ಚುನಾವಣೆ ಹೊತ್ತಲ್ಲಿ ರಾಜಕಾರಣಿಗಳಿಗೆ ಹೊಸ ಅಸ್ತ್ರ ಸಿಕ್ಕಿದೆ. ಅದುವೇ ಲಿಂಗಾಯತ ಸಿಎಂ ಅಸ್ತ್ರ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ವಿರುದ್ಧ ನೇರಾನೇರ ಸಮರ ನಡೆಯುತ್ತಿದೆ.
ಚುನಾವಣೆ ಸಮಯದದಲ್ಲಿ ಇದು ಬಿಜೆಪಿಗೆ ಟೆನ್ಷನ್ ಹೆಚ್ಚಿಸಿದ್ದು ಲಿಂಗಾಯತರ ಕಡೆಗಣನೆ ಆರೋಪದಿಂದ ಚುನಾವಣೆ ಹೊಡೆತದ ಆತಂಕ ಎದುರಾಗಿದೆ. ಈ ಲಿಂಗಾಯತ ಸಿಎಂ ಟೆನ್ಷನ್ ವಿಚಾರಕ್ಕೆ ಅಮಿತ್ ಶಾ ತಮ್ಮದೇ ಆದ ಸೂತ್ರವೊಂದನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ರಾಜ್ಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಲಿಂಗಾಯತ ಕಡೆಗಣನೆ ಅಸ್ತ್ರ ಎದುರಿಸಲು ರಾಜ್ಯ ನಾಯಕರಿಗೆ ಅಮಿತ್ ಶಾ ತಂತ್ರವನ್ನು ರವಾನಿಸಿದ್ದಾರೆ. ಈ ಲಿಂಗಾಯತ ದಾಳವನ್ನು ಚುನಾವಣೆ ಮುಗಿಯುವವರೆಗೂ ಬಳಕೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಶಾ ತಂತ್ರಗಾರಿಕೆ:
ಲಿಂಗಾಯತ ಸಿಎಂ ದಾಳ ಕಡೆಯವರೆಗೂ ಇರಿಸಿಕೊಳ್ಳಿ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‍ಗಿಂತಲೂ ಬಿಜೆಪಿಯ ಕೊಡುಗೆಯೇ ಹೆಚ್ಚಿದ್ದು, ಕಾಂಗ್ರೆಸ್ ಕಣ್ಣು ಒರೆಸುವ ತಂತ್ರಗಳಿಂದ ಸಮಯ ಸಾಧಕ ಆಟವಾಡುತ್ತಿದೆ.
ಈವರೆಗೆ ಇಬ್ಬರು ಲಿಂಗಾಯತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿದ್ದು ಮಾತ್ರವಲ್ಲದೇ ಅತೀ ಹೆಚ್ಚು ಟಿಕೆಟ್ ನೀಡಿ ಅತೀ ಹೆಚ್ಚು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದೆ.
ಬಿಜೆಪಿ ಲಿಂಗಾಯತ ನಾಯಕರಿಗೆ ಸೂಕ್ತ ಸ್ಥಾನಮಾನ, ಗೌರವ, ಪದವಿ ಅವಕಾಶ ಕೊಟ್ಟಿದ್ದರೆ ಕಾಂಗ್ರೆಸ್ ಒಬ್ಬರಿಗೂ ಸಿಎಂ ಹುದ್ದೆ ಕೊಟ್ಟಿಲ್ಲ. ಸಿಎಂ ಆಗಿದ್ದ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡು ಕೇವಲ ಒಂಭತ್ತೇ ತಿಂಗಳಿಗೆ ಸಿಎಂ ಹುದ್ದೆ ಕಿತ್ತುಕೊಂಡು ಅಪಮಾನ ಮಾಡಿತ್ತು.
ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋತಿದ್ದರೂ ಪರಿಷತ್‌ಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಗಿತ್ತು. ಜಗದೀಶ್ ಶೆಟ್ಟರ್ ಅವರಿಗೆ ಎಲ್ಲ ಪದವಿ ನೀಡಿ ಸಿಎಂ ಹುದ್ದೆಯನ್ನು ನೀಡಿ ಗೌರವ ನೀಡಲಾಗಿತ್ತು. ಪಕ್ಷದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದವರು ಈಗ ಪಕ್ಷದ್ರೋಹ ಮಾಡಿ ಹೋಗಿದ್ದಾರೆ. ಈ ವಿಚಾರವನ್ನು ಮನವರಿಕೆ ಮಾಡಿ ಜಾಗೃತಿ ಮೂಡಿಸಿ ಮತದಾರರ ಗೊಂದಲವನ್ನು ತಪ್ಪಿಸಿ.
ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…
ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…
ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…
ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…
ಕರ್ನಾಟಕದ 111 ತಾಲೂಕುಗಳ ವ್ಯಾಪ್ತಿಯ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,…