Advertisement
MIRROR FOCUS

#Agriculture | ಕೃಷಿ ಇಷ್ಟ ಪಟ್ಟು ದುಡಿದರೆ ಆಡಿ ಕಾರಲ್ಲಿ ಹೋಗಬಹುದು…! | ಕೇರಳದ ಯುವ ಕೃಷಿಕನ ಸ್ಟೋರಿ… |

Share

ಕೃಷಿ ಎಂದರೆ, ವ್ಯವಸಾಯ ಎಂದರೆ ನಷ್ಟ, ರೈತನ ಬದುಕೇ ಸಂಕಷ್ಟ ಎಂಬ ಋಣಾತ್ಮಕ ಭಾವನೆ ಎಲ್ಲೆಡೆಯೂ ಇದೆ. ಆದರೆ ಕೃಷಿಯನ್ನು ಇಷ್ಟಪಟ್ಟು, ಕೃಷಿಯೇ ಉಸಿರಾದರೆ ಯಶಸ್ಸು ಸಾಧ್ಯವಿದೆ. ಇದಕ್ಕೆ ಅನೇಕ ಉದಾಹರಣೆ ಇದೆ. ಇದೀಗ ಕೇರಳದ ಯುವಕನೊಬ್ಬ ಪಾಲಕ್‌ ಸೊಪ್ಪು ಮಾರಾಟಕ್ಕೆ  ಆಡಿ ಕಾರಲ್ಲಿ ಬಂದು ತಾನೇ ಸೊಪ್ಪು ಮಾರಾಟ ಮಾಡಿರುವುದು ಭಾರೀ ಸದ್ದು ಮಾಡಿದೆ.ಇನ್ಟಾಗ್ರಾಮ್‌ನ ರೀಲ್ಸ್‌ ಸದ್ದು ಮಾಡುತ್ತಿದೆ.

ರೈತ ಆಡಿ ಕಾರು ತೆಗೆಯಬಾರದೇ..?. ರೈತ ಆಡಿ ಕಾರಲ್ಲಿ ಬಂದಾಕ್ಷಣವೇ ಅದೇಕೆ ಸದ್ದಾಗುತ್ತಿದೆ..?. ಕಾರಣ ಇಷ್ಟೇ, ಕೃಷಿ ಎಂದರೆ ನಷ್ಟದ ಬದುಕು ಎಂಬ ಭಾವನೆ ಎಲ್ಲೆಡೆಯೂ ಇದೆ. ಆದರೆ ಕೃಷಿಯನ್ನು ವೈಜ್ಞಾನಿಕವಾಗಿ, ಯೋಜನಾಬದ್ಧವಾಗಿ ಮಾಡಿದರೆ ಯಶಸ್ಸು ಸಾಧ್ಯವಿದೆ ಎನ್ನುವುದಕ್ಕೆ ಕೇರಳದ ಯುವ ರೈತ ಸುಜಿತ್ ಸಾಕ್ಷಿಯಾಗಿದ್ದಾರೆ.

ರಸ್ತೆಬದಿಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಲು ಕೇರಳದ ಈ ಯುವ ರೈತ ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ. 44 ಲಕ್ಷ ರೂ.ಗಳ ಬೆಲೆಯ ಸೆಡಾನ್ ಆಡಿ ಕಾರಲ್ಲಿ ಆಗಮಿಸಿ ತನ್ನ ಬಟ್ಟೆ ಬದಲಾಯಿಸಿಕೊಂಡು ತರಕಾರಿ ಮಾರಲು ಪ್ರಾರಂಭಿಸುತ್ತಾರೆ.

ವ್ಯವಸಾಯವು ಸಾಮಾನ್ಯವಾಗಿ ದೈಹಿಕವಾದ ಬೇಡಿಕೆಯನ್ನು ಮತ್ತು ಆರ್ಥಿಕವಾಗಿ ಕಡಿಮೆ ಇಳುವರಿ ಇರುತ್ತದೆ ಎನ್ನುವ ಭಾವನೆಯನ್ನು ಹೊಂದಿದೆ. ಆದ್ದರಿಂದ, ಯುವ ಪೀಳಿಗೆಯು ಇಂತಹ ಆಯ್ಕೆಯನ್ನು ಎರಡನೇಯದ್ದಾಗಿಸುತ್ತಾರೆ. ಆದರೆ ಈಗ ಬೇಡಿಕೆಯಲ್ಲಿರುವ ಸಾವಯವ ಕೃಷಿಯಂತಹ ಆಯ್ಕೆಗಳನ್ನು ಮಾಡಿದರೆ  ಉತ್ತಮ ಆರ್ಥಿಕ ಆದಾಯವನ್ನು ನೀಡುತ್ತದೆ. ಈ ಯುವ ರೈತ ಮಾಡಿರುವ ಕೆಲಸವೂ ಅದೇ. ಸಾವಯವ ಕೃಷಿ. ಕೇರಳದ ಯುವ ರೈತ ಸುಜಿತ್ ಈ ಬದಲಾವಣೆಗೆ ಉತ್ತಮ ಉದಾಹರಣೆ. ತರಕಾರಿ ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿರುವ ದೃಶ್ಯ ಈಗ ವೈರಲ್‌ ಆಗುತ್ತಿದೆ.

ವೆರೈಟಿ ಫಾರ್ಮರ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿತ್ತು.ವರದಿಗಳ ಪ್ರಕಾರ, ಸುಜಿತ್ ಈ ಐಷಾರಾಮಿ ಆಡಿ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರಾಗಿ ಖರೀದಿಸಿದ್ದಾರೆ.ಈ ವಿಡಿಯೋ ನೋಡಿದ ಬಳಿಕ ಕೆಲವು ಯುವಕರು ತಮಾಷೆ ಪ್ರತಿಕ್ರಿಯೆಗಳು ಹೀಗಿತ್ತು, ತರಕಾರಿಗಳನ್ನು ಬೆಳೆಸುವುದಕ್ಕಿಂತ, ಮಾರಾಟ ಮಾಡುವುದಕ್ಕಿಂತ ಮೊದಲು ಆಡಿ ಖರೀದಿಸಬೇಕು..! ಎಂದೂ ಪ್ರತಿಕ್ರಿಯೆ ಮಾಡಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

5 hours ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

5 hours ago

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…

10 hours ago

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

19 hours ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

20 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

1 day ago