ಕವನ | ದುರ್ಗದ ಓಬವ್ವ

December 18, 2021
12:53 PM

ನಮ್ಮಯ ಹೆಮ್ಮೆಯ ಕನ್ನಡ ನಾಡಲಿ
ಚಿತ್ರದುರ್ಗವೆನ್ನುವ ನಗರವಿದೆ.
ಐತಿಹ್ಯ ಸಾರುವ ಕಲ್ಲಿನ ಕೋಟೆಯು
ನಗರದ ಮಧ್ಯದಿ ಶೋಭಿಸಿದೆ

ಬಹು ಹಿಂದಿನ ಕಾಲದಿ ನಾಯಕ ಹೊಯ್ಸಳ
ಚಾಲುಕ್ಯರೆಲ್ಲರು ಜೊತೆಗೂಡಿ.
ಏಳು ಸುತ್ತಿನಲಿ ಭದ್ರತೆ ಹೊಂದಿದ
ಕೋಟೆಯ ಕಟ್ಟಿದರೊಡಗೂಡಿ

ಮಸೀದಿ ದೇಗುಲ ಇದರೊಳಗಿರುವುದು
ಹಿಡಿಂಬೇಶ್ವರ ಸಹಿತದಲಿ
ಪಾಂಡವರಂದಿನ ಕಾಲದಿ ಅಜ್ಞಾತ
ವಾಸದಲಿದ್ದರು ಈ ಸ್ಥಳದಿ

ಮದಕರಿನಾಯಕರಾಳಿದ ಕಾಲದಿ
ಧಾಳಿಯನಿಟ್ಟನು ಹೈದರನು
ಒಳಗಡೆ ನುಸುಳುತ ಕಿಂಡಿಯ ಮೂಲಕ
ಬರುತಲಿ ಇದ್ದರು ಶತ್ರುಗಳು

ಮುದ್ದುಹನುಮನ ಪತ್ನಿಯು ಓಬವ್ವ
ಕಂಡಳು ದುರುಳರ ಆಗಮನ
ಮೌನದಿ ಒನಕೆಯ ಹಿಡಿಯುತ ನಸುಳುತ
ಜನರಿಗೆ ಬಡಿದಳು ಪುನಾ ಪುನ

ಒಡನೆಯೆ ದೊರೆಗಳ ಕಿವಿಗದು ಮುಟ್ಟಿತು
ಅರಿಗಳು ನುಸುಳುವ ಸಂಗತಿಯು
ಆದರೆ ಕಪಟದಿ ಓರ್ವನು ಇರಿಯುತ
ಓಬವ್ವಳ ಪ್ರಾಣವ ಹೀರಿದನು

ಒನಕೆಯ ಓಬವ್ವ ಮಾಡಿದ ತ್ಯಾಗವು
ದೇಶದ ಪ್ರೇಮವ ಸಾರುತಿದೆ
ದುರ್ಗದ ಮಹಿಮೆಗೆ ಒಪ್ಪ ಓರಣವ
ನೀಡಿದ ಖ್ಯಾತಿಯ ಕಥೆಯು ಇದೇ.

ಓಬವ್ವನ ಪ್ರತಿಮೆಯು ಇಂದಿಗು ಇರುವುದು
ದುರ್ಗದ ನಗರದಿ ಸಂತೋಷ
ತ್ಯಾಗಕೆ ಅರ್ಥವ ಹುಡುಕುವ ಜನರಿಗೆ
ಬೇರೇತಕೆ ಬೇಕಿದೆ ಸಂದೇಶ

#ಡಾ ವಾಣಿಶ್ರೀ ಕಾಸರಗೋಡು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್
March 28, 2026
9:12 AM
by: ದ ರೂರಲ್ ಮಿರರ್.ಕಾಂ
ಸಂಸ್ಥೆಯ ನಿಜವಾದ ಶಕ್ತಿ : ಮಾನವ ಸಂಪನ್ಮೂಲವೇ ಯಶಸ್ಸಿನ ಮೂಲಾಧಾರ
March 27, 2026
2:05 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror