ಬಲಿತ ಹಲಸಿನ ಕಾಯಿ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಹಲಸಿನ ಕಾಯಿ 2 ಕಪ್ , ಫ್ರೈ ಮಾಡಿ ಕೊಳ್ಳಲು ಕೆಂಪು ಮೆಣಸು 2, ಕೊತ್ತಂಬರಿ ಬೀಜ 1 ಚಮಚ ಫ್ರೈ ಮಾಡಿ ನಂತರ ಕಾಯಿತುರಿ ಹಾಕಿ ಫ್ರೈ ಮಾಡಿ ಸ್ಟವ್ ಆಫ್ ಮಾಡಿ. ನಂತರ ತರಿ ತರಿಯಾಗಿ ರುಬ್ಬಿಕೊಳ್ಳಿ.
ಬಾಣಲೆಗೆ ಎಣ್ಣೆ 8 ಚಮಚ, ಸಾಸಿವೆ 1/4 ಚಮಚ, ಕರಿಬೇವಿನ ಸೊಪ್ಪು 8 ಎಸಳು, ಜೀರಿಗೆ ಸ್ವಲ್ಪ ,ಉದ್ದಿನ ಬೇಳೆ ಸ್ವಲ್ಪ, ಕೆಂಪು ಮೆಣಸು 1 ಕಟ್ ಮಾಡಿ ಹಾಕಿ ಒಗ್ಗರಣೆ ಚಟಪಟಾಯಿಸಿ. ಇದಕ್ಕೆ ಬೆಳ್ಳುಳ್ಳಿ 10 ಎಸಳು ಜಜ್ಜಿ ಹಾಕಿ, ಈರುಳ್ಳಿ 1 ಚಿಕ್ಕ ದಾಗಿ ಕಟ್ ಮಾಡಿ ಹಾಕಿ. ಹಲಸಿನ ಕಾಯಿ ಹಾಕಿ ,ನಂತರ ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ 1/2 ಚಮಚ, ಅರಿಸಿನ ಪುಡಿ 1/4 ಚಮಚ, ಚಿಕ್ಕ ತುಂಡು ಬೆಲ್ಲ, ನೀರು ಸೇರಿಸಿ ಬೇಯಿಸಿ ಕೊಳ್ಳಿ ನಂತರ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾದ ಕುಚ್ಚಲಕ್ಕಿ ಅನ್ನ ತುಪ್ಪ , ಹಲಸಿನ ಕಾಯಿ ಪಲ್ಯ ಸೂಪರ್.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…