ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

June 7, 2025
6:03 AM

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್, ಮೈದಾ ಹುಡಿ 3/4 ಕಪ್,ಮೊಸರು 2 ಚಮಚ, ಏಲಕ್ಕಿ ಪುಡಿ ಸ್ವಲ್ಪ, ಸಕ್ಕರೆ 1ಚಮಚ, ಅಕ್ಕಿ ಹುಡಿ 1 ಚಮಚ, ಚಿಟಿಕೆ ಉಪ್ಪು, ಸಕ್ಕರೆ ಪಾಕ ಮಾಡಲು: 8 ಚಮಚ ಸಕ್ಕರೆ, 1/4 ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ 4 ಕೇಸರಿ ದಳ ಹಾಕಿ. ಸ್ಟವ್ ಆಫ್ ಮಾಡಿ.

ಮಾಡುವ ವಿಧಾನ :ಜಾರ್ ಗೆ ಹಲಸಿನ ಹಣ್ಣು ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಒಂದು ಪಾತ್ರೆಗೆ ಹಲಸಿನ ಹಣ್ಣಿನ ಪಲ್ಪ್, ಮೊಸರು, ಏಲಕ್ಕಿ ಪುಡಿ, ಅಕ್ಕಿ ಹುಡಿ , ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೈದಾ ಹುಡಿ, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ( ಹಿಟ್ಟು ಹದವಾಗಿ ಇರಲಿ). 45 ನಿಮಿಷ ಮುಚ್ಚಳ ಮುಚ್ಚಿ ಇಡಿ . ನಂತರ ತವಾ ಬಿಸಿ ಆದಾಗ ಅದಕ್ಕೆ ಎಣ್ಣೆ 1/4 ಕಪ್ ಹಾಕಿ. ಸಿಮ್ ನಲ್ಲಿ ಇಟ್ಟು ಮದ್ಯ ಭಾಗಕ್ಕೆ ಹಿಟ್ಟು ಹಾಕಿ . ಹಿಟ್ಟಿನ ಮೇಲೆ ಬಿಸಿ ಎಣ್ಣೆ ಸ್ವಲ್ಪ ಸ್ವಲ್ಪ ಹಾಕಿ ಉಬ್ಬಿ ಕೊಂಡು ಬಂದಾಗ ಕವುಚಿ ಹಾಕಿ ಬೇಯಿಸಿ ಕೊಳ್ಳಿ. ತೆಗೆಯುವಾಗ ಮದ್ಯ ಭಾಗ ಸ್ವಲ್ಪ ಒತ್ತಿ ತೆಗೆಯಿರಿ.
ಸ್ವಲ್ಪ ಬಿಸಿ ಆರಿದ ನಂತರ. ಇದನ್ನು ಒಂದು ಒಂದಾಗಿ ಸಕ್ಕರೆ ಪಾಕಕ್ಕೆ ಅದ್ದಿ ತೆಗೆಯಿರಿ.ಇದರ ಮೇಲೆ ಕಟ್ ಮಾಡಿದ ಬಾದಾಮಿ, ಗೋಡಂಬಿ ಹಾಕಿ.
ಈವಾಗ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಮಲ್ಪುರಿ ರೆಡಿ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!
April 18, 2026
7:28 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್
April 11, 2026
6:16 PM
by: ದಿವ್ಯ ಮಹೇಶ್
ಕುಟುಂಬದಲ್ಲೇ ಆರೋಗ್ಯದ ಬೀಜ – ಕುಟುಂಬದಲ್ಲಿ ಆರೋಗ್ಯಕರ ಅಭ್ಯಾಸಗಳ ಬೆಳವಣಿಗೆ
April 10, 2026
6:11 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ
April 5, 2026
9:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror