ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿಧಿಯೇ ನೀ ಯಾಕಿಷ್ಟು ಕ್ರೂರಿ…
ಕೋಟಿ ಜನರ ಜನಮಾನಸದಲ್ಲಿ ಅಚ್ಚಳಿಯದ ನೆನಪು “ಅಪ್ಪು”…
ಇನ್ನೆಂದಿಗೂ ಬಾರದ ಲೋಕ ಸೇರಿಬಿಟ್ಟೆಯಾ, ನೀ ಸೇರಿಬಿಟ್ಟೆಯಾ…?
ಕೋಟಿ ಜನರ ಪ್ರಾರ್ಥನೆಯೂ ಫಲಿಸದೇ ಹೋಯಿತು ಇಂದು…
ನಿಮ್ಮ ನಿಷ್ಕಲ್ಮಶ ಮನಸ್ಸು ದೇವರಿಗೂ ಇಷ್ಟವಾಗಿ ಕರೆಸಿ ಬಿಟ್ಟನೇ ನಿಮ್ಮ ತನ್ನ ಬಳಿ, ಆ ಪರಮಾತ್ಮನ ಬಳಿ…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿಮ್ಮ ಬದುಕು ಅಂತ್ಯವಾಯಿತೇ, ಇಲ್ಲಿಗೆ ಕೊನೆಯಾಯಿತೇ…?
ನಿಮ್ಮ ಬದುಕ ಯಾತ್ರೆಯು ಇಂದು ಕೊನೆಯಾಯಿತೇ, ಇಲ್ಲಿಗೆ ಮುಗಿದು ಹೋಯಿತೇ…?
ಹಾಡುತಿದ್ದ ನಿಮ್ಮ ಸ್ವರವು ಮೌನವಾಗಿದೆ, ಇಂದು ಮೌನವಾಗಿದೆ…
ಕುಣಿಯುತ್ತಿದ್ದ ನಿಮ್ಮ ಕೈ-ಕಾಲುಗಳು ನಿಂತುಹೋಗಿವೆ, ಇಂದು ನಿಂತು ಹೋಗಿವೆ…
ನಿಮ್ಮ ಬದುಕ ಯಾತ್ರೆಯು ಇಂದು ಮುಗಿದು ಹೋಯಿತೇ, ಇಲ್ಲಿಗೆ ಕೊನೆಯಾಯಿತೇ…?
ನೀವು ಇಂದು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ಉಳಿದು ಹೋಗಿವೆ, ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದುಹೋಗಿವೆ…
ನಿಮ್ಮ ಬದುಕ ಸಾಧನೆಯೆಲ್ಲಾ ನಮಗೆ ದಾರಿದೀಪವಾಗಿ, ನಿಮ್ಮ ಪ್ರತಿಯೊಂದು ಹೆಜ್ಜೆ ನಮ್ಮ ಬದುಕಿಗೆ ಸ್ಪೂರ್ತಿಯಾಗಿ ಕಾಣುವುದು, ನಮ್ಮ ಮುನ್ನಡೆಸುವುದು…
ಇಂದು ನೀವು ಇಲ್ಲದೇ ಹೋದರೂ, ನಿಮ್ಮ ನೆನಪುಗಳೆಲ್ಲಾ ನಮ್ಮ ಮನದಲ್ಲಿ ಉಳಿದುಹೋಗಿವೆ, ಅಚ್ಚಾಗಿ ಉಳಿದು ಹೋಗಿವೆ…
ಮುಂದಿನ ಜನ್ಮದಲ್ಲಿ ನೀವು ಇದೇ ಕರುನಾಡಿನಲ್ಲಿ ವೀರ ಕನ್ನಡಿಗನಾಗಿ ಹುಟ್ಟಿ ಬನ್ನಿ, ಮತ್ತೊಮ್ಮೆ ಹುಟ್ಟಿ ಬನ್ನಿ…
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ನಿಮಗೆ ನಾವು ದುಃಖದ ವಿದಾಯ ಹೇಳುತಿರುವೆವು, ನಾವು ಹೇಳುತಿರುವೆವು…
ಕೋಟಿ ಹೃದಯ ಗೆದ್ದ ಕುವರ, ಆಗಿಹೋದ ಇಂದು ಅಮರ…
ಹೇಳು ವಿದಿಯೇ ನೀನು ಯಾಕಿಷ್ಟು ಕ್ರೂರಿ…
ಕೋಟಿ ಜನರ ಪ್ರಾರ್ಥನೆಯು ಫಲಿಸದೇ ಹೋಯಿತು ಇಂದು…
ನಿಮ್ಮ ಬದುಕ ಯಾತ್ರೆಯು ಇಲ್ಲಿಗೆ ಮುಗಿದು ಹೋಯಿತು, ಇಂದು ಕೊನೆಯಾಯಿತು…
ನೀವು ಮತ್ತೆ ಹುಟ್ಟಿ ಬನ್ನಿ ನಮ್ಮ ಕರುನಾಡಿನ ಮನೆ ಮಗನಾಗಿ ಎಂದು ನಾವು ಬೇಡುತ್ತಾ ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತಿರುವೆವು, ನಾವು ಕೋರುತ್ತಿರುವೆವು…
# ಉಲ್ಲಾಸ್ ಕಜ್ಜೋಡಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…