ಹಲಸಿನ ಕಾಯಿ ದಾಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :
ಹಲಸಿನ ಕಾಯಿ ಚಿಕ್ಕ ದಾಗಿ ಕಟ್ ಮಾಡಿ. (1 ಕಪ್.), ದಾಲ್ 3 ಚಮಚ, ಇವುಗಳನ್ನು ತೊಳೆದು ಕುಕ್ಕರ್ ಗೆ ಹಾಕಿ. ನಂತರ ಎಣ್ಣೆ 1 ಚಮಚ, ನೀರು ಸೇರಿಸಿ 3 ಸೀಟಿ ಕೂಗಿಸಿ. ನಂತರ ನೀರನ್ನು ಸೋಸಿ . ಹಲಸಿನ ಕಾಯಿ 3/4 ಕಪ್ ಅಷ್ಟು ತೆಗೆದು ಇಟ್ಟುಕೊಳ್ಳಿ. ನಂತರ ಉಳಿದ ಬೇಳೆ ಮತ್ತು ಹಲಸಿನ ಕಾಯಿ, ರುಬ್ಬಿಕೊಳ್ಳಿ. ಅದೇ ಕುಕ್ಕರ್ ಗೆ ಎಣ್ಣೆ 2 ಚಮಚ, ಜೀರಿಗೆ 1/2 ಚಮಚ, ಸಾಸಿವೆ 1/4 ಚಮಚ, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಹಾಕಿ ಒಗ್ಗರಣೆ ಚಟಪಟಾಯಿಸಿ.
ಹಸಿಮೆಣಸಿನ ಕಾಯಿ 2 ಕಟ್ ಮಾಡಿ ಹಾಕಿ, ಬೆಳ್ಳುಳ್ಳಿ 8 ಎಸಳು ಜಜ್ಜಿ ಹಾಕಿಕೊಳ್ಳಿ, ಹಿಂಗು ಸ್ವಲ್ಪ,ಶುಂಠಿ ಜಜ್ಜಿ ಹಾಕಿ ನಂತರ ರುಬ್ಬಿದ ಮಿಶ್ರಣ ನೀರು , ಹುಣಸೆ ರಸ 1 ಚಮಚ ಉಪ್ಪು ರುಚಿಗೆ ತಕ್ಕಷ್ಟು, ಸೇರಿಸಿ ಉಳಿದ ಹಲಸಿನ ಕಾಯಿ ಹಾಕಿ ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. ನಂತರ ಕೊತ್ತಂಬರಿ ಸೊಪ್ಪು, ನಿಂಬೆರಸ ಸ್ವಲ್ಪ ಸೇರಿಸಿ. ಬಿಸಿ ಬಿಸಿಯಾದ ಅನ್ನ ತುಪ್ಪ ಹಲಸಿನ ಕಾಯಿ ದಾಲ್ , ಹಪ್ಪಳ ಸಂಡಿಗೆ ಜೊತೆಗೆ ಸೂಪರ್ ರುಚಿ…. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…
ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…
ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…