ಹೊಸರುಚಿ | ಬಲಿತ ಹಲಸಿನ ಕಾಯಿ ಪಲ್ಯ

November 10, 2025
6:18 AM

ಬಲಿತ ಹಲಸಿನ ಕಾಯಿ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಹಲಸಿನ ಕಾಯಿ 2 ಕಪ್ , ಫ್ರೈ ಮಾಡಿ ಕೊಳ್ಳಲು ಕೆಂಪು ಮೆಣಸು 2, ಕೊತ್ತಂಬರಿ ಬೀಜ 1 ಚಮಚ ಫ್ರೈ ಮಾಡಿ ನಂತರ ಕಾಯಿತುರಿ ಹಾಕಿ ಫ್ರೈ ಮಾಡಿ ಸ್ಟವ್ ಆಫ್ ಮಾಡಿ.  ನಂತರ ತರಿ ತರಿಯಾಗಿ ರುಬ್ಬಿಕೊಳ್ಳಿ.

ಬಾಣಲೆಗೆ ಎಣ್ಣೆ 8 ಚಮಚ, ಸಾಸಿವೆ 1/4 ಚಮಚ, ಕರಿಬೇವಿನ ಸೊಪ್ಪು 8 ಎಸಳು, ಜೀರಿಗೆ ಸ್ವಲ್ಪ ,ಉದ್ದಿನ ಬೇಳೆ ಸ್ವಲ್ಪ, ಕೆಂಪು ಮೆಣಸು 1 ಕಟ್ ಮಾಡಿ ಹಾಕಿ ಒಗ್ಗರಣೆ ಚಟಪಟಾಯಿಸಿ.  ಇದಕ್ಕೆ ಬೆಳ್ಳುಳ್ಳಿ 10 ಎಸಳು ಜಜ್ಜಿ ಹಾಕಿ, ಈರುಳ್ಳಿ 1 ಚಿಕ್ಕ ದಾಗಿ ಕಟ್ ಮಾಡಿ ಹಾಕಿ. ಹಲಸಿನ ಕಾಯಿ ಹಾಕಿ ,ನಂತರ ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ 1/2 ಚಮಚ, ಅರಿಸಿನ ಪುಡಿ 1/4 ಚಮಚ, ಚಿಕ್ಕ ತುಂಡು ಬೆಲ್ಲ, ನೀರು ಸೇರಿಸಿ ಬೇಯಿಸಿ ಕೊಳ್ಳಿ ನಂತರ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ.  ಬಿಸಿ ಬಿಸಿಯಾದ ಕುಚ್ಚಲಕ್ಕಿ ಅನ್ನ ತುಪ್ಪ , ಹಲಸಿನ ಕಾಯಿ ಪಲ್ಯ ಸೂಪರ್.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ
ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ಕೆಲವು ಸಂಬಂಧಗಳನ್ನು ಉಳಿಸುವುದು ಮೌನವೇ..
August 21, 2026
6:28 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror