Advertisement
The Rural Mirror ವಾರದ ವಿಶೇಷ

ಭಾರತವು ಅಪಾಯಕಾರಿ ಕಳೆನಾಶಕ ಏಕೆ ನಿಷೇಧಿಸಬೇಕು ? | ಡೌನ್‌ ಟು ಅರ್ಥ್‌ ವಿಶೇಷ ವರದಿಯಲ್ಲಿ ಹೇಳಿದೆ |

Share

ಗ್ಲೈಫೋಸೇಟ್ ಸಸ್ಯನಾಶಕ ಮತ್ತು ಅದರ ಉತ್ಪನ್ನಗಳ ಬಳಕೆಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಈಚೆಗೆ ನಿರ್ಬಂಧ ಹೇರಿದೆ. ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳುಂಟಾಗಬಹುದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಅಪಾಯವುಂಟಾಗಬಹುದು ಎಂಬ ಭೀತಿಯಿಂದ ಸರ್ಕಾರ ಈ ನಿರ್ಬಂಧ ಹೇರಿದೆ. ಆದರೆ ಇದನ್ನು ಜಾಗತಿಕ ಅಧ್ಯಯನಗಳು ಮತ್ತು ನಿಯಂತ್ರಕ ಸಂಸ್ಥೆಗಳ ಅನುಮೋದನೆಗಳನ್ನು ಉಲ್ಲೇಖಿಸಿ ಉದ್ಯಮ ಸಂಘ, ಆಗ್ರೋ-ಕೆಮಿಕಲ್ ಫೆಡರೇಶನ್ ಆಫ್ ಇಂಡಿಯಾ(AGFI) ವಿರೋಧಿಸಿದೆ.

ಗ್ಲೈಫೋಸೇಟ್ ಮತ್ತು ಅದರ ಸಂಯೋಜನೆಗಳನ್ನು ವ್ಯಾಪಕವಾಗಿ ನೋಂದಾಯಿಸಲಾಗಿದ್ದು, ಪ್ರಸ್ತುತ ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಸೇರಿದಂತೆ 160ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜಗತ್ತಿನಾದ್ಯಂತ ರೈತರು ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸುರಕ್ಷಿತ ಮತ್ತು ಪರಿಣಾಮಕಾರಿ ಕಳೆ ನಿಯಂತ್ರಕವಾಗಿ ರೈತರು ಬಳಸುತ್ತಿದ್ದಾರೆ.
ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಕೀಟ ನಿಯಂತ್ರಣ ನಿರ್ವಾಹಕರನ್ನು (PCOs) ಹೊರತುಪಡಿಸಿ ಬೇರೆ ಯಾರೂ ಗ್ಲೈಫೋಸೇಟ್ ಬಳಸಬಾರದು ಎಂದು ಕೃಷಿ ಸಚಿವಾಲಯವು  ಅಕ್ಟೋಬರ್ 25 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ ಡೌನ್‌ ಟು ಅರ್ಥ್‌ ತನ್ನ ವಿಶೇಷ ವರದಿಯಲ್ಲಿ  ಉಲ್ಲೇಖಿಸಿದೆ,  ಭಾರತವು ಅಪಾಯಕಾರಿ ಕಳೆನಾಶಕ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸದೆ  ನಿಷೇಧಿಸಬೇಕು ಏಕೆ ಎಂದು ವಿವರಿಸಿದೆ. ಡೌನ್‌ ಟು ಅರ್ಥ್‌ ಪರಿಸರ ಪರವಾಗಿ, ಕೃಷಿ ಪರವಾಗಿ ಧ್ವನಿ ಎತ್ತುತ್ತಿರುವ ಪತ್ರಿಕೆಯಾಗಿದೆ. ಈ ಹಿಂದೆ ಎಂಡೋಸಲ್ಫಾನ್‌ ಬಗ್ಗೆ ಸಮಗ್ರವಾದ ವರದಿ ಪ್ರಕಟ ಮಾಡಿತ್ತು.

ಕೀಟನಾಶಕ ಕಾಯಿದೆ, 1968 ರ ಅಡಿಯಲ್ಲಿ ಸ್ಥಾಪಿಸಲಾದ ತಜ್ಞರ ಸಮಿತಿಯ ವರದಿ ಮತ್ತು ನೋಂದಣಿ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ಗ್ಲೈಫೋಸೇಟ್ ಬಳಕೆಯನ್ನು ನಿರ್ಬಂಧಿಸಿದೆ. ಭಾರತದಲ್ಲಿ ಸುಮಾರು 35 ಬ್ರಾಂಡ್‌ಗಳ ಗ್ಲೈಫೋಸೇಟ್ ಲಭ್ಯವಿದೆ ಎಂದು ಕೀಟನಾಶಕ ಆಕ್ಷನ್ ನೆಟ್‌ವರ್ಕ್ ವರದಿ ಹೇಳಿದೆ.

ಭಾರತದಲ್ಲಿ, ಕಳೆಗಳ ನಿಯಂತ್ರಣಕ್ಕಾಗಿ ಗ್ಲೈಫೋಸೇಟ್ ಬಳಕೆಯನ್ನು ಚಹಾ ಬೆಳೆ ಮತ್ತು ಬೆಳೆಯೇತರ ಪ್ರದೇಶಗಳಿಗೆ ಮಾತ್ರ ಅನುಮೋದಿಸಲಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಭಾರತದ ಪ್ರಮುಖ ಚಹಾ ತೋಟದ ರಾಜ್ಯಗಳಾಗಿವೆ. ಆದರೆ  ಚಹಾ ಬೆಳೆಗಳನ್ನು ಹೊಂದಿರದ ರಾಜ್ಯಗಳಲ್ಲಿ ಬಳಕೆ ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಉದಾಹರಣೆಗೆ, 2020-21ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗ್ಲೈಫೋಸೇಟ್  ಬಳಕೆಯು ಉತ್ತರ ಪ್ರದೇಶದಲ್ಲಿ ಬಳಕೆಯಾಗಿದೆ. ನಂತರ ಗುಜರಾತ್ , ಜಮ್ಮು ಮತ್ತು ಕಾಶ್ಮೀರ , ತಮಿಳುನಾಡು. ಅಸ್ಸಾಂ , ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಳಕೆ ಇದೆ.

ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ರೈತರು 2017 ರಲ್ಲಿ ಪ್ಯಾನ್ ಇಂಡಿಯಾದ ಕ್ಷೇತ್ರ ಅಧ್ಯಯನದ ಸಮಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರ ಬೆಳೆಗಳಲ್ಲಿ ಅದರಲ್ಲೂ ಮುಖ್ಯವಾಗಿ 16 ಆಹಾರ ಬೆಳೆಗಳಲ್ಲಿ ಗ್ಲೈಫೋಸೇಟ್ ಅನ್ನು ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಕೇರಳ ಸರ್ಕಾರವು ಜೂನ್ 20, 2019 ರಂದು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಗ್ಲೈಫೋಸೇಟ್ (ಕಳೆನಾಶಕ) ಅನ್ನು ರೈತರು ಭತ್ತದ ಗದ್ದೆಗಳಲ್ಲಿ ವ್ಯಾಪಕವಾಗಿ ಮತ್ತು ವಿವೇಚನೆಯಿಲ್ಲದೆ ಬಳಸುತ್ತಿರುವ ಬಗ್ಗೆ ವರದಿ ಮಾಡಿದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಕೀಟನಾಶಕಗಳು ತೋರಿಸುತ್ತವೆ ಎಂದೂ ಕೇರಳದ ಕೃಷಿ ವಿಶ್ವವಿದ್ಯಾಲಯದ ಅಧ್ಯಯನ ವರದಿಯನ್ನು ಉಲ್ಲೇಖಿಸಿದೆ.

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎನ್ನುವ ಸಂಸ್ಥೆ 2015 ರಲ್ಲಿ ಗ್ಲೈಫೋಸೇಟ್ ಕಾರ್ಸಿನೋಜೆನಿಕ್‌ ಎಂದು ಹೇಳಿದೆ. ಯುರೋಪಿಯನ್ ಕೆಮಿಕಲ್ ಏಜೆನ್ಸಿಯು ಗ್ಲೈಫೋಸೇಟ್ ಕಣ್ಣುಗಳಿಗೆ  ಹಾನಿಯನ್ನುಂಟು ಮಾಡುತ್ತದೆ ಎಂದು ಕಂಡುಹಿಡಿದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಅಧ್ಯಯನವು ಪಿಟ್ಯುಟರಿ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಗ್ಲೈಫೋಸೇಟ್‌ಗೆ ಅಡ್ಡಿಪಡಿಸುತ್ತದೆ ಎಂದು ವರದಿಯಲ್ಲಿ ಹೇಳಿದೆ.

ಈಗಾಗಲೇ ಸುಮಾರು 35 ಕ್ಕೂ ಹೆಚ್ಚು ದೇಶಗಳಲ್ಲಿ ಗ್ಲೈಫೋಸೇಟ್ ಅನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಫ್ರಾನ್ಸ್, ಕೊಲಂಬಿಯಾ, ಕೆನಡಾ, ಇಸ್ರೇಲ್ ಮತ್ತು ಅರ್ಜೆಂಟೀನಾ ಮತ್ತು ಆರು ಭಾರತೀಯ ರಾಜ್ಯಗಳು ಸೇರಿವೆ.

ಆದರೆ ಭಾರತವು ಈಗ ಕೀಟ ನಿಯಂತ್ರಣ ನಿರ್ವಾಹಕರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಗ್ಲೈಫೋಸೇಟ್ ಬಳಸಬಾರದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.  ಆದರೆ, ಆ ಕೀಟ ನಿಯಂತ್ರಣ ನಿರ್ವಾಹಕರು ಯಾರು ಮತ್ತು ಈ ನಿಯಮವನ್ನು ಕಾರ್ಯಗತಗೊಳಿಸುವ ವಿಧಾನ ಏನು ಎಂಬುದು ಸ್ಪಷ್ಟವಾಗಿಲ್ಲ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

3 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

14 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

23 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

1 day ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago