ಭಾರತವು ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನೂ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಭಾಷಣದಲ್ಲಿ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಭಾರತೀಯ ರೈತರ ಕಠಿಣ ಪರಿಶ್ರಮ ಹಾಗೂ ಕೃಷಿಯ ಮಹತ್ವವನ್ನು ಹಾಗೂ ವಿಶೇಷವಾಗಿ ದೇಶದ ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಗಮನಾರ್ಹ ಬೆಳವಣಿಗೆಯನ್ನು ವಿವರಿಸಿದರು.
ದಾಖಲೆಯ ಆಹಾರ ಧಾನ್ಯ ಉತ್ಪಾದನೆ : ಕಳೆದ ವರ್ಷ ದೇಶವು ದಾಖಲೆಯ ಮಟ್ಟದಲ್ಲಿ ಆಹಾರ ಧಾನ್ಯ ಉತ್ಪಾದನೆ ಸಾಧಿಸಿದೆ ಎಂದು ತಿಳಿಸಿದ ರಾಷ್ಟ್ರಪತಿ, ಭಾರತವು 350 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಎಂದರು. ಇದರಲ್ಲಿ 150 ಮಿಲಿಯನ್ ಟನ್ ಅಕ್ಕಿ ಉತ್ಪಾದನೆಯೊಂದಿಗೆ ಭಾರತವು ಈಗ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಚೀನಾವನ್ನೂ ಮೀರಿಸಿದೆ ಎಂದು ಹೇಳಿದರು.
ರೈತರ ಶ್ರಮವೇ ದೇಶಕ್ಕೆ ಶಕ್ತಿ : “ರೈತರ ಶ್ರಮ ಇಂದು ದೇಶಕ್ಕೂ ಜಗತ್ತಿಗೂ ಅನ್ನ ನೀಡುತ್ತಿದೆ. ಭಾರತದ ಕೃಷಿಯ ಯಶಸ್ಸು ವಿಶ್ವದ ಹಸಿವು ನೀಗಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ,” ಎಂದ ಅವರು ಮೀನು ಉತ್ಪಾದನೆಯಲ್ಲಿ ಭಾರತದ ಮತ್ತೊಂದು ಹೆಮ್ಮೆಯ ಸಾಧನೆ ಮಾಡಿದೆ. ಭಾರತವು ಕೃಷಿಯ ಜೊತೆಗೆ ಮೀನುಗಾರಿಕೆ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದೆ ಎಂದು ರಾಷ್ಟ್ರಪತಿಗಳು ವಿವರಿಸಿದರು.
ಹಾಲು ಮತ್ತು ಉತ್ಪಾದನಾ ಕ್ಷೇತ್ರದಲ್ಲಿಯೂ ಭಾರತ ಮುನ್ನಡೆ ಸಾಧಿಸಿದ್ದು, ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ರಾಷ್ಟ್ರಗಳಲ್ಲಿ ಒಂದಾಗಿದೆ . ಸಹಕಾರಿ ಚಳುವಳಿಯ ಬಲವೇ ಈ ಯಶಸ್ಸಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.
ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದಲ್ಲಿ 100 ಕೋಟಿ ಜನರು ಉಚಿತ ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಆಸ್ಪತ್ರೆಗಳು, ವೈದ್ಯಕೀಯ ಮೂಲಸೌಕರ್ಯ ಮತ್ತು ಆರೋಗ್ಯ ವಿಮೆ ಯೋಜನೆಗಳು ವಿಸ್ತರಿಸಲಾಗುತ್ತಿವೆ ಎಂದು ತಿಳಿಸಿದರು.
ಗ್ರಾಮೀಣ ಮತ್ತು ಮೂಲಸೌಕರ್ಯ ಅಭಿವೃದ್ಧಿ: ಗ್ರಾಮೀಣ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವಾಗಿಸಲು ಸರ್ಕಾರವು ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ ವರ್ಷದಲ್ಲಿ ಮಾತ್ರವೇ ಸುಮಾರು 18,000 ಕಿ.ಮೀ. ಹೊಸ ಗ್ರಾಮೀಣ ರಸ್ತೆ ನಿರ್ಮಾಣವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಬಡವರಿಗಾಗಿ ವಸತಿ ಮತ್ತು ನೀರಿನ ಯೋಜನೆಗಳು : ಕಳೆದ ದಶಕದಲ್ಲಿ ಬಡವರಿಗಾಗಿ 4 ಕೋಟಿ ಪಕ್ಕಾ ಮನೆಗಳು ನಿರ್ಮಿಸಲ್ಪಟ್ಟಿದ್ದು, ಕಳೆದ ವರ್ಷ ಮಾತ್ರವೇ 32 ಲಕ್ಷ ಹೊಸ ಮನೆಗಳು ಒದಗಿಸಲಾಗಿದೆ ಎಂದು ಮುರ್ಮು ಮಾಹಿತಿ ನೀಡಿದರು. ಜಲ ಜೀವನ್ ಮಿಷನ್ ಮೂಲಕ ಕೋಟ್ಯಂತರ ಕುಟುಂಬಗಳಿಗೆ ಪೈಪ್ ನೀರಿನ ಸೌಲಭ್ಯ ದೊರೆತಿದ್ದು, ಗ್ರಾಮೀಣ ಬದುಕಿನಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದರು.
ಭಾರತ ಜಾಗತಿಕ ಅಭಿವೃದ್ಧಿಯತ್ತ ವೇಗ : ಕೃಷಿ, ಮೀನುಗಾರಿಕೆ, ಆರೋಗ್ಯ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿರುವ ಈ ದಾಖಲೆ ಬೆಳವಣಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಸಹಕಾರಿಯಾಗಿದೆ ಎಂದು ರಾಷ್ಟ್ರಪತಿ ಮುರ್ಮು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…