ದೂರದ ದೇಶಲಿ ದೊಡ್ಡ ಹುದ್ದೆಲಿ
ಇರುವ ಮಂಙನ ನೆನ್ಸಿಕಂಡ್
ಹಳ್ಳಿಲಿ ಇರುವ ಅವ್ವ ಕಣ್ಣೀರ್ ಹಾಕಿದೆ
ಒಂಬತ್ತ್ ತಿಂಗ ಹೊತ್ತ್ ಹೆತ್ತ್
ಪೊರ್ಲ್ ಲಿ ಸಾಂಕಿ , ವಿದ್ಯೆ ಕಲ್ಸಿ
ವಿದೇಶಕ್ಕೆ ಕಳ್ಸಿದ ಮಂಙನ ಒಮ್ಮೆ ನೋಡೋಕು
ಪುಳ್ಳಿಕಳ ಕೈಲಿ ಹಿಡ್ದ್ ಆಡ್ಸೋಕು
ಅವ್ವನ ಆಸೆಗೆ ಮಿತಿನೇ ಇಲ್ಲೆ
ಎಸಿ ರೂಮ್ ಲಿ ಈಸಿ ಚೇರ್ ಲಿ
ಕುದ್ದ ಮಂಙಂಗೆ ಹೆತ್ತವ್ವನ ನೆಂಪಿಲ್ಲೆ
ಮೊಬೈಲ್ ಲಿ ಮುಳ್ಗಿ ಮೈಮರ್ತ ಪುಳ್ಳಿಕಳಿಗೆ
ಹಳ್ಳಿ ಅಜ್ಜಿನ ಹಳ್ಳಿ ಕತೆಗಳ ಹಂಗ್ ಬೇಕಿಲ್ಲೆ
ಸೊಸೆಗಂತೂ ಅತ್ತೆನ ನೋಡಿಕೆ ಮೊನ್ಸ್ ಇಲ್ಲೆ
ಹಳ್ಳಿ ಮನೆಲಿ ಸೋರುವ ಮಾಡ್ ನಡಿಲಿ
ಕುದ್ದ ಅವ್ವಂಗೆ ಮಂಙನ ಬುಟ್ಟ್ ಬೇರೆ ದಿಕ್ಕಿಲ್ಲೆ
ಎಲ್ಲರ ಎದ್ರ್ ಮಂಙನ ಗುಣಗಾನ ಮಾಡುವ ಅವ್ವ
ಉಂಬ ಬಟ್ಲ್ ಎದ್ರ್ ಮಾತ್ರ ಕಣ್ಣೀರ್ ಸುರ್ಸಿದೆ
ಮಂಙನ ಮಾತ್ ಗಾಗಿ ಕಾದ್ ಕಾದ್ ಮಲ್ಗಿದೆ
ಕಣ್ಣಿಗೆ ನಿದ್ದೆ ಹತ್ತುದ್ಲೆ, ಮೊನ್ಸ್ ಲಿ ಆಸೆ ಬುಡ್ದುಲೆ
ಮಂಙನ ಪೋನ್ ಇಂದ್ ಬಂದದೆ,ಈಗ ಬಂದದೆ
ಅವ್ವನ ಕಣ್ಣೀರ್ ನೋಡಿ ಬೇಜರಾಗಿ
ಮನೆಲಿರುವ ಬೊಗ್ಗ ನಾಯಿ ಕುಂಯಿ ಕುಂಯಿ ಹೇಳಿ
ಮೋರೆ ನೆಕ್ಕಿದೆ, ಅದರ ಬಾಸೆಲಿ ಸಮ್ದಾನಾ ಮಾಡ್ದೆ
ಅಪ್ರೂಪಕ್ಕೊಮ್ಮೆ ಮಂಙನ ಫೋನ್ ಬಾಕನ
ಅವ್ವ ಹಿಗ್ಗಿದೆ. ಕುಸಿಲಿ ಮತ್ತೆ ಕಣ್ಣೀರ್ ಹಾಕಿದೆ
ಹಕ್ಕಲೆ ಇರುವ ನಾಯಿ ಒಟ್ಟಿಗೆ ದುಃಖ ಹೇಳಿಕಂದೆ
ದೇವ್ರೆ ನನ್ನೊಮ್ಮೆ ಕರ್ಕಂತೇಳಿ ಬೇಡಿ ಮಲ್ಗಿದೆ
ಅವ್ವನಕ್ಕಲೆ ಯಾರ್ ಬಾಕೆ ಬೊತ್ತ್ಂತೇಳಿ ನಾಯಿ ಕಾದ್ ಕುದ್ದದೆ.
# ಅಪೂರ್ವ ಚೇತನ್ ಪೆರಂದೋಡಿ
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…