Advertisement
ಸುದ್ದಿಗಳು

ಹಲಸಿಗೆ ಯೂರೋಪ್‌ ಮಾರುಕಟ್ಟೆ ಬಾಗಿಲು | ಭಾರತೀಯ ರೈತರಿಗೆ ಅವಕಾಶ

Share

ಭಾರತದಲ್ಲಿ ರೈತರ ತೋಟದಲ್ಲಿ ಕೊಳೆತುಹೋಗುವ ಹಣ್ಣಾಗಿದ್ದ, ಬಡವರ ಹಣ್ಣು ಎಂದೆಲ್ಲಾ ಹೇಳುತ್ತಿದ್ದ ಹಲಸು ಇಂದು ಪ್ರಪಂಚದ ಅತ್ಯಂತ ಬೇಡಿಕೆಯ ಹಣ್ಣಾಗುತ್ತಿದೆ. ಹಲಸು (Jackfruit) ಈಗ ಯೂರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿರುವ ಹಣ್ಣಾಗುತ್ತಿದೆ. ಯೂರೋಪಿನ ಹಾರ್ಟಿಕಲ್ಚರ್‌ ಮಾರುಕಟ್ಟೆಗಳ ಕುರಿತು ವರದಿ ಮಾಡಿರುವ “ಈಸ್ಟ್‌ ಫ್ರುಟ್”‌ ಪ್ರಕಾರ, ಹಲಸು ಮುಂದಿನ ದಿನಗಳಲ್ಲಿ ಅವಕಾಡೋಗೆ ಸಿಕ್ಕಂತಹ ಭಾರಿ ವಾಣಿಜ್ಯ ಯಶಸ್ಸು ಸಾಧಿಸುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ.

ಯೂರೋಪಿಯನ್‌ ವಾಣಿಜ್ಯ ಮಾರುಕಟ್ಟೆಯಲ್ಲಿ ಪರಿಚಯಗೊಂಡ ಒಂದು ವರ್ಷದೊಳಗೆ, ಹಲಸು ಈಗ ಸ್ಪೇನ್‌, ಫ್ರಾನ್ಸ್‌, ಸ್ವೀಡನ್‌, ಐಸ್ಲ್ಯಾಂಡ್‌, ಲಕ್ಸೆಂಬರ್ಗ್‌ ಮತ್ತು ಯುನೈಟೆಡ್‌ ಕಿಂಗ್‌ಡಂ ಸೇರಿದಂತೆ ಹಲವು ದೇಶಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಲಭ್ಯವಾಗುತ್ತಿದೆ. ಅಂದರೆ ಹಲಸು ಬಹಳ ವೇಗವಾಗಿ ಮಾರುಕಟ್ಟೆಯನ್ನು ಹಿಡಿದುಕೊಂಡಿದೆ.

ಯೂರೋಪಿನ ಗ್ರಾಹಕರು ಹಲಸನ್ನು ಆರೋಗ್ಯಕರ ಹಣ್ಣು, ಮಕ್ಕಳಿಗೆ ಸೂಕ್ತ ಸ್ನ್ಯಾಕ್‌, ಮತ್ತು ಸುಲಭವಾಗಿ ತಿನ್ನಬಹುದಾದ ರೆಡಿ-ಟು-ಈಟ್‌ ಉತ್ಪನ್ನ ಎಂದು ಒಪ್ಪಿಕೊಳ್ಳುತ್ತಿರುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.  ಬ್ರಿಟನ್‌ನಲ್ಲಿ ಮಾತ್ರವೇ ವಾರಕ್ಕೆ 3.5 ರಿಂದ 4 ಟನ್‌ಗಳಷ್ಟು ಹಲಸು ಮಾರಾಟವಾಗುತ್ತಿದೆ ಎಂಬ ಅಂಕಿಅಂಶಗಳು ಯೂರೋಪಿನ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತವೆ.

ಆಧುನಿಕ ಪ್ಯಾಕೇಜಿಂಗ್‌ ತಂತ್ರಜ್ಞಾನದಿಂದ ಹಲಸಿನ ಶೆಲ್ಫ್‌ ಲೈಫ್‌ ಎರಡು ವಾರಗಳಿಗೂ ಹೆಚ್ಚು ಕಾಲ ಉಳಿಯುತ್ತದೆ. ಪ್ಯಾಕೆಟ್‌ಗಳ ಮೇಲೆ ಇರುವ QR ಕೋಡ್‌ಗಳ ಮೂಲಕ ಗ್ರಾಹಕರು ಹಣ್ಣಿನ ಮೂಲ, ಬಳಕೆ ವಿಧಾನ ಮತ್ತು ಪಾಕವಿಧಾನಗಳ ಮಾಹಿತಿಯನ್ನು ಪಡೆಯಬಹುದು. ಏಷ್ಯಾದ ಬೆಳೆಗಾರರ ಸಹಕಾರದೊಂದಿಗೆ ವರ್ಷಪೂರ್ತಿ ನಿರಂತರ ಸರಬರಾಜು ವ್ಯವಸ್ಥೆ ನಿರ್ಮಿಸಿರುವುದೂ ಮಾರುಕಟ್ಟೆ ವಿಸ್ತರಣೆಗೆ ಸಹಾಯವಾಗಿದೆ.

ಯೂರೋಪಿನಲ್ಲಿ ಹಲಸಿಗೆ ಹೆಚ್ಚುತ್ತಿರುವ ಬೇಡಿಕೆ ಭಾರತದ ಹಲಸು ಬೆಳೆಗಾರರು ಮತ್ತು ರಫ್ತುದಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ವಿಶೇಷವಾಗಿ ಪ್ರೊಸೆಸ್ಡ್‌ ಹಲಸು ಉತ್ಪನ್ನಗಳು, ಕಟ್‌-ಫ್ರೂಟ್‌, ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಭವಿಷ್ಯ ಉಜ್ವಲವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಯೂರೋಪಿನ ಮಾರುಕಟ್ಟೆಯಲ್ಲಿ ಹಲಸು ಸ್ಥಾನಪಡೆದರೆ, ಇದು ಭಾರತೀಯ ತೋಟಗಾರಿಕೆ ಕ್ಷೇತ್ರಕ್ಕೆ ಹೊಸ ಆದಾಯದ ದಾರಿಯಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಹಲಸು ಬೆಳೆಗಾರಿಕೆಯ ಪ್ರಮುಖ ಕೇಂದ್ರಗಳಾಗಿರುವ ಕರ್ನಾಟಕ(Karnataka) ಮತ್ತು ಕೇರಳ(Kerala) ರಾಜ್ಯಗಳಲ್ಲಿ, ಇತ್ತೀಚೆಗೆ ಹಲಸಿನ ಬಗ್ಗೆ ರೈತರ ದೃಷ್ಟಿಕೋನ ಬದಲಾಗುತ್ತಿದೆ. “ಇಷ್ಟರವರೆಗೆ ಹಲಸು ಮನೆ ಬಳಕೆ ಅಥವಾ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿತ್ತು. ಈಗ ಯೂರೋಪಿನ ಬೇಡಿಕೆ ಬಗ್ಗೆ ಮಾಹಿತಿ ಬಂದ ನಂತರ, ಪ್ರೊಸೆಸಿಂಗ್‌ ಮತ್ತು ರಫ್ತು ಬಗ್ಗೆ ಯೋಚನೆ ಶುರುವಾಗಿದೆ” ಎನ್ನುತ್ತಾರೆ  ಹಲಸು ಬೆಳೆಗಾರರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕೇರಳದ ರೈತರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಲಸು ನಮ್ಮಲ್ಲಿ ಸಮೃದ್ಧವಾಗಿದೆ, ಆದರೆ ಬೆಲೆ ಸ್ಥಿರತೆ ಇರಲಿಲ್ಲ. ಯೂರೋಪ್‌ ಮಾರುಕಟ್ಟೆ ತೆರೆದರೆ, ಇದು ನಗದು ಬೆಳೆ ಆಗುವ ಸಾಧ್ಯತೆ ಇದೆ” ಎನ್ನುವುದು ಅವರ ನಿರೀಕ್ಷೆ.

ಪ್ರಸ್ತುತ ಭಾರತದಿಂದ ಹಲಸು ರಫ್ತು ಪ್ರಮಾಣ ಕಡಿಮೆಯೇ ಇದ್ದರೂ, ಯೂರೋಪಿನಲ್ಲಿ ವಾರಕ್ಕೆ ಹಲವಾರು ಟನ್‌ಗಳ ಬೇಡಿಕೆ ದಾಖಲಾಗುತ್ತಿರುವುದು ಭವಿಷ್ಯದ ದೊಡ್ಡ ಮಾರುಕಟ್ಟೆಯನ್ನು ಸೂಚಿಸುತ್ತದೆ. ವಿಶೇಷವಾಗಿ  ಕಟ್‌-ಫ್ರೂಟ್‌, ಫ್ರೋಜನ್‌ ಹಲಸು ಹಾಗೂ ಮೌಲ್ಯವರ್ಧಿತ ಪ್ರೊಸೆಸ್ಡ್‌ ಉತ್ಪನ್ನಗಳಿಗೆ . ಯೂರೋಪಿನ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಇದರಿಂದ ರಾ ಹಣ್ಣುಗಿಂತ ಪ್ರೊಸೆಸ್ಡ್‌ ಹಲಸಿಗೆ ಹೆಚ್ಚಿನ ಅವಕಾಶಗಳಿವೆ ಎಂಬುದು ಸ್ಪಷ್ಟವಾಗುತ್ತದೆ.

ಆದರೆ ,ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೆಲವೊಂದು ಸವಾಲುಗಳೂ ಇವೆ.  ಗುಣಮಟ್ಟದ ಮಾನದಂಡಗಳು,  ಶೀತಲ ಘಟಕದ ವ್ಯವಸ್ಥೆ, ಮತ್ತು ರಫ್ತು ಪ್ರಮಾಣೀಕರಣ ಇವೆಲ್ಲವನ್ನು ಸಕಾಲದಲ್ಲಿ ಪರಿಹರಿಸದೆ ಹೋದರೆ, ಯೂರೋಪಿನ ಮಾರುಕಟ್ಟೆ ಕೈ ತಪ್ಪುವ ಸಾಧ್ಯತೆಯೂ ಇದೆ. ರೈತರು, ರಫ್ತುದಾರರು ಮತ್ತು ಸರಕಾರ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಹಲಸು ರಫ್ತು ಯಶಸ್ವಿಯಾಗುತ್ತದೆ.

ಅಂದು ‘ಬಡವರ ಹಣ್ಣು’ ಎಂದು ಕಡೆಗಣಿಸಲ್ಪಟ್ಟ ಹಲಸು, ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುತ್ತಿರುವುದು ರೈತರ ಆದಾಯ ದ್ವಿಗುಣಗೊಳಿಸುವ ಬಾಗಿಲು. ಅವಕಾಡೋ ಹೇಗೆ ಅಮೆರಿಕಾದ ರೈತರಿಗೆ ಆರ್ಥಿಕ ಕ್ರಾಂತಿ ತಂದಿತೋ, ಅದೇ ರೀತಿಯ ಅವಕಾಶ ಹಲಸಿಗೂ ಇದೆ. ಈ ಅವಕಾಶವನ್ನು ಭಾರತೀಯ ತೋಟಗಾರಿಕೆ ವ್ಯವಸ್ಥೆ ಬಳಸಿಕೊಳ್ಳುತ್ತದೆಯೇ..?

ಇದನ್ನೂ ಓದಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

4 hours ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

5 hours ago

ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ

ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…

5 hours ago

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…

5 hours ago

2026 ಜೂನ್‌ನಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮುನ್ಸೂಚನೆ | ಪಶ್ಚಿಮ ಘಟ್ಟ-ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…

21 hours ago

ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…

21 hours ago