ಸರ್ಕಾರಿ ಹುದ್ದೆಗಳಿಗೆ ಹೋಗಲು ಇಚ್ಚಿಸುವವರಿಗೆ ಕೇಂದ್ರ ಸರಕಾರ ಸಿಹಿಸುದ್ದಿಯನ್ನು ನೀಡಿದೆ. ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಪರೀಕ್ಷಾ ತಯಾರಿಯ ಹಾದಿಯನ್ನು ಸುಲಭಗೊಳಿಸಿದೆ. ಸರಕಾರಿ ನೌಕರಿಗಳಿಗೆ ಇರುವ ಪ್ರವೇಶ ಪರೀಕ್ಷೆಗಳನ್ನು ಸಾರ್ವತ್ರಿಕ ಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನ ಸ್ಥಾಪಿಸಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಹೊಸದಾಗಿ ರಚಿಸಲಾದ ಸಂಸ್ಥೆಯು ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯಡಿ, ಸ್ಟಾಫ್ ಸೆಲೆಕ್ಶನ್ ಕಮಿಷನ್ (ಎಸ್ ಎಸ್ ಸಿ) ಮತ್ತು ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಮತ್ತು ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗಳನ್ನ ನಡೆಸಲಿದೆ. ಹೊಸ ನೇಮಕಾತಿ ಏಜೆನ್ಸಿಯನ್ನ ರಚಿಸಲು ಕೇಂದ್ರ ಸರ್ಕಾರ ₹1,517.57 ಕೋಟಿ ಮಂಜೂರು ಮಾಡಿದೆ.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಗಳ ಪ್ರಕಾರ, ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಿವಿಧ ಸಮಾನ ನೇಮಕಾತಿಯ ಜೊತೆಗೆ ಸರ್ಕಾರದ ಗ್ರೂಪ್-ಬಿ (ಗೆಜೆಟೆಡ್ ಅಲ್ಲದ), ಗ್ರೂಪ್-ಸಿ (ತಾಂತ್ರಿಕೇತರ) ಮತ್ತು ಕ್ಲರಿಕಲ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುತ್ತದೆ.
ಪದವಿ, ಹೈಯರ್ ಸೆಕೆಂಡರಿ (12ನೇ ಪಾಸ್) ಮತ್ತು ಮೆಟ್ರಿಕ್ಯುಲೇಟ್ (10ನೇ ಪಾಸ್) ಅಭ್ಯರ್ಥಿಗಳಿಗೆ ತಲಾ ಒಂದು ಪ್ರತ್ಯೇಕ ಸಿಇಟಿ ಇರುತ್ತದೆ. ‘ಈ ಪರೀಕ್ಷೆಯ ಪಠ್ಯಕ್ರಮ ವು ಸಾಮಾನ್ಯವಾಗಿರುತ್ತದೆ. ಪ್ರಸ್ತುತ ಪ್ರತಿ ಪರೀಕ್ಷೆಗೂ ಪ್ರತ್ಯೇಕವಾಗಿ ಸಿದ್ಧತೆ ನಡೆಸಲು ಅಗತ್ಯವಿರುವ ಅಭ್ಯರ್ಥಿಗಳ ಹೊರೆಯನ್ನ ಇದು ಕಡಿಮೆ ಮಾಡಲಿದೆ’ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅದರೊಂದಿಗೆ ಸಿಇಟಿ ಅಂಕ ಮಟ್ಟದಲ್ಲಿ ಮಾಡಿದ ಸ್ಕ್ರೀನಿಂಗ್ ಆಧಾರದ ಮೇಲೆ, ಆಯಾ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಯ ಪ್ರತ್ಯೇಕ ವಿಶೇಷ ಹಂತಗಳ (II, III ಇತ್ಯಾದಿ) ಮೂಲಕ ನೇಮಕಾತಿಗೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಹಾಗೂ ಸಿಇಟಿಯ ಅಂಕವು ಮೂರು ವರ್ಷಗಳ ಕಾಲ ಸಿಂಧುವಾಗಿರುತ್ತದೆ. ವಯೋಮಿತಿಯ ಮಿತಿಗೆ ಒಳಪಟ್ಟು ಸಿಇಟಿಯಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿ ಎಷ್ಟು ಪ್ರಯತ್ನ ಮಾಡಬೇಕು ಎಂಬ ಬಗ್ಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರವೇಶ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಹೆಚ್ಚು ಪ್ರಯಾಣ ಮಾಡುವ ಅಥವಾ ಪ್ರಯಾಸ ಪಡುವ ಅಗತ್ಯವಿರುವುದಿಲ್ಲ. ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಪರೀಕ್ಷೆಗಳನ್ನು ಆಯೋಜಿಸುವ ಯೋಜನೆಯನ್ನು ತರುವ ಆಲೋಚನೆ ಕೇಂದ್ರ ಸರ್ಕಾರದಾಗಿದೆ. ಅದರಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ವ್ಯಯಮಾಡುವ ಸಮಯ ಹಾಗೂ ಹಣ ಉಳಿಯುತ್ತದೆ. ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಕೇಂದ್ರಗಳನ್ನ ಆಯ್ಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಲಭ್ಯತೆ ಆಧರಿಸಿ ಅವರಿಗೆ ಕೇಂದ್ರ ಹಂಚಿಕೆ ಮಾಡಲಾಗುವುದು. ಇದರಿಂದ ಪ್ರತಿ ವರ್ಷ ಪರೀಕ್ಷೆ ಬರೆಯಲು ಸಾಕಷ್ಟು ಸಮಯ, ಹಣ, ಶ್ರಮ ವ್ಯಯಿಸುತ್ತ, ಅಭ್ಯರ್ಥಿಗಳ ಕಷ್ಟವನ್ನು ದೂರ ಮಾಡಲು ಸಾಧ್ಯವಾಗುತ್ತೆ ಎಂದು ಸಚಿವರು ತಿಳಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…