Advertisement
MIRROR FOCUS

ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲೆ – ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಬಹಿರಂಗವಾದ ಅಚ್ಚರಿಯ ಜೀವ ವೈವಿಧ್ಯ

Share

ಜಿರಳೆ ಎಂದರೆ ಸಾಮಾನ್ಯವಾಗಿ ಮನೆಯಲ್ಲಿರುವ ಕೀಟ ಎನ್ನುವ ಕಲ್ಪನೆ ಹಲವರದ್ದು. ಆದರೆ ಭಾರತದಲ್ಲಿ ಈಗಾಗಲೇ 191 ವಿಭಿನ್ನ ಜಾತಿಯ ಜಿರಳೆಗಳು ದಾಖಲಾಗಿರುವುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. Zoological Survey of India (ZSI) ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಭಾರತದ ಜಿರಳೆಗಳ ವೈವಿಧ್ಯ ನಿರೀಕ್ಷೆಗಿಂತ ಬಹಳ ದೊಡ್ಡದಾಗಿದೆ.

ಇತ್ತೀಚೆಗೆ ವಿಜ್ಞಾನಿಗಳು Neoloboptera peninsularis ಎಂಬ ಹೊಸ ಜಿರಳೆ ಜಾತಿಯನ್ನು ಮಹಾರಾಷ್ಟ್ರದ ಪುಣೆ ಸಮೀಪ ಪತ್ತೆಹಚ್ಚಿದ್ದರು. DNA barcoding ಹಾಗೂ phylogenetic analysis ಬಳಸಿ ಭಾರತದಲ್ಲಿ ಮೊದಲ ಬಾರಿಗೆ ಈ ರೀತಿಯ ಆಧುನಿಕ ವಿಧಾನದಿಂದ ಹೊಸ ಜಾತಿ ಗುರುತಿಸಲಾಗಿದೆ. ಈ ಹೊಸ ಪತ್ತೆಯೊಂದಿಗೆ ದೇಶದಲ್ಲಿ ದಾಖಲಾಗಿರುವ ಜಿರಳೆ ಜಾತಿಗಳ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.

ZSI ವಿಜ್ಞಾನಿಗಳು ಭಾರತದಲ್ಲಿನ ಜಿರಳೆಗಳಿಗೆ ದೇಶದ ಮೊದಲ ದೊಡ್ಡ DNA ಬಾರ್‌ಕೋಡ್ ಉಲ್ಲೇಖ ಗ್ರಂಥಾಲಯ ಕೂಡ ಅಭಿವೃದ್ಧಿಪಡಿಸಿದ್ದಾರೆ. 100ಕ್ಕೂ ಹೆಚ್ಚು DNA ಬಾರ್‌ಕೋಡ್ ಸಂಗ್ರಹಿಸಿ ಹಲವು ಅಪರೂಪದ ಹಾಗೂ ಭಾರತಕ್ಕೇ ಸೀಮಿತವಾದ ಜಾತಿಗಳನ್ನು ಗುರುತಿಸಲಾಗಿದೆ ಎಂದು ಅಧ್ಯಯನ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವಿಜ್ಞಾನಿಗಳ ಪ್ರಕಾರ, ಎಲ್ಲಾ ಜಿರಳೆಗಳೂ ಹಾನಿಕಾರಕವಲ್ಲ. ಬಹುತೇಕ ಕಾಡು ಜಾತಿಯ ಜಿರಳೆಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಎಲೆ, ಸಾವಯವ ತ್ಯಾಜ್ಯಗಳ ವಿಲೇವಾರಿ ಮಾಡಿ ಮಣ್ಣಿನ ಪೋಷಕಾಂಶ ಚಕ್ರದಲ್ಲಿ ಸಹಕಾರಿಯಾಗುತ್ತವೆ. ಕೆಲವು ಜಾತಿಗಳು ಪರಿಸರ ಆರೋಗ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಭಾರತದಲ್ಲಿ ಕಂಡುಬರುವ ಕೆಲವು ಜಿರಳೆ ಜಾತಿಗಳು ಅತಿ ವಿಶಿಷ್ಟವಾಗಿವೆ. ದಕ್ಷಿಣ ಭಾರತದಲ್ಲಿ ಕಂಡುಬರುವ “Indian Domino Cockroach” (Therea petiveriana) ತನ್ನ ಸುಂದರ ಕಪ್ಪು-ಬಿಳಿ ಚುಕ್ಕೆಗಳಿಂದ ವಿಶ್ವದ ಗಮನ ಸೆಳೆದಿದೆ.

ಜೀವ ವೈವಿಧ್ಯ ಅಧ್ಯಯನದಲ್ಲಿ DNA ಆಧಾರಿತ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವುದು, ಭಾರತದಲ್ಲಿನ ಇನ್ನಷ್ಟು ಅಪರೂಪದ ಕೀಟ ಜಾತಿಗಳ ಪತ್ತೆಗೆ ದಾರಿ ಮಾಡಿಕೊಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

India now has 191 recorded cockroach species, according to recent studies by the Zoological Survey of India. Scientists also developed the country’s first large-scale DNA barcode library for cockroaches, uncovering several endemic and previously undocumented species.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ – ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ

ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…

14 hours ago

ಹವಾಮಾನ ವರದಿ | 20-10-2026 | ಅ.25ರವರೆಗೆ ಮಳೆ ಸಾಧ್ಯತೆ ; ಅ.26 ರಿಂದ ತಾತ್ಕಾಲಿಕ ಬಿಡುವು?

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…

1 day ago

ರಾವಣನನ್ನು ಸಂಹರಿಸುವುದಕ್ಕಿಂತ ನಮ್ಮೊಳಗಿನ ರಾವಣನನ್ನು ಗೆಲ್ಲುವುದು ಮುಖ್ಯ..!

ಮಹಾನವಮಿಯ ನಿಜವಾದ ಸಂದೇಶವೆಂದರೆ ರಾವಣ ಮತ್ತು ಮಹಿಷಾಸುರರ ಸಂಹಾರವನ್ನು ಸ್ಮರಿಸುವುದಷ್ಟೇ ಅಲ್ಲ, ನಮ್ಮೊಳಗಿನ…

2 days ago

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ

ಮಿಜೋರಾಂನಲ್ಲಿ ಅಡಿಕೆ ತೋಟಗಳಿಗೆ ಕಾಡುತ್ತಿರುವ ಕೀಟಬಾಧೆ ನಿಯಂತ್ರಿಸಲು ವೈಜ್ಞಾನಿಕ ಕ್ರಮಗಳು ಮತ್ತು ಆರ್ಥಿಕ…

2 days ago

ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೆಸ್ಕಾಂ ವತಿಯಿಂದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತು ಸಾರ್ವಜನಿಕರಿಗೆ…

2 days ago

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ

ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರವು 29 ರಾಜ್ಯ ಜೀವ ವೈವಿಧ್ಯ ಮಂಡಳಿಗಳು ಮತ್ತು…

2 days ago