ಅತೀ ಕಿರಿಯ ವಯಸ್ಸಿನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರರಾಗಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರಿಂದ ನೇಮಕಗೊಂಡ ವಿದ್ಯಾರ್ಥಿ ನಾಯಕ ಶೌವಾದ್ ಗೂನಡ್ಕರವರಿಗೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಹುಟ್ಟೂರ ಸನ್ಮಾನ ಜರುಗಿತು.
ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರು ಗೂನಡ್ಕ ನಾಗರಿಕರ ಪರವಾಗಿ ಶೌವಾದ್ ಗೂನಡ್ಕರವರನ್ನು ಸಮ್ಮಾನಿಸಿ ಗೌರವಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶೌವಾದ್ ಗೂನಡ್ಕರವರು “ನನ್ನ ಹುಟ್ಟೂರಿನ ಜನರ ಪ್ರೀತಿ, ವಿಶ್ವಾಸ ಹಾಗೂ ಆದರಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನೂರಿನ ಜನರ ಸಮಸ್ಯೆಗಳಿಗೆ ಮಂಗಳೂರಿನಲ್ಲಿದ್ದುಕೊಂಡು ನಾನು ಸದಾ ಸ್ಪಂದಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಪ್ರಾರ್ಥನೆಯ ಫಲವಾಗಿ ಇಂದು ಕಿರಿಯ ವಯಸ್ಸಿನಲ್ಲೇ ನನ್ನನ್ನು ಗುರುತಿಸಿ ಡಿ.ಕೆ.ಶಿವಕುಮಾರ್ ರವರು ಈ ಮಹತ್ವದ ಜವಬ್ದಾರಿಯನ್ನು ನೀಡಿದ್ದಾರೆ” ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ಫೆಡರೇಶನ್, ಸುಳ್ಯ ಇದರ ಗೌರವಾಧ್ಯಕ್ಷರಾದ ಕೆ.ಪಿ.ಜಾನಿಯವರು ಅಭಿನಂದನಾ ಭಾಷಣ ಮಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಜಗದೀಶ್ ರೈ, ಮಹಮ್ಮದ್ ಕುಂಞ ಗೂನಡ್ಕ, ಜಿ.ಕೆ.ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರುಗಳಾದ ಮೋಹಿನಿ ವಸಂತ ಗೌಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಆಶಾ ವಿನಯ್ ಕುಮಾರ್, ಮುಖಂಡರುಗಳಾದ ದಿನಕರ್ ಗೌಡ ಸಣ್ಣಮನೆ, ತಾಜ್ ಮಹಮ್ಮದ್, ವಸಂತ ಗೌಡ ಪೆಲ್ತಡ್ಕ, ಎಸ್.ಕೆ.ಹನೀಫ್, ಬಾಲಚಂದ್ರ, ವಿನಯ್ ಕುಮಾರ್, ಜಿ.ಜಿ.ನವೀನ, ರಾಜು ನೆಲ್ಲಿಕುಮೇರಿ, ತಾಜುದ್ದೀನ್ ಅರಂತೋಡು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಕೆ.ಅಬೂಸಾಲಿ ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…