ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮಆಹಾರ ಪದ್ಧತಿಯು ಬದಲಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆಗಳಲ್ಲಿ ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುವುದು ಒಂದಾಗಿದೆ.
ಆಯುರ್ವೇದದ ಪ್ರಕಾರ ಮೂತ್ರಪಿಂಡದ ಕಲ್ಲುಗಳಿಗೆ ಅಶ್ಮರಿ ಎಂದು ಕರೆಯಲಾಗುತ್ತದೆ.ಈ ಸಂಸ್ಕೃತ ಪದವು ಎರಡು ಪದಗಳನ್ನು ಸೇರಿಸಿ ಮಾಡಲಾಗಿದೆ. ಅಸ್ಮ ಮತ್ತು ಅರಿ ಎಂಬ ಎರಡು ಪದಗಳು ಅಶ್ಮ ಎಂದರೆ ಕಲ್ಲು . ಅರಿ ಎಂದರೆ ಶತ್ರು ಎಂದರ್ಥ.
ಮೂತ್ರಪಿಂಡದ ಕಲ್ಲುಗಳಿಗೆ ಕಾರಣ :
* ಕ್ಯಾಲ್ಸಿಯಂ ಆಕ್ಸಲೆಟ್ ಮತ್ತು ಯೂರಿಕ್ ಆಮ್ಲದಂತಹ ಖನಿಜಗಳ ಮಟ್ಟಗಳು ಮೂತ್ರದಲ್ಲಿ ತುಂಬಾ ಹೆಚ್ಚಾಗಿ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ಆಗುತ್ತದೆ ಮತ್ತು ಅವುಗಳನ್ನು ಸರಿಯಾಗಿ ಕರಗಿಸಲು ದ್ರವದ ಕೊರತೆಯಿಂದಾಗಿ ಅವು ಹೆಚ್ಚಿನ ಸಮಯದವರೆಗೆ ಸಂಗ್ರಹವಾಗುತ್ತದೆ
* ಅತಿ ಕಡಿಮೆ ನೀರಿನ ಸೇವನೆ
* ಅತಿ ಪ್ರೊಟೀನ್, ಸಕ್ಕರೆ ಅಥವಾ ಸೋಡಿಯಂ ಸಮೃದ್ಧವಾಗಿರುವ ಆಹಾರ ಸೇವನೆ
* ಅಧಿಕ ತೂಕ/ಬೊಜ್ಜು
* ಮೂತ್ರಪಿಂಡದ ಕಲ್ಲುಗಳ ಅನುವಂಶಿಕ ಇತಿಹಾಸ ಹಾಗೂ ಹಳೆಯ ಕಿಡ್ನಿ ಸ್ಟೋನ್ ನ ಪುನರ್ ರಚನೆ
* ಕರುಳಿನ ಶಸ್ತ್ರಚಿಕಿತ್ಸೆ ಅಥವಾ ಗ್ಯಾಸ್ಟ್ರಿಕ್ ನ ಸಮಸ್ಯೆ
* ಪೋಲಿ ಸಿಸ್ಟಿಕ್ ಅಥವಾ ಸಿಸ್ಟಿಕ್ ನಂತಹ ಮೂತ್ರಪಿಂಡದ ಕಾಯಿಲೆಗಳು
* ಕ್ಯಾಲ್ಸಿಯಂ ಆಧಾರಿತ antacids(ಗ್ಯಾಸ್ಟ್ರಿಕ್ ಮಾತ್ರೆಗಳು )ಅಥವಾ ಮೂತ್ರವರ್ಧಕಗಳು ಸೇರಿದಂತೆ ಹಲವು ಔಷಧಿಗಳ ಪ್ರಯೋಗ
*Renal tubular Acidosis, Cystinuria, urinary tract infection( ಮೂತ್ರನಾಳದ ಸೋಂಕು) Hyperparathyroidism ಇತ್ಯಾದಿ ವೈದ್ಯಕೀಯ ಪರಿಸ್ಥಿತಿಗಳು
ಲಕ್ಷಣಗಳು
ಚಿಕಿತ್ಸೆ ಮತ್ತು ಪರಿಹಾರ – ಮೂತ್ರಪಿಂಡದ ಕಲ್ಲಿನ ಚಿಕಿತ್ಸೆಯು ಅದರ ಕಾರಣದ ಅಂಶಗಳ ಮೇಲೆ ಅವಲಂಬಿತವಾಗಿದೆ..ಕಲ್ಲಿನ ಗಾತ್ರ ಕಲ್ಲಿನ ಸಂಯೋಜನೆ ಮತ್ತು ಅದು ಮೂತ್ರನಾಳವನ್ನು ನಿರ್ಬಂಧಿಸುತ್ತದೆಯೇ ಹಾಗೂ ನೋವಿನ ತೀವ್ರತೆ ಇದನ್ನೆಲ್ಲ ಅರಿತು ಚಿಕಿತ್ಸೆ ನೀಡಬೇಕು
ಅತಿ ಹೆಚ್ಚು ನೀರನ್ನು ಕುಡಿಯುವ ಮೂಲಕ ಹಾಗೂ ನಿರ್ದಿಷ್ಟ ಆಹಾರ ವ್ಯಾಯಾಮ ಮತ್ತು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳಿಂದ ಸಣ್ಣ ಗಾತ್ರದ ಮೂತ್ರಪಿಂಡದ ಕಲ್ಲನ್ನು ದೇಹದಿಂದ ಹೊರಹಾಕಬಹುದು. ದೊಡ್ಡ ಗಾತ್ರದ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆಗಳು ಅಥವಾ ವ್ಯಾಪಕವಾದ ಹೈಡ್ರೋಥೆರಪಿ ಅಥವಾ. ಫ್ಲಶ್ ತೆರಪಿ ಬೇಕಾಗಬಹುದು
ಪರಿಹಾರ
ಮೂತ್ರ ಪಿಂಡದ ಕಲ್ಲನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಆಯುರ್ವೇದ ಗಿಡಮೂಲಿಕೆಗಳು
*ಪಾಷಾಣ ಭೇದ, ಪುನರ್ನವ, ವರುಣ, ಬಕುಲ, ಜಾಸ್ಮಿನ್, ಕೊತ್ತಂಬರಿ, ಕದಲಿಕಂದ (ಬಾಳೆ ದಿಂಡು )
ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಪ್ರಮುಖ ಅಂಶಗಳು :-
ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು ಮಂಗಳೂರು
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…
ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…