ಕಾವೇರಿಗಾಗಿ ಮಂಗಳವಾರ ಬೆಂಗಳೂರು ಹಾಗೂ ಕಾವೇರಿ ಜಲಾನಯನದ ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗಿತ್ತು. ಆದರೆ ಕಾವೇರಿ ನೀರು ಮಾತ್ರ ಇನ್ನು ತಮಿಳುನಾಡಿಗೆ ಹರಿಯುತ್ತಲೇ ಇದೆ. ಕನ್ನಡಿಗರ ಕಷ್ಟಕ್ಕೆ ಯಾರು ಸ್ಪಂದಿಸುವವರು ಯಾರು ಇಲ್ಲ ಅನ್ನಿಸುತ್ತದೆ. ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ರೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯುತ್ತಿರೋದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರರು ಕರ್ನಾಟಕ ಬಂದ್ಗೆಕರೆ ಕೊಟ್ಟಿದ್ದಾರೆ.
ಈಗಾಗಲೇ ರಾಜ್ಯದ ತುಂಬೆಲ್ಲಾ ಕನ್ನಡಪರ ಹೋರಾಟಗಾರು ರಸ್ತೆಗೆ ಇಳಿದಿದ್ದು, ನಾಳೆಯ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಜೊತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ನಾಳೆ ಅಂದ್ರೆ ಸೆಪ್ಟೆಂಬರ್ 29ರಂದು ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟು ಮತ್ತು ವ್ಯವಹಾರಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಆಗಲಿದೆ ಎಂದು ಕನ್ನಡಪರ ಹೋರಾಟಗಾರು ಮಾಹಿತಿ ನೀಡಿದ್ದಾರೆ.
ಇನ್ನು ರಾಜಧಾನಿ ಈ ವಾರದಲ್ಲಿ ಎದುರಿಸುತ್ತಿರೋ ಎರಡನೇ ಬಂದ್ ಆಗಿದೆ. ಮಂಗಳವಾರ ರೈತಪರ ಸಂಘಟನೆಗಳಿಗೆ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ವಿಯಾಗಿತ್ತು. ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ರಸ್ತೆಗೆ ಬಸ್ಗಳು ಇಳಿದಿದ್ರೂ ಪ್ರಯಾಣಿಕರು ಇರಲಿಲ್ಲ. ಶುಕ್ರವಾರದ ಕರ್ನಾಟಕ ಬಂದ್ಗೆ ರಾಜಧಾನಿಯ ಖಾಸಗಿ ಶಾಲೆಗಳು ನೈತಿಕ ಬೆಂಬಲ ನೀಡೋದಾಗಿ ಹೇಳಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯುವ ಸಾಧ್ಯತೆಗಳೂ ಇವೆ. ಇಂದು ಸಂಜೆ ಎಲ್ಲವೂ ಅಧಿಕೃತವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ನಾಳೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಏನಿರುತ್ತೆ?: ಅಗತ್ಯ ಸೇವೆಗಳಾದ ಹಾಲು, ದಿನ ಪತ್ರಿಕೆ, ವೈದ್ಯಕೀಯ ಸೇವೆಗಳು, ಮೆಡಿಕಲ್ ಶಾಪ್ ಇರಲಿದೆ. ಇನ್ನು KSRTC, BMTC ಸೇರಿದಂತೆ ಸಾರಿಗೆ ವ್ಯವಸ್ಥೆಯ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಖಾಸಗಿ ಸಾರಿಗೆ ಒಕ್ಕೂಟ ತಟಸ್ಥ ನಿಲುವು ತೆಗೆದುಕೊಂಡಿದೆ.
ಏನಿರಲ್ಲ? ಮಾಲ್, ಓಲಾ, ಓಬರ್ ಆಟೋ ಕ್ಯಾಬ್ ಸೇವೆ ಇರಲ್ಲ. ಎಲ್ಲಾ ಚಿತ್ರಮಂದಿರಗಳು ಬಂದ್ ಆಗಲಿವೆ. ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಸಹ ಸ್ತಬ್ಧವಾಗಲಿದೆ. ಪ್ರತಿಭಟನಾಕಾರರು ರಸ್ತೆಗಿಳಿದು ಪ್ರತಿಭಟನೆ ನಡೆಸೋ ಸಾಧ್ಯತೆ ಇರೋ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರದಲ್ಲಿ ಏರುಪೇರು ಆಗಬಹುದು. ಇನ್ನು ಶಾಲಾ-ಕಾಲೇಜುಗಳು ತೆರೆಯೋದು ಅನುಮಾನ ಎಂದು ಅಂದಾಜಿಸಲಾಗಿದೆ.
– ಅಂತರ್ಜಾಲ ಮಾಹಿತಿ
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…