Advertisement
ಹವಾಮಾನ

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

Share

ರಾಜ್ಯದ ಹಲವೆಡೆ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ, ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯೂ ದಾಖಲಾಗಿದೆ. ಕರಾವಳಿಯ ಕೆಲವು ಭಾಗಗಳು ಹಾಗೂ ಒಳನಾಡಿನ ಕೆಲ ಸ್ಥಳಗಳಲ್ಲಿ ಮಳೆಯಾದ ವರದಿಯಾಗಿದೆ.

ಕೊಪ್ಪದಲ್ಲಿ 2 ಸೆಂ.ಮೀ., ಗಂಗಾವತಿ, ಕಳಸ, ಜಯಪುರ, ಕಡೂರು ಹಾಗೂ ಬೇಲೂರುಗಳಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೀಗ ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ಬೇಸಿಗೆಯಲ್ಲಿ ಉಷ್ಣಾಂಶ ಏರಿಕೆಯ ತೀವ್ರತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

ಮುಂದಿನ 5 ದಿನಗಳವರೆಗೆ ಕರಾವಳಿಯಲ್ಲಿ ಬಿಸಿ ಹಾಗೂ ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಇತ್ತ ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಜನರು ಬಿಸಿಗಾಳಿ ಪರಿಣಾಮದಿಂದ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Karnataka is witnessing rising temperatures, with Kalaburagi recording a high of 43.2°C. Scattered rainfall has been reported in parts of coastal and interior regions. The coastal belt is expected to remain hot and humid for the next five days, while Bengaluru may see a temperature rise of 2–3°C over the next 48 hours.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

6 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

6 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

6 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

16 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago