ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದ್ದು .ಅದರಲ್ಲೂ ಕಾಫಿನಾಡು ಚಿಕ್ಕಮಗಳೂರು ಟಾಪ್ 10ರ ಪೈಕಿ 2ನೇ ಸ್ಥಾನ ಲಭಿಸಿದ್ದು ಕಾಫಿ ನಾಡಿಗರು ಮತ್ತಷ್ಟು ಹೆಮ್ಮೆಪಡುವಂತಾಗಿದೆ.
ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ. ರೆಸ್ಪೈರರ್ ಲಿವಿಂಗ್ ಸೈನ್ಸಸ್ ಎರಡು ರೀತಿಯಲ್ಲಿ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸುತ್ತದೆ. ಮೊದಲು ಸರ್ಕಾರದ PM2.5 ಡೇಟಾದಲ್ಲಿ ಎನ್‌ಸಿಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯನ್ನು ಪತ್ತೆಹಚ್ಚಲು ಕಳೆದ ಒಂದು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗುವುದು.
ಇನ್ನೊಂದು ಕಡೆ ಚಳಿಗಾಲದಲ್ಲಿ PM2.5 ಡೇಟಾ, ಸರಿಸುಮಾರು ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧಗಾಳಿ ಇರುವ ನಗರವನ್ನು ಪತ್ತೆ ಮಾಡಲಾಗುತ್ತದೆ. ಅತ್ಯಂತ ಶುದ್ಧ ಗಾಳಿ ಇರುವ ಸ್ಥಳಗಳ ಪೈಕಿ ಮೊದಲ ಸ್ಥಾನವನ್ನು ಮಿಜೋರಾಂನ ಐಜ್ವಾಲ್ ಪಡೆದು ಕೊಂಡರೆ, ಎರಡನೇ ಸ್ಥಾನವನ್ನು ಕಾಫಿನಾಡು ಚಿಕ್ಕಮಗಳೂರು ಪಡೆದು ಕೊಂಡಿದೆ, ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ ನಗರವಿದೆ ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.
ಕರಾವಳಿ ಹಾಗೂ ಮಲೆನಾಡು ಭಾಗರದಲ್ಲಿ ಜುಲೈ 6 ರಿಂದ ಮಳೆಯ ಪ್ರಮಾಣ ಸ್ವಲ್ಪ…
ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…