ದಕ್ಷಿಣ ಕೇರಳ ಕರಾವಳಿಯವರೆಗೆ ತಲುಪಿರುವ ವಾಯುಮಂಡಲದ ತಿರುವಿಕೆ ಹಾಗೂ ಉತ್ತರ ಭಾರತದ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶುಷ್ಕ ಗಾಳಿ ಸೆಳೆಯಲ್ಪಡುವ ಸಾಧ್ಯತೆಯಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆಯಾಗಬಹುದು ಎಂದು ಸದ್ಯದ ಹವಾಮಾನ ವಿಶ್ಲೇಷಣೆ ತಿಳಿಸುತ್ತದೆ.
ಅಕ್ಟೋಬರ್ 24ರಂದು ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಮಂಡಲದ ತಿರುವಿಕೆ ಉಂಟಾಗುವ ಸಾಧ್ಯತೆಯಿದೆ. ಇದು ಅಕ್ಟೋಬರ್ 26ರ ಸುಮಾರಿಗೆ ಚಂಡಮಾರುತವಾಗಿ ರೂಪುಗೊಳ್ಳುವ ಲಕ್ಷಣಗಳಿವೆ ಎಂದು ಅಂದಾಜಿಸಲಾಗಿದೆ.
ಈ ಚಂಡಮಾರುತವು ಉತ್ತರದ ಕಡೆಗೆ ಚಲಿಸಿದರೆ ಕರ್ನಾಟಕದತ್ತ ತೇವಾಂಶದ ಹರಿವು ಕಡಿಮೆಯಾಗಿ, ರಾಜ್ಯದಲ್ಲಿ ಮಳೆಯ ಸಾಧ್ಯತೆ ಮತ್ತಷ್ಟು ಕ್ಷೀಣಿಸಬಹುದು. ಇದರಿಂದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿರೀಕ್ಷಿತ ಹಿಂಗಾರು ಮಳೆಯ ಪ್ರಮಾಣದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಆದರೂ, ಚಂಡಮಾರುತದ ರಚನೆ, ಅದರ ಚಲನೆಯ ದಿಕ್ಕು ಮತ್ತು ತೇವಾಂಶದ ಹರಿವನ್ನು ಅವಲಂಬಿಸಿ ಹವಾಮಾನ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗಬಹುದು. ಆದ್ದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಾಗ ಹವಾಮಾನ ಮುನ್ಸೂಚನೆಗಳನ್ನು ಗಮನಿಸುವುದು ಸೂಕ್ತ.
Dry air moving in from northern India may reduce the likelihood of expected rainfall across Karnataka. A weather disturbance is likely to develop over the Bay of Bengal on October 24 and may intensify into a cyclonic storm around October 26. If the system moves northward, rainfall prospects in Karnataka could weaken further.
ಕಾಡಿನಲ್ಲಿ ಸಮಯ ಕಳೆಯುವುದು ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ರೋಗನಿರೋಧಕ…
ಮುಂಗಾರು ಮಳೆಯ ಕೊರತೆಯಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವ…
ಕರ್ನಾಟಕ ಸರ್ಕಾರವು ಆರ್ಟ್ ಪಾರ್ಕ್‌ಗೆ ಈವರೆಗೆ ₹62 ಕೋಟಿಗೂ ಅಧಿಕ ನೆರವು ನೀಡಿದ್ದು,…
ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ‘ಅನ್ನ…
ಮುಂದಿನ ಜೂನ್‌ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…