ಇತ್ತೀಚೆಗೆ ವಿದ್ಯಾರ್ಥಿಗಳಿಂದ ಹಿಡಿದು, ವ್ಯಾಪಾರಿಗಳಿಗೆ, ಸಾಫ್ಟ್ ವೇರ್ ಕೆಲಸ ಮಾಡುವವರಿಗೆ ಲ್ಯಾಪ್ ಟಾಪ್ ಇಲ್ಲಂದ್ರೆ ಕೆಲಸ ಬಹಳ ಕಷ್ಟ. ಆದರೆ ಲ್ಯಾಪ್ ಟಾಪ್ ಬೆಲೆ ಕೇಳಿದ್ರೆ ಮಕ್ಕಳಿಗಂತೂ ಪೋಷಕರು ತೆಗೆದುಕೊಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಈಗ ಅದರ ಭಯ ಇಲ್ಲ. ಕೇವಲ 16,999ಗೆ ಲ್ಯಾಪ್ ಟಾಪ್ ಲಭ್ಯವಾಗಲಿದೆ.
ಜಿಯೋಬುಕ್ ಲ್ಯಾಪ್‌ಟಾಪ್ ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ಅಮೆಜಾನ್ ಮೂಲಕ ಕೂಡ ಖರೀದಿಸಬಹುದು. ಮೊದಲ ಸೇಲ್ ಪ್ರಯುಕ್ತ ಆಫರ್ ಘೋಷಣೆ ಮಾಡಲಾಗಿದೆ. ಇದರ ಬೆಲೆ ಕೇವಲ 16,999 ರೂ. ರಿಲಯನ್ಸ್ ಜಿಯೋ ಮೊನ್ನೆಯಷ್ಟೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಜಿಯೋಬುಕ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿತ್ತು. ಇದು ಬಜೆಟ್ ಬೆಲೆಯ ಲ್ಯಾಪ್‌ಟಾಪ್ ಆಗಿದ್ದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಇದೀಗ ಇಂದಿನಿಂದ ಈ ಲ್ಯಾಪ್‌ಟಾಪ್ ದೇಶದಲ್ಲಿ ಮಾರಾಟ ಕಾಣುತ್ತಿದೆ. ಜಿಯೋಬುಕ್ ಲ್ಯಾಪ್‌ಟಾಪ್ ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ಅಮೆಜಾನ್ ಮೂಲಕ ಕೂಡ ಖರೀದಿಸಬಹುದು. ಮೊದಲ ಸೇಲ್ ಪ್ರಯುಕ್ತ ಆಫರ್ ಘೋಷಣೆ ಮಾಡಲಾಗಿದೆ. ಇದರ ಬೆಲೆ ಕೇವಲ 16,999 ರೂ.
ಜಿಯೋಬುಕ್ ಲ್ಯಾಪ್‌ಟಾಪ್ ಡಿಜಿಬಾಕ್ಸ್‌ನಲ್ಲಿ ಒಂದು ವರ್ಷದ ವರೆಗೆ 100GB ಉಚಿತ ಕ್ಲೌಡ್ ಸ್ಟೋರೇಜ್ ಮಾಡುವ ಆಯ್ಕೆ ನೀಡಲಾಗಿದೆ. 4G ಸಂಪರ್ಕದ ಜೊತೆ ಆಕ್ಟಾ-ಕೋರ್ ಪ್ರೊಸೆಸರ್‌ಗೆ ಬೆಂಬಲವನ್ನು ಹೊಂದಿದ್ದು, ಇದರಲ್ಲಿ ಹೈ-ಡೆಫಿನಿಷನ್ ವಿಡಿಯೋಗಳ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದಾಗಿದೆ. ಹೊಸ ಜಿಯೋ ಲ್ಯಾಪ್‌ಟಾಪ್ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ಅನ್ನು ಹೊಂದಿದೆ. ಕಂಪನಿಯು ತನ್ನ ಟೀಸರ್‌ನಲ್ಲಿ ಜಿಯೋಬುಕ್ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಿದೆ.
ಈ ಲ್ಯಾಪ್‌ಟಾಪ್ 64GB ಸಂಗ್ರಹಣೆಯನ್ನು ನೀಡುತ್ತದೆ, ಬೇಕಾದಲ್ಲಿ ಇದನ್ನು SD ಕಾರ್ಡ್‌ನೊಂದಿಗೆ 256GB ವರೆಗೆ ವಿಸ್ತರಿಸಬಹುದು. ಜಿಯೋಬುಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇನ್ಫಿನಿಟಿ ಕೀಬೋರ್ಡ್ ಮತ್ತು ದೊಡ್ಡ ಬಹು-ಗೆಸ್ಚರ್ ಟ್ರ್ಯಾಕ್‌ಪ್ಯಾಡ್. ಜಿಯೋಬುಕ್ ಲ್ಯಾಪ್‌ಟಾಪ್ ಅಂತರ್ನಿರ್ಮಿತ USB ಮತ್ತು HDMI ಪೋರ್ಟ್‌ಗಳೊಂದಿಗೆ ಬಂದಿದೆ. ಕಂಪನಿಯ JioOS ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಲ್ಯಾಪ್‌ಟಾಪ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಆಗಿದೆ. ಲ್ಯಾಪ್‌ಟಾಪ್ 4G ಸಂಪರ್ಕ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈಗೆ ಬೆಂಬಲವನ್ನು ಹೊಂದಿದೆ.
ಇದು ಅಲ್ಟ್ರಾ-ಸ್ಲಿಮ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಸುಮಾರು 990 ಗ್ರಾಂ ತೂಕದ್ದಾಗಿದೆ ಎಂದು ಜಿಯೋ ಹೇಳಿದೆ. ಇದರಲ್ಲಿ 11.6-ಇಂಚಿನ ಕಾಂಪ್ಯಾಕ್ಟ್ ಆಂಟಿ-ಗ್ಲೇರ್ HD ಡಿಸ್ ಪ್ಲೇ ನೀಡಲಾಗಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು ಜಿಯೋ ಉತ್ಪನ್ನವಾಗಿರುವುದರಿಂದ, ಜಿಯೋ TV ಮತ್ತು JioCloud ನಂತಹ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಲಿನಕ್ಸ್ ಆಧಾರಿತ ಕೋಡಿಂಗ್ ಸಾಫ್ಟ್‌ವೇರ್ JioBIAN ನೊಂದಿಗೆ ಬಳಕೆದಾರರು ಕೋಡಿಂಗ್ ಭಾಷೆಗಳನ್ನು (ಜಾವಾ, ಪೈಥಾನ್ ಮತ್ತು ಪರ್ಲ್) ಕಲಿಯಬಹುದು. ಆಫೀಸ್ ಮತ್ತು ಪವರ್‌ಪಾಯಿಂಟ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳನ್ನು ಲ್ಯಾಪ್‌ಟಾಪ್ ಬೆಂಬಲಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
Source : Online Media
ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.