ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು ವಿವಿಧ ರಾಜ್ಯಗಳ ಮುಖಂಡರು ಮತ್ತು ರೈತರೊಂದಿಗೆ ಚರ್ಚೆ ನಡೆಸಿದರು.ಈ ಸಂದರ್ಭ ಕೃಷಿ ಲಾಭದಾಯಕವಾಗಿಸಲು ” ಮಾದರಿ ತೋಟ” ಸರ್ಕಾರ ರಚಿಸುವ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದು ರೈತರು ಸಲಹೆ ನೀಡಿದರು.
ರೈತರು ಮತ್ತು ಕೃಷಿ ಸಂಸ್ಥೆಗಳೊಂದಿಗೆ ಸಂವಾದದಲ್ಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರೈತರು ಸಲಹೆಗಳನ್ನು ನೀಡಿದರು. ಒಂದರಿಂದ ಎರಡೂವರೆ ಎಕರೆ ಭೂಮಿಯಲ್ಲಿಯೂ ಕೃಷಿಯನ್ನು ಲಾಭದಾಯಕವಾಗಿ ಮಾಡುವ ಮಾರ್ಗಗಳ ಕುರಿತು ಮಾಹಿತಿ ನೀಡುವ ಮಾದರಿ ಕೃಷಿಯನ್ನು ರಚಿಸಲು ರೈತರು ಸರ್ಕಾರಕ್ಕೆ ಸಲಹೆ ನೀಡಿದರು. ಇದೇ ವೇಳೆ ರೈತರು ಒಂದು ಎಕರೆ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡುವ ಕೆಲವು ಉದಾಹರಣೆಗಳನ್ನುವಿವರಿಸಿದರು.
ಸಕಾಲದಲ್ಲಿ ನೀರು ಒದಗಿಸುವುದು, ರಸಗೊಬ್ಬರಗಳ ಬಳಕೆ, ಮಣ್ಣನ್ನು ಆರೋಗ್ಯಕರವಾಗಿಸುವುದು, ನೈಸರ್ಗಿಕ ವಿಕೋಪಗಳಿಂದಾಗುವ ತೊಂದರೆಗಳು, ಸಕ್ಕರೆ ಕಾರ್ಖಾನೆಗಳ ಮುಚ್ಚುವಿಕೆ ಮತ್ತು ಬೀದಿ ಪ್ರಾಣಿಗಳ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಸರ್ಕಾರ ಅಥವಾ ಇಲಾಖೆಗಳು ಸರಿಯಾದ ಮಾಹಿತಿಯನ್ನು ಕೃಷಿಕರಿಗೆ ನೀಡದೇ ಇದ್ದರೆ ಯಾರೋ ಮದ್ಯರ್ತಿಗಳು, ಕೆಲವು ನಕಲಿ ಕಂಪನಿಗಳು ರೈತರ ದಾರಿ ತಪ್ಪಿಸಿ ಗೊಬ್ಬರ ಮಾರಾಟ ಮಾಡುತ್ತವೆ ಎಂದೂ ಸಚಿವರು ಬಳಿ ಮನವಿ ಮಾಡಿಕೊಂಡರು. ಅದಕ್ಕಾಗಿ ವಿವಿಧ ಸಂಸ್ಥೆಗಳ ಮೂಲಕ ಕಾಲಕಾಲಕ್ಕೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ರೈತರು ಸಲಹೆ ನೀಡಿದರು. ಈ ಸಂದರ್ಭ ರಾಬಿ ಬೆಳೆಗಳ MSP ಹೆಚ್ಚಿಸುವ ಕುರಿತು ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…