Advertisement
ಸುದ್ದಿಗಳು

ಕೃಷಿಕೋದ್ಯಮ | ಕೃಷಿಯಲ್ಲಿ ಬ್ಯುಸಿನೆಸ್‌ ಹೇಗೆ ಮಾಡಬಹುದು ?| ಉಪಯುಕ್ತ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ಸಂದೇಶ |

Share
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮುಳಿಯ ಜ್ಯುವೆಲ್ಸ್‌ ನೇತೃತ್ವದಲ್ಲಿ ಕೃಷಿಕೋದ್ಯಮ ಕಾರ್ಯಾಗಾರ ನಡೆಯಿತು. ಕೃಷಿಗೆ ಉದ್ಯಮದ ರೂಪ ನೀಡುವುದು ಹೇಗೆ ಎಂಬುದರ ಬಗ್ಗೆ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಂವಾದ ನಡೆಸಲಾಯಿತು. ಈ ಕಾರ್ಯಕ್ರಮದ ಬಗ್ಗೆ ಸಿಪಿಸಿಆರ್‌ಐ ತಾಂತ್ರಿಕ ಅಧಿಕಾರಿ ಮುರಳಿಕೃಷ್ಣ ಅವರು ಇಲ್ಲಿ ಬರೆದಿದ್ದಾರೆ….

ನಮ್ಮ ಕೃಷಿಯಲ್ಲಿ ಬಿಸಿನೆಸ್ಸಿಗೆ (Agri business) ಅನುಯೋಜ್ಯವಾದ ದೃಷ್ಟಿಕೋನದ ಕೊರತೆ ಇದೆ. ನಮ್ಮ ದೀರ್ಘಾವಧಿ ಬೆಳೆಗಳು ಉದ್ಯಮಶೀಲತೆಗೆ ಅತ್ಯಂತ ಸಮರ್ಪಕವಾಗಿವೆ. ಅದರ ಮಧ್ಯೆ ನಾವು ಅನಾವಶ್ಯಕವಾಗಿ ಮಾರುಕಟ್ಟೆಗೆ ಅವಶ್ಯಕತೆವಲ್ಲದ ತಳಿಗಳ ಬಗ್ಗೆ ಕನ್ಫ್ಯೂಸ್ ಆಗಬಾರದು. ಅದೇ ರೀತಿ ಎಡೆ ಬೆಳೆಗಳ ಬಗ್ಗೆಯೂ ಕನ್ಫ್ಯೂಸ್ ಆಗಬಾರದು.

ಅಡಿಕೆಯ ಬೆಳೆಯೊಂದಿಗೆ ಕೇವಲ ಒಂದೆರಡು ಎಡೆ ಬೆಳೆಗಳಿಗೆ ಮಹತ್ವ ನೀಡಿ ಅದರ ಉತ್ಪನ್ನಗಳ ತಯಾರಿಸಿ ಗ್ರಾಹಕರಿಗೆ ತಲುಪಿಸಬೇಕು. ಉದಾಹರಣೆಗೆ ಹಲಸು, ಬಾಳೆ ಕೊಕ್ಕೋ, ಮರೆಗೆಣಸು, ಜೇನು ಇತ್ಯಾದಿ.. ಅವುಗಳ ವ್ಯಾಲ್ಯೂ ಚೈನ್ ನ ಜೊತೆಗೆ ಅಡಿಕೆಯನ್ನು ಕೂಡ ಮಾರುಕಟ್ಟೆಗೆ ಪುಷ್ ಮಾಡಬೇಕು. ಅಡಿಕೆಯ ತುಣುಕುಗಳನ್ನು ಚಿಪ್ಸ್ ರೂಪದಲ್ಲಿ ಗ್ರಾಹಕರಿಗೆ ನೇರ ಉಪಯೋಗಕ್ಕಾಗಿ ಉತ್ಪನ್ನ ತಯಾರಿಸಿ ನೇರ ಮಾರುಕಟ್ಟೆಗೆ ಪರಿಚಯಿಸಬಹುದು. ಇದನ್ನು ಈಗಾಗಲೇ ನಡೆಯುತ್ತಿರುವ ಆಮೇಜಾನ್ ನಂತಹ ಇ-ಕಾಮರ್ಸ್ ನ ಜೊತೆಗೆ ಅಥವಾ ನಮ್ಮದೇ ಬ್ರಾಂಡಿಂಗಿನ ಮೂಲಕ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ಮಾರಾಟವನ್ನು ಮಾಡಬಹುದು.

ನಮ್ಮದೇ ಒಂದೊಂದು ಕ್ಲಸ್ಟರ್ ರೂಪಿಕರಣ ಮಾಡಿ ಅದರ ಉತ್ಪನ್ನಗಳನ್ನು ಉತ್ತರ ಭಾರತದ ಗ್ರಾಹಕರ ಕ್ಲಸ್ಟರ್ಗೆ ತಲುಪಿಸುವ ಪ್ರಯತ್ನ ಮಾಡಬಹುದು. ಹವಾಮಾನ ವೈಪರಿತ್ಯ ಹಾಗೂ ಕಾರ್ಮಿಕರ ವೆಚ್ಚದಿಂದಲಾಗಿ ಅಡಿಕೆಯ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. 2016 ರಲ್ಲಿ 200 ರೂಪಾಯಿ ಉತ್ಪಾದನೆ ವೆಚ್ಚ ಇದ್ದ ಅಡಿಕೆಗೆ ಈಗ 300-350 ರೂಪಾಯಿ ವೆಚ್ಚಕ್ಕೆ ತಲುಪಿದೆ. ಉದ್ಯಮಶೀಲತೆ ಹಾಗೂ ಮೌಲ್ಯವರ್ಧನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆದಾಯಕ್ಕೂ ಸ್ಥಿರ ಮಾರುಕಟ್ಟೆಗೂ ಪೂರಕವಾಗುವಲ್ಲದು.

ಡಾ ವೇಣುಗೋಪಾಲ ಕಳೆಯತ್ತೋಡಿಯವರು ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಶ್ರೀಹರಿ ಭಟ್ ಇವರು ತಂತ್ರಜ್ಞಾನದ ಬಳಕೆಯಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ರೋಪ್ ವೆ ಯಂತಹ ಪರಿಹಾರದ ಮಾರ್ಗವನ್ನು ಸೂಚಿಸಿದರು. ಕಸ್ತೂರಿ ಅಡ್ಯಂತಾಯ 30 ದನದಿಂದ 25,000 ರಿಂದ 30,000 ಆದಾಯ ಪಡೆಯುವ ಬಗ್ಗೆ ತಿಳಿಸಿದರು.

ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ಸರ್ಕಾರ ಯಾವ ರೀತಿ ಸಣ್ಣ ಹಿಡುವಳಿದಾರರ ಹಿತವನ್ನು ಗಮನಿಸುತ್ತದೆ ಎಂಬುದನ್ನು ತಿಳಿಸಿದರು. ಯಾವ ರೀತಿ ವೆಚ್ಚಗಳನ್ನು ನಿಯಂತ್ರಿಸಬಹುದು ಹಾಗೂ ನಷ್ಟದ ಮಾರ್ಗಗಳನ್ನು ತಡೆಯಬಹುದು ಎಂದು ತಿಳಿಸಿದರು. ಸುರೇಶ್ ಗೌಡ ಅವರು ತಮ್ಮ ಬಸಳೆ ಕೃಷಿಯ ಯಶೋಗಾಥೆಯನ್ನು ತಿಳಿಸಿದರು.ಗೋವಿಂದ ಭಟ್ ಮಾಣಿಲ ಇವರು ತಮ್ಮ 22 ಸುರಂಗಗಳ ಮೂಲಕ ಪಡೆಯುವ ನೀರಿನ ನೀರಾವರಿ ಸೌಲಭ್ಯವನ್ನು ತಿಳಿಸಿದರು.
ಅಶೋಕ ಕುಮಾರ್ ಕರಿಕಳ ಇವರು ಗ್ರಾಹಕರ ಆಸಕ್ತಿಗನುಸಾರವಾಗಿ ಉತ್ಪಾದನೆ ಮಾಡುವ ಬಗ್ಗೆ ಹಾಗೂ ಮುಂದಿನ 25 ವರ್ಷಗಳಲ್ಲಿ ಏಷ್ಯಾದ ದೇಶಗಳು ಪ್ರಬಲ ಗ್ರಾಹಕ ದೇಶಗಳಾಗಿ ಮಾರ್ಪಾಡಾಗುವ ಬಗ್ಗೆ ತಿಳಿಸಿದರು. ಡಾ ಹರಿಕೃಷ್ಣ ಪಾಣಾಜೆ ಇವರು ಆಯುರ್ವೇದದಲ್ಲಿ ಗಿಡಮೂಲಿಕೆಗಳ ಅವಶ್ಯಕತೆ ಹಾಗೂ ಬೃಂಗರಾಜ, ನೆಲನೆಲ್ಲಿ, ತುಳಸಿ, ಚಿತ್ರಮೂಲ, ಅಮೃತಬಳ್ಳಿ, ಮುಂತಾದ ಗಿಡಗಳ ಕೃಷಿಯಿಂದ ಉದ್ಯಮಶೀಲತೆ ಸಾಧ್ಯ ಎಂದು ತಿಳಿಸಿದರು.ವೇಣುಗೋಪಾಲ ಮುಂಡೂರು ಇವರು ಸ್ಥಳೀಯ ಅವಶ್ಯಕತೆಗೆ ಅನುಸಾರವಾಗಿ ಉಪಯುಕ್ತ ಗಿಡಗಳ ಉತ್ಪಾದನೆ ಮಾಡುತ್ತಿರುವುದಾಗಿ ತಿಳಿಸಿದರು.ಕೃಷ್ಣಮೋಹನ ಇವರು ಇನ್ಸ್ಟಾ ಬಾಸ್ಕೆಟ್ ಮಾದರಿಯನ್ನು ತಿಳಿಸಿದರು. ಇಲ್ಲಿ ಯಾವ ರೀತಿ ಗ್ರಾಹಕರೇ ಮಾಲಕರಾಗಿರುತ್ತಾರೆ. ಅದೇ ರೀತಿ ಸ್ಥಳೀಯವಾಗಿ ಹೊಸ ಹೊಸ ಮಳಿಗೆಗಳನ್ನು ಮಾಡಲು ನೀಡುವ ಪ್ರೋತ್ಸಾಹವನ್ನು ತಿಳಿಸಿದರು.ಕೇಶವ ಪ್ರಸಾದ ಮುಳಿಯ ಇವರು ಭತ್ತದ ಕೃಷಿಯ ಯಶೋಗಾಥೆ ಹಾಗೂ ಸುಮಾರು 10 ಸಾವಿರ ರೂಪಾಯಿ ನಿವ್ವಳ ಆದಾಯ ಪಡೆದುವುದನ್ನು ತಿಳಿಸಿದರು.
ಮಹೇಶ್ ಪುಚ್ಚಪ್ಪಾಡಿ ಇವರು ಸಾಮಾಜಿಕ ಜಾಲತಾಣಗಳ ಮಹತ್ವ ಹಾಗೂ ಕೃಷಿ ಕರು ಇದರಲ್ಲಿ ಕೈಜೋಡಿಸಬೇಕಾದ ಅವಶ್ಯಕತೆಯನ್ನು ತಿಳಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 30.05.2026 | ಕರಾವಳಿಯಲ್ಲಿ ತುಂತುರು ಮಳೆ, ಜೂ.7ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ| ಆರಂಭ ದುರ್ಬಲವಾಗುವ ಲಕ್ಷಣ

31.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದ ವಿವಿಧ…

6 hours ago

ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದ ಭರವಸೆ..! ಟಿಶ್ಯೂ ಕಲ್ಚರ್‌ನಲ್ಲಿ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧ

ಅಡಿಕೆ ಹಳದಿ ಎಲೆ ರೋಗ ನಿರೋಧಕ ಟಿಶ್ಯೂ ಕಲ್ಚರ್‌ ತಳಿ ಅಭಿವೃದ್ಧಿಯಲ್ಲಿ ಸಿಪಿಸಿಆರ್‌ಐ…

15 hours ago

ಈ ಬಾರಿಯ ಮುಂಗಾರು ದುರ್ಬಲವೇ..? ಐಎಂಡಿ ಎರಡನೇ ಮುನ್ಸೂಚನೆ ಬಿಡುಗಡೆ – 11 ವರ್ಷಗಳಲ್ಲೇ ಅತೀ ದುರ್ಬಲ ಮುಂಗಾರು ಸಾಧ್ಯತೆ..?

ಐಎಂಡಿ ಬಿಡುಗಡೆ ಮಾಡಿದ ಎರಡನೇ ಮುಂಗಾರು ಮುನ್ಸೂಚನೆಯಲ್ಲಿ ದೇಶದಲ್ಲಿ ಕೇವಲ 90% ಮಳೆಯ…

24 hours ago

ಹವಾಮಾನ ವರದಿ | 29.05.2026 | ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ | ಜೂನ್ 7 ಬಳಿಕ ಕರಾವಳಿಯಲ್ಲಿ ಭಾರೀ ಮಳೆಯ ಸೂಚನೆ!

ಕರ್ನಾಟಕದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು…

1 day ago

ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲೆ – ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಬಹಿರಂಗವಾದ ಅಚ್ಚರಿಯ ಜೀವ ವೈವಿಧ್ಯ

ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲಾಗಿದ್ದು, ZSI ವಿಜ್ಞಾನಿಗಳು ದೇಶದ ಮೊದಲ ದೊಡ್ಡ…

2 days ago

ಜೈಸಲ್ಮೇರ್‌ ಘಟನೆ ಬಳಿಕ ಎಚ್ಚೆತ್ತ ಆಡಳಿತ | ಕೊಳೆತ ಸ್ಥಿತಿಯಲ್ಲಿದ್ದ ನೂರಾರು ಹಸುಗಳನ್ನು ಹೂಳುವ ಕಾರ್ಯ ಆರಂಭ

ಜೈಸಲ್ಮೇರ್‌ನಲ್ಲಿ ಬಯಲಿನಲ್ಲಿ ಪತ್ತೆಯಾಗಿದ್ದ ನೂರಾರು ಹಸುಗಳ ಶವಗಳ ಘಟನೆ ಬಳಿಕ ನಗರಸಭೆ ಶವಗಳನ್ನು…

2 days ago