Advertisement
MIRROR FOCUS

ಉಪಗ್ರಹ ಉಡಾವಣೆ ಜೊತೆಗೆ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ಯಶಸ್ವಿ | ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಚಂದ್ರಯಾನ-3 ಪ್ರೊಪಲ್ಷನ್‌ ಮಾಡ್ಯೂಲ್‌ |

Share

ನಮ್ಮ ಹೆಮ್ಮೆಯ ಇಸ್ರೋ(ISRO) ಯಾವುದರಲ್ಲೂ ಕಡಿಮೆ ಇಲ್ಲ. ದಿನದಿಂದ ದಿನಕ್ಕೆ ತನ್ನ ಸಾಧನೆಯನ್ನು ಹೆಚ್ಚಿಸುತ್ತಾ ಸಾಗುತ್ತಿದೆ. ಹಾಗೆ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್‌ ಮಾಡ್ಯೂಲ್‌ (Propulsion Module) ಅನ್ನು ಚಂದ್ರನ ಕಕ್ಷೆಯಿಂದ(Moon orbit) ಭೂಮಿಯ ಕಕ್ಷೆಗೆ(Earth Orbit) ಇಸ್ರೋ ಯಶಸ್ವಿಯಾಗಿ ಮರಳಿ ತರಲಿದೆ. ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್‌ ಮಾಡ್ಯೂಲ್‌ ಅನ್ನು ಚಂದ್ರನಿಂದ(Moon) ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ(Satellite) ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಜು.14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆ.23 ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಐತಿಹಾಸಿಕ ಸಾಧನೆ ಮಾಡಿತು. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ಚಂದ್ರನ ಮೇಲ್ಮೈಯನ್ನು ಸಮೀಕ್ಷೆ ನಡೆಯಿತು. ಲ್ಯಾಂಡರ್‌ ಮತ್ತು ರೋವರ್‌ 1 ಚಂದ್ರನ ದಿನ (ಭೂಮಿಯ 14 ದಿನಗಳಿಗೆ ಸಮ) ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿವೆ. ಆ ಮೂಲಕ ಚಂದ್ರಯಾನ-3 ಮಿಷನ್‌ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿವೆ.

ISRO will successfully bring back Chandrayaan-3 spacecraft propulsion module from Moon orbit to Earth orbit. After completing the mission of the lunar mission, the propulsion module was re-orbited from the Moon to the Earth. ISRO has demonstrated its capability not only in launching satellites on the moon but also in bringing its instruments back.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

5 hours ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

17 hours ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

17 hours ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

18 hours ago

ಹವಾಮಾನ ವರದಿ | 19-07-2026 | ಜುಲೈ 20 ರಿಂದ ಮಳೆ ಇಳಿಮುಖ…! ಕರಾವಳಿ–ಮಲೆನಾಡಿನಲ್ಲಿ ಮಾತ್ರ ಅಲ್ಲಲ್ಲಿ ಮಳೆ ಮುಂದುವರಿಕೆ

ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…

1 day ago

ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ

ಹಲಸಿನ ಬೀಜದ ಸಿಪ್ಪೆಯಿಂದ ಮೈಕ್ರೋಕ್ರಿಸ್ಟಲೈನ್ ಸೆಲ್ಯುಲೋಸ್ ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕೃಷಿ ತ್ಯಾಜ್ಯವನ್ನು…

1 day ago