ಕಾರಣವೇ ಇಲ್ಲದೆ ಮನದಲ್ಲಿ
ಮೌನದ ಮೋಡ ಕವಿದಿದೆ.
ಹೆಜ್ಜೆಯ ಜೊತೆ ಗೆಜ್ಜೆಯ ಸಪ್ಪಳವಿದ್ದರೂ
ನಡಿಗೆಯಲಿ ಏಕಾಂಗಿತನದ ನೆರಳಿದೆ.
ಮನದ ಮೋಡಗಳ ನಡುವೆ ಅದೇಕೋ ಗುದ್ದಾಟ..
ಯಾಕೆ…..ಈ ಸಂಘರ್ಷ…?
ಹನಿಯಾಗಿ ಹರಿಯುತ್ತಿಲ್ಲ.. ಅಲ್ಲೇ ಬತ್ತಿದ ಭಾವ..
ಏನೀ … ತೊಳಲಾಟ…?
ಹೊತ್ತು ಸರಿದಷ್ಟು ಗಾಢ ಕತ್ತಲು ಆವರಿಸುತ್ತಿದೆ…
ಮೌನ ರಕ್ಕಸತನದಿ ಮೆರೆಯುತಿದೆ
ಮಾತು ಹೊರಬರಲು ಅಂಜುತಿದೆ
ಮೊಗದ ಕನ್ನಡಿಯಲಿ…..
ಪ್ರಶ್ನೆಗಳದೇ ಸುರಿಮಳೆ
ಎಲ್ಲಿದೆ …..ಉತ್ತರ…?
ಆದರೂ ಅದೆಲ್ಲೋ ಮೂಲೆಯಲಿ
ನಾಳಿನ ಬೆಳಕು ಕಾಣುವ
ಭರವಸೆಯ ಕಿಡಿಯು ಗೋಚರಿಸುತಿದೆ
# ಅಪೂರ್ವ ಚೇತನ್ ಪೆರಂದೋಡಿ
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.