Advertisement
ಸುದ್ದಿಗಳು

ತಾಳೆ, ರೇಷ್ಮೆ ಹಾಗೂ ಗೇರುಕೃಷಿ ಕುರಿತು ಮಾಹಿತಿ

Share

ಸುಳ್ಯದಲ್ಲಿ ಮಡಪ್ಪಾಡಿಯಲ್ಲಿ ಕೃಷಿಕರಿಗೆ ತಾಳೆ, ರೇಷ್ಮೆ ಹಾಗೂ ಗೇರುಕೃಷಿ ಕುರಿತು ಮಾಹಿತಿಯನ್ನು ನೀಡಲಾಯಿತು.

ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಡಪ್ಪಾಡಿ,  ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) ಕೇಂದ್ರ ವಿಟ್ಲ ಹಾಗೂ  3F ಆಯಿಲ್ ಪಾಮ್ ಪ್ರೈ. ಲಿ., ದ. ಕ., ಉಡುಪಿ ಸಹಯೋಗ ದಲ್ಲಿ ಯುವಕ ಮಂಡಲ ಸಭಾಭವನದಲ್ಲಿ ಒಕ್ಕೂಟದ ಮಾಸಿಕ ಸಭೆ ಹಾಗೂ ಕೃಷಿಕರಿಗೆ ಕೃಷಿ ಮಾಹಿತಿ ನೀಡಲಾಯಿತು.

ತಾಳೆ ಕೃಷಿಯ ವಿಧಾನ, ಪೋಷಣೆ, ಕಂಪನಿ ನೀಡುವ ಸಹಕಾರ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯ ಗಳ ಕುರಿತು ಮಾಹಿತಿ ನೀಡಲಾಯಿತು. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ರೇಷ್ಮೆ ಹಾಗೂ ಗೇರುಕೃಷಿಯ ಕುರಿತು ಪ್ರಾಥಮಿಕ ಮಾಹಿತಿ ನೀಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೃಷಿಕರಿಗೆ ಸಿಗುವ ಸಬ್ಸಿಡಿ ಹಾಗೂ ಸೌಲಭ್ಯಗಳ ವಿಷಯ ತಿಳಿಸಲಾಯಿತು.

ಶ್ವೇತಾ ಅವರು ಸಂಜೀವಿನಿ ಯೋಜನೆಯ ಮೂಲಕ ಸ್ವ ಉದ್ಯೋಗ ಹಾಗೂ ತರಬೇತಿ ಅವಕಾಶ ಗಳ ಬಗ್ಗೆ ಮಾತನಾಡಿ, ಅಗತ್ಯವಿದ್ದರೆ ಬೇಡಿಕೆ ಸಲ್ಲಿಸಲು ಹೇಳಿದರು. ಲೋಕೋಸ್ ಐಡಿ ಪ್ರಾಮುಖ್ಯತೆ ಹಾಗೂ ಸಂಜೀವಿನಿ ಸಂಘದ ಸದಸ್ಯತ್ವದ ಮೂಲಕ ಸಿಗುವ ಹಲವಾರು ಸೌಲಭ್ಯಗಳ ಜೊತೆಗೆ 3 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲ ಪಡೆಯಬಹುದೆಂದು ಹೇಳಿದರು.

ಇದೇ ವೇಳೆ  MSME, FSSAI ಮತ್ತು ಸ್ವ ಸಹಾಯ ಸಂಘ ಸದಸ್ಯೆಯರಿಗೆ ಸಂಜೀವಿನಿ ಮೂಲಕ ಸಿಗುವ ಉತ್ತೇಜನಗಳ ವಿಷಯ ತಿಳಿಸಲಾಯಿತು. ಯಾವುದೇ ಕೃಷಿ ಸಂಬಂಧಿತ ಮಾಹಿತಿ ಅಥವಾ ತರಬೇತಿ ಅಗತ್ಯವಿದ್ದಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಅವಕಾಶವಿದೆ ಎಂದು ತಿಳಿಸಲಾಯಿತು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಾಣಿ ಎಂ.ಸಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ ಹೆಚ್, ಎನ್.ಆರ್.ಎಲ್.ಎಂ. ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ತಾಳೆ ಕೃಷಿ ಕ್ಲಸ್ಟರ್ ಸೂಪರ್ವೈಸರ್ ರವಿಶಂಕರ, ಕೃಷ್ಣ ವೈ.ಟಿ (ಉಡುಪಿ, ದ.ಕ. ಏರಿಯಾ ಮ್ಯಾನೇಜರ್ – 3F ಆಯಿಲ್ ಪಾಮ್ ಪ್ರೈ. ಲಿ.) ಹಾಗೂ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ), ತಾಳೆ ಕೃಷಿಕೆ ಚಂದ್ರಮತಿ ಪಿ. ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕರು ಅವಿನಾಶ್, ಬ್ಲಾಕ್ ಮ್ಯಾನೇಜರ್ ಮೇರಿ, ಎಂ.ಬಿ.ಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶುಸಖಿ, ಬಿ.ಸಿ ಸಖಿ, ಪದಾಧಿಕಾರಿಗಳು, ಸದಸ್ಯೆಯರು, ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

10 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

11 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

11 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

11 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago