Advertisement
MIRROR FOCUS

ಮಧುಮೇಹಕ್ಕೆ ಗೋವಿನ ಔಷಧಿ | ದಿವ್ಯ ಔಷಧಿ ತಯಾರಿಸಿದ ಗೋಪ್ರೇಮಿ |

Share

ಮಧುಮೇಹ ಇಂದು ಹೆಚ್ಚಾಗಿ ಕಂಡುಬರುವ ಸಮಸ್ಯೆ. ಈ ಸಮಸ್ಯೆಗೆ ಗೋವಿನ ಔಷಧಿಯನ್ನು ತಯಾರಿಸಿದ ಗೋಪ್ರೇಮಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹತ್ತಾರು ಮಂದಿ ಈಗ ಗೋವಿನ ಔಷಧಿಯತ್ತ ಮುಖ ಮಾಡಿದ್ದಾರೆ. ಮಧುಮೇಹ, ಕಿಡ್ನಿ ಸ್ಟೋನ್‌ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗೋ ಆಧಾರಿತ ಪರಿಹಾರವನ್ನು ಕಂಡಿದ್ದಾರೆ. ಈಗ ಸುಮಾರು 8 ಬಗೆಯ ಔಷಧಿಯನ್ನು ಗೋವಿನ ಮೂಲದಿಂದ ತಯಾರು ಮಾಡಿದ್ದಾರೆ.

ದೇಸೀ ಗೋವು ಎಂದರೆ ಅತ್ಯಂತ ಔಷಧೀಯ ಗುಣವುಳ್ಳ ತಳಿ ಎಂದು ಅನೇಕ ಸಮಯಗಳಿಂದ ಕೇಳಿ ಬರುತ್ತಿದೆ. ಹಲವಾರು ಮಂದಿ ಗೋ ಅರ್ಕ ತಯಾರು ಮಾಡುತ್ತಾರೆ. ದೇಸೀ ತಳಿಯ ಹಾಲು, ಮೊಸರು, ಮಜ್ಜಿಗೆ, ತುಪ್ಪವು ಅತ್ಯಂತ ಔಷಧಿ ಗುಣವುಳ್ಳದ್ದು ಎಂದು ಹೇಳುತ್ತಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಸುಬ್ರಹ್ಮಣ್ಯ ಪ್ರಸಾದ್‌ ನೆಕ್ಕರಕಳೆಯ ಅವರು ಸುಮಾರು 16 ವರ್ಷಗಳಿಂದ ಗೋ ಆಧಾರಿತವಾದ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದಾರೆ. ಗೋಪ್ರೇಮಿಯೂ ಆಗಿರುವ ಅವರು ಸುಮಾರು 20 ಕ್ಕೂ ಅಧಿಕ ಗೋವುಗಳನ್ನು ಸಾಕುತ್ತಿದ್ದಾರೆ. ಅದರ ಸೆಗಣಿಯಿಂದ ಗೊಬ್ಬರ ತಯಾರಿ, ಗೋಮೂತ್ರದಿಂದ ಕ್ರಿಮಿನಾಶಕ ತಯಾರು ಮಾಡುತ್ತಿದ್ದರು. ಇದೀಗ ಕೆಲವು ವರ್ಷಗಳಿಂದ ವಿವಿಧ ಆಯುರ್ವೇದ ಔಷಧಿಯನ್ನು ಸಣ್ಣ ಪ್ರಮಾಣದಲ್ಲಿ ತಾವೇ ತಯಾರು ಮಾಡುತ್ತಿದ್ದಾರೆ. ಗೋವಿನ ಸೆಗಣಿ, ಮೂತ್ರ, ಹಾಲು, ಮೊಸರು, ಮಜ್ಜಿಗೆ, ತುಪ್ಪವನ್ನು ಮೌಲ್ಯವರ್ಧನೆ ಮಾಡುವುದರ ಜೊತೆಗೆ ಆಯುರ್ವೇದ ಸಸ್ಯಗಳನ್ನು ಬಳಕೆ ಮಾಡಿ ಔಷಧಿಯನ್ನೂ ತಯಾರು ಮಾಡುತ್ತಿದ್ದಾರೆ.

ಸುಬ್ರಹ್ಮಣ್ಯ ಪ್ರಸಾದ್‌, ನೆಕ್ಕರಕಳೆಯ

ವಿಶೇಷವಾಗಿ ಕ್ಷೀರಬಲ ತೈಲ  ಸೇರಿದಂತೆ ವಿವಿಧ ತೈಲಗಳ ತಯಾರಿಕೆ ಮಾಡುತ್ತಾರೆ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಅದೇ ಮಾದರಿಯಲ್ಲಿ ಔಷಧಿಗಳನ್ನು ತಯಾರು ಮಾಡುತ್ತಿದ್ದಾರೆ. ಸುಮಾರು 800 ಬಗೆಯ ಔಷಧೀಯ ಸಸ್ಯಗಳನ್ನು ಗೋ ಉತ್ಪನಗಳೊಂದಿಗೆ ಸೇರಿಸಿ ಔಷಧಿ ತಯಾರಿಸಬಹುದಾಗಿದೆ ಎಂದು ಸುಬ್ರಹ್ಮಣ್ಯ ಪ್ರಸಾದ್‌ ಹೇಳುತ್ತಾರೆ. ಸದ್ಯ 8-10 ಬಗೆಯ ಆಯುರ್ವೇದ ಔಷಧಿಗಳನ್ನು ತಯಾರು ಮಾಡುವ ಸುಬ್ರಹ್ಮಣ್ಯ ಪ್ರಸಾದ್‌ ಅವರು, ವಿಶೇಷವಾಗಿ ಮಧುಮೇಹಕ್ಕೆ, ಕಡ್ನಿಸ್ಟೋನ್‌ಗೆ, ಬೆನ್ನು ನೋವು ಸೇರಿದಂತೆ ದೀರ್ಘಕಾಲದ ನೋವುಗಳಿಗೆ ತೈಲ ಹಾಗೂ ಔಷಧಿಯನ್ನು ನೀಡುತ್ತಿದ್ದಾರೆ.ಈಗಾಗಲೇ ಹಲವಾರು ಮಂದಿ ಈ ಔಷಧಿ ಪಡೆದಿದ್ದಾರೆ. ಮಧುಮೇಹದಲ್ಲಿ ಸ್ಥಿರತೆಯನ್ನು ಕಂಡಿದ್ದಾರೆ. ಇದೆಲ್ಲವೂ ಗೋವಿನ ಉತ್ಪನ್ನವನ್ನು ಬಳಸಿಯೇ ತಯಾರು ಮಾಡುತ್ತಿದ್ದಾರೆ.ಇದೆಲ್ಲವೂ ಗೋವಿನ ಶಕ್ತಿ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದ್.

ಅಡಿಕೆ ಕೃಷಿಯ ಆಸಕ್ತಿ ಕೈಬಿಟ್ಟ ಸುಬ್ರಹ್ಮಣ್ಯ ಪ್ರಸಾದರು ತೋಟದಲ್ಲಿ ಹುಲ್ಲು, ಹಲಸಿನ ಗಿಡಗಳನ್ನು ನೆಟ್ಟಿದ್ದಾರೆ. ಒಂದು ಅಡಿಕೆ ಮರ ತನ್ನ ಜೀವಿತಾವಧಿಯಲ್ಲಿ 32 ಸಾವಿರ ರೂಪಾಯಿ ಆದಾಯ ಬರುತ್ತದೆಯಾದರೆ ಅಡಿಕೆ ಮರವನ್ನೇ ನೋಡಬೇಕಾ ಎನ್ನುವುದು ಅವರ ಪ್ರಶ್ನೆ. ಗೋವು ಹಾಗೂ ಗೋ ಉತ್ಪನಗಳ ತಯಾರು ಮಾಡುವುದು ಹೆಚ್ಚು ಸಮಾಧಾನ, ಖುಷಿ ತರುತ್ತದೆ ಎನ್ನುತ್ತಾರೆ ಸುಬ್ರಹ್ಮಣ್ಯ ಪ್ರಸಾದರು. ಗೋವು ಕೂಡಾ ಆದಾಯವೂ ನೀಡಬಲ್ಲಿದು, ನೆಮ್ಮದಿಯೂ ನೀಡಬಲ್ಲದು, ನಾವು ಈಗ ಅದರ ಆದಾಯದಿಂದಲೇ ಬದುಕುತ್ತಿದ್ದೇವೆ ಎನ್ನುತ್ತಾರೆ ಅವರು. (ಸಂಪರ್ಕ: ಸುಬ್ರಹ್ಮಣ್ಯ ಪ್ರಸಾದ್‌ : 9446282951 ) (ಸಂದರ್ಶನದ ವಿಡಿಯೋ ಇದೆ )

Subrahmanya Prasad Nekkarakaleya near Badiyadka in Kasaragod district has been manufacturing cow-based products for about 16 years. He is also a cow lover and keeps more than 20 cows. They have been preparing various Ayurvedic medicines themselves in small quantities for a few years now. Apart from adding value to cow dung, urine, milk, curd, buttermilk, ghee, Ayurvedic plants are also being used to prepare medicines.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

21 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

21 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

3 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

3 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

3 days ago