರೀನಿಂಗ್‌ ಕಮಿಟಿ ಸಭೆ ಸೇರಿ ತಕ್ಷಣವೇ ನ್ಯಾಯಾಲಯದ ಮೊರೆ ಹೋದ ಕೃಷಿಕರಿಗೆ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿ ಆದೇಶ ನೀಡಿದೆ. ಕೃಷಿ ರಕ್ಷಣೆ, ಕಾಡು ಪ್ರಾಣಿಗಳ ಹಾವಳಿ ಇದೆ ಎಂದು ಕೃಷಿಕರು ತಿಳಿಸಿದ್ದು, ಕೃಷಿಕರು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲದೇ ಇರುವುದರಿಂದ ಹಾಗೂ ಕೃಷಿ ಭೂಮಿಯು ತೀರಾ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಸ್ಕ್ರೀನಿಂಗ್‌ ಕಮಿಟಿಯು ಕೋವಿ ಠೇವಣಾತಿ ಇರಿಸುವುದನ್ನು ವಿನಾಯಿತಿ ನೀಡಿದೆ ಎಂದು ಆದೇಶಿಸಿದೆ.ನ್ಯಾಯಾಲಯದ ತೀರ್ಪು ಎರಡು ದಿನದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಮೊನ್ನೆ ಇದೇ ಸ್ಕ್ರೀನಿಂಗ್‌ ಕಮಿಟಿ ಕೃಷಿಕರ ವಾಸ್ತವ ಸ್ಥಿತಿಯನ್ನು ಅರಿಯದೇ ಈಗ ಕೃಷಿಗೆ ಯಾವುದೇ ಕಾಡು ಪ್ರಾಣಿಯ ಹಾವಳಿ ಇಲ್ಲ ಎಂದು ಹೇಳಿತ್ತು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

19 hours ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

19 hours ago

ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…

19 hours ago

ಹವಾಮಾನ ವರದಿ | 10-10-2026 | ರಾಜ್ಯದಲ್ಲಿ ಇಂದಿನಿಂದ ಮಳೆ ಇಳಿಕೆ ; ಅ.16ರಿಂದ ಹಿಂಗಾರು ಮಳೆ ಆರಂಭದ ಮುನ್ಸೂಚನೆ

ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…

22 hours ago

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

2 days ago