ಬಾಳ ಮಧ್ಯಾಹ್ನದ ಲಹರಿ

July 5, 2026
3:10 PM
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ. ಉಳಿಯುವುದು ವರ್ಷಗಳ ಸಂಖ್ಯೆ ಅಲ್ಲ, ನಮ್ಮ ಬದುಕಿನ ಮೌಲ್ಯ."

ಓ ಮೊನ್ನೆ ಮೊನ್ನೆಯಷ್ಟೇ ಸಂದಿದೆ ಕೌಮಾರ್ಯ
ನಿನ್ನೆ ನಿನ್ನೆಯಷ್ಟೇ ದಾಟಿತಲ್ಲಾ ಯೌವ್ವನಕಾಲ
ಅದೋ ಸಲ್ಲುತ್ತಿದೆ ವಯಸ್ಸು ಮಧ್ಯ
ಬಾಕಿಯದು ಒಂದೇ ವೃದ್ಧಾಪ್ಯ
ಇಷ್ಟೇ ಇಹುದಲ್ಲಾ ಬದುಕೆಂಬ ಭಾಗ್ಯ
ಎಮ್ಮ ಬಿಡದಲ್ಲಾ ಆಸೆಯೆಂಬ ಪಾಶ
ಆದರದುವೇ ತಾನೇ ಬಾಳ ನಿರ್ದೇಶಕ

ಈ ಜಗದ ಚಿತ್ರದಲಿ ಬದುಕದೆಷ್ಟು ವಿಚಿತ್ರ
ಅನ್ನಿಸಿತಲ್ಲಾ ನಿನಗೂ ಅದು ಶ್ರೀರಾಮಚಂದ್ರ
ನಮಗೂ ಹಾಗನಿಸುವುದು ಮತ್ತೆ ಅದಾವ ಲೆಕ್ಕ ದಯಾಸಾಂದ್ರ
ನಿನ್ನಾವತಾರಕ್ಕೆ ಪಾರವುಂಟೇ ಶ್ರೀರಾಮ
ಎಮ್ಮ ತೊಳಲಾಟಕ್ಕೆ ಗತಿಮಿತಿಯುಂಟೇ ದೇವ
ಇನ್ನೆಷ್ಟು ಕಾಲ ಈ ಬದುಕ ಲೆಕ್ಕ
ಆರರಿತಿಹರು ಆ ಬೊಮ್ಮನ ಪಕ್ಕಾ ಲೆಕ್ಕ

ಬಾಳಬೆಳಗಿನಲಿ ನೋಡಲದೇನು ಬೆರಗು
ಮಧ್ಯಾಹ್ನದಲಿ ಅದೋ ಅದೇನು ಹಸಿವು
ಸಂಜೆಯದು ಎಂತಿಹುದೋ ಎಂಬ ಆತಂಕವು
ಕಾಡದಿರಲೆಂಬ ಸಂಪ್ರಾರ್ಥನೆಯು ಆ ದೇವನೆದುರು

ಬರಹ :
ಜಯಪ್ರಕಾಶ ಎ ನಾಕೂರು

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

This reflective Kannada poem portrays the journey from youth to old age, reminding us that life passes quickly while desires continue to bind us. It reflects on destiny, human longing, and the search for peace, concluding that the true measure of life lies in its meaning, not its length.

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror