#IndianEconomy | 2075 ರೊಳಗೆ ಭಾರತವೇ ಶ್ರೀಮಂತ ದೇಶ | ಜಪಾನ್, ಜರ್ಮನಿ, ಅಮೆರಿಕವನ್ನೂ ಹಿಂದಿಕ್ಕಲಿದೆ ಭಾರತ – ಗೋಲ್ಡ್​ಮನ್ ಸ್ಯಾಕ್ಸ್ ಅಭಿಪ್ರಾಯ |

July 11, 2023
12:58 PM
2075ಕ್ಕೆ ಭಾರತದ ಆರ್ಥಿಕತೆ 52.5 ಟ್ರಿಲಿಯನ್ ಡಾಲರ್​ನಷ್ಟು ಬೃಹತ್ ಆಗಿ ಬೆಳೆದಿರುತ್ತದೆ, ಆ ಸಂದರ್ಭ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಅಂದಾಜು ಮಾಡಿದೆ.

ಭಾರತ ಅನಾದಿ ಕಾಲದಿಂದಲೂ ಶ್ರೀಮಂತ ದೇಶ. ಆದರೆ ಅಮೇರಿಕ, ಜಪಾನ್, ಜರ್ಮ‍ನಿ ಸೂಪರ್ ಪವರ್ ದೇಶಗಳು. ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳು ಎಂದು ಹೇಳುತ್ತಾರೆ. ಈಗ ಪರಿಸ್ಥಿತಿ ಹಾಗಿಲ್ಲ. ಇನ್ನು ಐದು ದಶಕದಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ವಿಶ್ವದ ಪ್ರಮುಖ ಹೂಡಿಕೆ ಬ್ಯಾಂಕ್ ಎನಿಸಿದ ಗೋಲ್ಡ್​ಮನ್ ಸ್ಯಾಕ್ಸ್ #GoldmanSachs ಅಭಿಪ್ರಾಯಪಟ್ಟಿದೆ.

2075ಕ್ಕೆ ಭಾರತದ ಆರ್ಥಿಕತೆ #IndianEconomy 52.5 ಟ್ರಿಲಿಯನ್ ಡಾಲರ್​ನಷ್ಟು ಬೃಹತ್ ಆಗಿ ಬೆಳೆದಿರುತ್ತದೆ ಎಂದು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಅಂದಾಜು ಮಾಡಿದೆ. ಸದ್ಯ ಭಾರತದ ಆರ್ಥಿಕತೆ 3 ಟ್ರಿಲಿಯನ್ ಡಾಲರ್​ಗಿಂತ ತುಸು ಹೆಚ್ಚು ಇದೆ. ಐವತ್ತು ವರ್ಷದಲ್ಲಿ ಆರ್ಥಿಕತೆ 17 ಪಟ್ಟು ಹೆಚ್ಚು ಬೆಳೆಯುತ್ತದೆ. 52.5 ಟ್ರಿಲಿಯನ್ ಡಾಲರ್ ಎಂದರೆ ಸುಮಾರು 4,325 ಲಕ್ಷ ಕೋಟಿ ರೂಪಾಯಿ ಆಗುತ್ತದೆ.

ಮೊನ್ನೆ ಇನ್ವೆಸ್ಕೋ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಜಗತ್ತಿನ ಹೂಡಿಕೆದಾರರಿಗೆ ಭಾರತವೇ ಆದ್ಯತಾ ದೇಶವಾಗಿದೆ. 85 ಸಾವರೀನ್ ವೆಲ್ತ್ ಫಂಡ್ ಮತ್ತು 57 ಸೆಂಟ್ರಲ್ ಬ್ಯಾಂಕುಗಳು ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೂಡಿಕೆದಾರರು ಚೀನಾಗಿಂತ ಭಾರತದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ.

(ಕೃಪೆ : ಅಂತರ್ಜಾಲ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?
September 6, 2026
12:28 PM
by: ದ ರೂರಲ್ ಮಿರರ್.ಕಾಂ
ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ
ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror