ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ(ಕೆಎಸ್‍ಡಿಸಿ) ಉದಯೋನ್ಮುಖ ಯೋಜನೆಯಾದ ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕದ ಮುಖಾಂತರ ವಿದೇಶಗಳಲ್ಲಿ ಉದ್ಯೋಗಾವಕಾಶಗಳಿದ್ದು, ಆಸಕ್ತರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ದುಬೈ: ಟೈಲ್ಸ್ ಮೇಸನ್ಸ್ , ಬ್ಲಾಕ್ ಮೇಸನ್ಸ್, ಹಾಗೂ ಮಾರ್ಬಲ್ ಮೇಸನ್ಸ್ 100 ಖಾಲಿ ಹುದ್ದೆಗಳಿಗೆ 18 ರಿಂದ 32 ವರ್ಷದೊಳಗಿನ ಹೊಸಬರು ಅಥವಾ 2 ವರ್ಷಕ್ಕಿಂತ ಹೆಚ್ಚು ಅನುಭವವುಳ್ಳ ಕಾರ್ಮಿಕರು ಬೇಕಾಗಿರುತ್ತಾರೆ.
ಯುನೈಟೆಡ್ ಕಿಂಗ್‍ಡಮ್ : ಐ.ಇ.ಎಲ್.ಟಿ.ಎಸ್-ಬ್ಯಾಂಡ್ 7 ಅಥವಾ ಒ.ಇ.ಟಿ ಗ್ರೇಡ್ ಬಿ ಯೊಂದಿಗೆ ಬಿ.ಎಸ್ಸಿ ನಸಿರ್ಂಗ್, ಜಿ.ಎನ್.ಎಂ, ಪಿ.ಬಿ.ಬಿ.ಎಸ್ಸಿ ನಸಿರ್ಂಗ್ ಪದವಿಯ ಪಡೆದಿರುವ 6 ತಿಂಗಳಿಗಿಂತ ಹೆಚ್ಚು ಅನುಭವವಿರುವ 50ವರ್ಷದೊಳಗಿನ ಅಭ್ಯರ್ಥಿಗಳಿಗೆ ನರ್ಸ್ ಹುದ್ದೆಗೆ ಅವಕಾಶವಿದ್ದು, ತಿಂಗಳಿಗೆ 2 ಲಕ್ಷ ರೂ. ವೇತನ ಹಾಗೂ ಮೊದಲ 3 ತಿಂಗಳವರೆಗೆ ಉಚಿತ ವಸತಿ ನೀಡಲಾಗುತ್ತದೆ.
ಜಪಾನ್:ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೊಮಾ, ಬಿ.ಎಸ್ಸಿ, ಎಂ.ಎಸ್ಸಿ ನಸಿರ್ಂಗ್, ಯಾವುದೇ ಪದವಿ, ಯಾವುದೇ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಅವಿಯೇಶನ್, ಇಲೆಕ್ಟ್ರಿಕ್, ಕೃಷಿ, ನಸಿರ್ಂಗ್ ಕೇರ್, ಇಲೆಕ್ಟ್ರಾನಿಕ್ಸ್ ಮತ್ತು ಇನ್‍ಫಾರ್ಮೇಶನ್, ಶಿಪ್ ಬಿಲ್ಡಿಂಗ್ ಮತ್ತು ಶಿಪ್ ಮೆಷಿನರಿ ಇಂಡಸ್ಟ್ರೀ, ಇಂಡಸ್ಟ್ರಿಯಲ್ ಮೆಷಿನರಿ, ಮೆಷಿನ್ ಪಾಟ್ರ್ಸ್, ಟೂಲಿಂಗ್ ಇಂಡಸ್ಟ್ರೀ ವಲಯಗಳಲ್ಲಿ ಉದ್ಯೋಗಾವಕಾಶಗಳಿದ್ದು, ಉಚಿತವಾಗಿ ಜಪಾನ್ ಭಾಷೆಯನ್ನು ಕಲಿಯುವ ಅವಕಾಶವನ್ನೂ ನೀಡಲಾಗುವುದು.
ರೊಮೇನಿಯ : ಇಲೆಕ್ಟ್ರಿಷಿಯನ್ ಅಸೆಂಬ್ಲರ್ , ಲಾಕ್ಸ್‍ಮಿತ್ಸ್ ಇನ್‍ಸ್ಟಾಲರ್ಸ್, ಇಲೆಕ್ಟ್ರಿಕ್ ಎ.ಆರ್.ಸಿ ವೆಲ್ಡರ್, ಮ್ಯಾನ್ಯುಯಲ್ ವೆಲ್ಡರ್ ವಿತ್‍ಗ್ಯಾಸ್ ಫ್ಲೇಮ್, ಕಾಪೆರ್ಂಟರಿ ಫಾರ್ ಕಟ್ಟಿಂಗ್ ಎಂಡ್ ಸೀಜಿಂಗ್, ಮೆಕಾನಿಕಲ್ ಕಾಪೆರ್ಂಟರಿ ಮಿಲ್ಲಿಂಗ್ ಎಂಡ್ ಡ್ರಿಲ್ಲಿಂಗ್, ಯೂನಿವರ್ಸಲ್ ಲೇತ್ ಮೆಷಿನ್ ಆಪರೇಟರ್, ಓವರ್‍ಹೆಡ್ ಕ್ರೇನ್‍ಆಪರೇಟರ್, ಪ್ಲಂಬರ್(ಸ್ಯಾನಿಟರಿ ವೇರ್/ಗ್ಯಾಸ್ ಲೈನ್), ಕಾಪೆರ್ಂಟರ್ ಮಿಲ್ಲಿಂಗ್ ಮೆಷಿನ್, ಕಾಪೆರ್ಂಟರ್ ಜನರಲ್ (ಟ್ರೇನ್‍ಕ್ಯಾರೇಜಸ್), ಪ್ಲಂಬರ್ (ಪೈಪ್‍ಲೈನ್), ರೆಫ್ರಿಜರೇಶನ್ ಇನ್‍ಸ್ಟಾಲರ್, ವೆಲ್ಡರ್ ಎ.ಆರ್.ಸಿ, ಲೇತ್ ಮೆಷಿನ್ ಆಪರೇಟರ್, ಯೂನಿವರ್ಸಲ್ ಮಿಲ್ಲಿಂಗ್ ಮೆಷಿನ್ ಆಪರೇಟರ್, ಮೆಕಾನಿಕಲ್ ಡಿಸೈನ್ ಇಂಜಿನಿಯರ್ ಮುಂತಾದ ಹುದ್ದೆಗಳಿಗೆ ಪದವಿಗೆ ಅನುಸಾರವಾಗಿ ಉದ್ಯೋಗಾವಕಶಗಳಿವೆ.
ಆಸಕ್ತರು ನಗರದ ಉರ್ವ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಚೇರಿ ಅಥವಾ ಮೊಬೈಲ್ ಸಂಖ್ಯೆ:9110248485 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…