Advertisement
MIRROR FOCUS

ಪವಿತ್ರ ತುಳಸಿಯೂ ದೇವಸ್ಥಾನಕ್ಕೆ ಕಂಟಕವಾಯ್ತು | ಅತಿಯಾದ ವಿಷ ಸಿಂಪಡಣೆಯ ಪರಿಣಾಮ |

Share

ಕೇರಳದ ತ್ರಿಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ  ಸಮರ್ಪಣೆಗೆ ನಿರ್ಬಂಧ ವಿಧಿಸಲಾಗಿದೆ. ಹಾಗೆಂದು ದೇವಸ್ಥಾನದಲ್ಲಿ ದೇವರಿಗೆ ತುಳಸಿ ಅರ್ಪಣೆಯನ್ನೇ ಸ್ಥಗಿತಗೊಳಿಸಿಲ್ಲ. ವಿಷ ಸಿಂಪಡಣೆ ಮಾಡಿರುವ ತುಳಸಿ ಅರ್ಪಣೆಗಷ್ಟೇ ನಿರ್ಬಂಧ ಇದೆ.

Advertisement
Advertisement
Advertisement

ದೇವಸ್ಥಾನದಲ್ಲಿ ಕೀಟನಾಶಕ ಸಿಂಪಡಣೆಯ ತುಳಸಿಯನ್ನು  ಬಳಸುವುದನ್ನು ಮಾತ್ರಾ ನಿರ್ಬಂಧಿಸಿದೆ. ದೇವಾಲಯದ ಸಿಬ್ಬಂದಿಗಳು ಇಂತಹ ‘ತುಳಸಿ’ಯನ್ನು ಪದೇ ಪದೇ ದೇವರಿಗೆ ಅರ್ಪಣೆ ಮಾಡುವುದರಿಂದ ಅವರಿಗೆ  ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಆಗಾಗ ಕಂಡುಬರುತ್ತಿದ್ದ ಬಗ್ಗೆ  ದೂರುಗಳು ಬರುತ್ತಿದ್ದವು.

Advertisement

ಬಹುತೇಕ ಯಾತ್ರಾರ್ಥಿಗಳು ಅಂಗಡಿಗಳಿಂದ ‘ತುಳಸಿ’ಯನ್ನು ದೇವರಿಗೆ ಅರ್ಪಣೆ ಮಾಡುತ್ತಿದ್ದರು.  ಹೆಚ್ಚಿನ ಪ್ರಮಾಣದ ಕೀಟನಾಶಕವನ್ನು ಬಳಸಿಕೊಂಡು ವಾಣಿಜ್ಯ ಉದ್ದೇಶಗಳಿಗಾಗಿ  ತುಳಿಸಿಯನ್ನು ಬೆಳೆಸಲಾಗುತ್ತದೆ, ಇದರಿಂದಾಗಿ ಅವುಗಳನ್ನು ದಿನಗಳವರೆಗೆ ಸಂರಕ್ಷಿಸಲಾಗುತ್ತದೆ. ಕೀಟನಾಶಕ ಮಿಶ್ರಿತ ‘ತುಳಸಿ’ಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ  ‘ತುಳಸಿ’ ಮೇಲೆ ನಿರ್ಬಂಧ ಹೇರಲಾಗಿದೆ” ಎಂದು ದೇವಸ್ಥಾನದ ಆಡಳಿತವು ತಿಳಿಸಿದೆ.

ಆದರೆ, ದೇವಸ್ಥಾನದಲ್ಲಿ ತುಳಸಿ ಬಳಕೆಯೇ ನಿಷೇಧವಾಗಿಲ್ಲ. ತುಳಸಿ ಪ್ರಿಯ ಕೃಷ್ಣನಿಗಾಗಿ  ಪ್ರತ್ಯೇಕವಾಗಿ ಕೀಟನಾಶಕ ರಹಿತವಾದ ತುಳಿಸಿಯನ್ನು ಬೆಳೆದು ಅರ್ಪಣೆ ಮಾಡಲಾಗುತ್ತಿದೆ.  ಆದರೆ, ದೇವಾಲಯದಲ್ಲಿ ತುಳಸಿಯನ್ನು ನಿಷೇಧಿಸಲಾಗಿದೆ ಎಂದು ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ದೇವಾಲಯದ ನಿರ್ಧಾರದ ಹಿಂದೆ ಕೇರಳದ ಸಿಪಿಐ ಸರಕಾರವನ್ನು ದೂಷಿಸಲಾಗುತ್ತಿದೆ. ಆದರೆ ಇದಕ್ಕೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ವಿ.ಕೆ.ವಿಜಯನ್ ಹೇಳಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಾಸನಾಂಬೆ ಹುಂಡಿ ಎಣಿಕೆ | 12.63 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ |

ಹಾಸನಾಂಬೆ ದೇವಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಉತ್ಸವದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು …

4 hours ago

ದೇಶೀ ಆಹಾರ ಸೇವನೆಯಿಂದ  ಆರೋಗ್ಯ ವೃದ್ಧಿ | ಡಾ.ಖಾದರ್‌ ಅಭಿಪ್ರಾಯ |

ಅಕ್ಕಿ, ಗೋಧಿ, ಸಕ್ಕರೆಯಿಂದ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಿ ಲವಣಾಂಶಗಳು…

5 hours ago

ವಕ್ಫ್ ಆಸ್ತಿ ವಿವಾದ | ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ

ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ…

5 hours ago

ಸೌರ ವಿದ್ಯುತ್ ಉತ್ಪಾದನೆಯತ್ತ ಒಲವು | ಕಾರ್ಬನ್  ಡೈ ಆಕ್ಸೈಡ್ ತಗ್ಗಿಸುವ ಗುರಿ

ಒಂದು ಸಾವಿರ ಗಿಗಾವ್ಯಾಟ್ ಸೌರಶಕ್ತಿ  ಸಾಮರ್ಥ್ಯದ ಸ್ಥಾಪನೆ ಮತ್ತು ಪ್ರತಿವರ್ಷ ಒಂದು ಸಾವಿರ…

5 hours ago

ನಿಲ್ಲದ ಅಡಿಕೆ ಕಳ್ಳಸಾಗಾಣಿಕೆ | ಬರ್ಮಾ ಅಡಿಕೆ ಅಕ್ರಮ ಸಾಗಾಟಕ್ಕೆ ಮತ್ತೆ ತಡೆ |

ಈಶಾನ್ಯ ರಾಜ್ಯಗಳ ಮೂಲಕ ಭಾರತಕ್ಕೆ ಕಳ್ಳದಾರಿಯ ಮೂಲಕ ಸಾಗಾಟವಾಗುವ ಬರ್ಮಾ ಅಡಿಕೆ ಇನ್ನೂ…

5 hours ago