ISRO ಒಂದಲ್ಲ ಒಂದು ಸಾಧನೆಗಳನ್ನು ಮಾಡುತ್ತಾ ದೇಶಕ್ಕೆ ಕೀರ್ತಿ ತರುತ್ತಿದೆ. ಇದೀಗ 2035ರ ವೇಳೆಗೆ ಭಾರತವು(India) ತನ್ನದೇಯಾದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು(Space station) ಸ್ಥಾಪಿಸುವ ನಿರೀಕ್ಷೆಯಿದೆ ಮತ್ತು ಇದಕ್ಕೆ ಭಾರತೀಯ ಅಂತರಿಕ್ಷ ನಿಲ್ದಾಣ (BAS) ಎಂದು ಹೆಸರಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
2024-25ರ ಕೇಂದ್ರ ಬಜೆಟ್ನಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿದ ಘೋಷಣೆಗಳು ಭವಿಷ್ಯದ ದೃಷ್ಟಿಕೋನವನ್ನು ಹೊಂದಿವೆ ಎಂದು ಸಚಿವರು ಅಭಿಪ್ರಾಯ ಪಟ್ಟರು. 2025 ರ ದ್ವಿತೀಯಾರ್ಧದ ವೇಳೆಗೆ ಭಾರತೀಯನೋರ್ವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು 2040 ರ ವೇಳೆಗೆ ಮೊದಲ ಬಾರಿಗೆ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. “2023 ರಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ 1,000 ಕೋಟಿ ರೂ. ಹೂಡಿಕೆ ಬಂದಿದೆ. ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯು ಐದು ಪಟ್ಟು ಅಥವಾ ಸುಮಾರು 44 ಬಿಲಿಯನ್ ಡಾಲರ್ಗೆ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದಿಂದ ಪ್ರತಿಭಾ ಪಲಾಯನವನ್ನು ಅಂತ್ಯಗೊಳಿಸಲಿದೆ” ಎಂದು ಸಚಿವ ಸಿಂಗ್ ತಿಳಿಸಿದರು.
“ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ್’ ಕೋವಿಡ್ನಿಂದಾಗಿ ವಿಳಂಬವಾಗಿದ್ದು, ಇದು ಮುಂದಿನ ವರ್ಷ ನಡೆಯಲಿದೆ ಹಾಗೂ ಇದಕ್ಕಾಗಿ ಪ್ರಾಯೋಗಿಕ ಹಾರಾಟ ಯಾನಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ಇದಲ್ಲದೆ, ಭಾರತವು ಬಾಹ್ಯಾಕಾಶಕ್ಕೆ ರೋಬೋಟ್ ವಿಮಾನಗಳನ್ನು ಕಳುಹಿಸುವ ಗುರಿಯನ್ನು ಹೊಂದಿದೆ ಮತ್ತು ಈ ಮಿಷನ್ ಅಡಿಯಲ್ಲಿ ‘ವಾಯುಮಿತ್ರ’ ಹೆಸರಿನ ಮಹಿಳಾ ರೋಬೋಟನ್ನು 2025 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ರೋಬೋಟ್ ಗಗನಯಾತ್ರಿಯೊಬ್ಬ ಮಾಡಬಹುದಾದ ಎಲ್ಲಾ ಕಾರ್ಯಾಚರಣೆಗಳನ್ನು ನಡೆಸಿ ಭೂಮಿಗೆ ಮರಳಲಿದೆ” ಎಂದು ಅವರು ಮಾಹಿತಿ ನೀಡಿದರು.
“2023 ರ ಹೊಸ ಬಾಹ್ಯಾಕಾಶ ನೀತಿಯನ್ನು ಉಲ್ಲೇಖಿಸಿದ ಸಚಿವ ಡಾ. ಜಿತೇಂದ್ರ ಸಿಂಗ್, ಹೊಸ ನೀತಿಯು ಭಾರತದಲ್ಲಿ ಈ ವಲಯವನ್ನು ಮುಕ್ತಗೊಳಿಸಿದೆ ಮತ್ತು ಇದರಿಂದ ದೇಶದಲ್ಲಿ ಡಿಜಿಟಲ್ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2021 ರಲ್ಲಿ ಕೇವಲ ಒಂದು ಡಿಜಿಟಲ್ ಬಾಹ್ಯಾಕಾಶ ಸ್ಟಾರ್ಟ್ಅಪ್ ಇತ್ತು. ಈಗ ಈ ಸಂಖ್ಯೆ ಸುಮಾರು 300 ಕ್ಕೆ ಏರಿಕೆಯಾಗಿದೆ” ಎಂದು ಅವರು ತಿಳಿಸಿದರು. ಇತ್ತೀಚೆಗೆ ಸಂಪೂರ್ಣ 3ಡಿ ಮುದ್ರಿತ ಎಂಜಿನ್ನೊಂದಿಗೆ ಅಗ್ನಿಕುಲ್ ಕಾಸ್ಮೋಸ್ ವಿಶ್ವದ ಮೊದಲ ರಾಕೆಟ್ ಉಡಾವಣೆ ಮಾಡಿರುವುದನ್ನು ಅವರು ಉಲ್ಲೇಖಿಸಿದರು. ಮೂಲಸೌಕರ್ಯವನ್ನು ಬಲಪಡಿಸಲು ಇಸ್ರೋ ಆವರಣದಲ್ಲಿ ಅಗ್ನಿಕುಲ್ ಕಾಸ್ಮೋಸ್ ಖಾಸಗಿ ಲಾಂಚ್ ಪ್ಯಾಡ್ ಅನ್ನು ಸಹ ಸ್ಥಾಪಿಸಿದೆ ಎಂದು ಸಚಿವರು ಹೇಳಿದರು.
– ಅಂತರ್ಜಾಲ ಮಾಹಿತಿ
ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…
ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…