ಮಂಗಳೂರು : ಕೊರೊನಾ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್‍ಪಾಸ್ ಸೌಲಭ್ಯವಿದ್ದು ಮಂಗಳೂರು/ಸ್ಟೇಟ್‍ಬ್ಯಾಂಕ್-ಧರ್ಮಸ್ಥಳ, ಮಂಗಳೂರು/ಸ್ಟೇಟ್‍ಬ್ಯಾಂಕ್-ಉಪ್ಪಿನಂಗಡಿ, ಮಂಗಳೂರು/ಸ್ಟೇಟ್‍ಬ್ಯಾಂಕ್-ಸುಬ್ರಹ್ಮಣ್ಯ, ಮಂಗಳೂರು/ಸ್ಟೇಟ್‍ಬ್ಯಾಂಕ್-ಬಿ.ಸಿ.ರೋಡ್, ಮಂಗಳೂರು/ ಸ್ಟೇಟ್‍ಬ್ಯಾಂಕ್ – ಉಡುಪಿ, ಮಾರ್ಗಗಳಲ್ಲಿ ಸದರಿ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತದೆ. ಪಾಸು ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು ಇಂತಿವೆ- ಮಂಗಳೂರು ಬಸ್‍ನಿಲ್ದಾಣ ಮೊಬೈಲ್ ಸಂಖ್ಯೆ 7760990720, ಸ್ಟೇಟ್‍ಬ್ಯಾಂಕ್ ಬಸ್ಸು ನಿಲ್ದಾಣ ಮೊಬೈಲ್ ಸಂಖ್ಯೆ 9663266001, ಉಡುಪಿ ಬಸ್‍ನಿಲ್ದಾಣ ಮೊಬೈಲ್ ಸಂಖ್ಯೆ 9663266400, ಕುಂದಾಪುರ ಬಸ್ಸು ನಿಲ್ದಾಣ ಮೊಬೈಲ್ ಸಂಖ್ಯೆ 9663266009 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಇವರ ಪ್ರಕಟಣೆ ತಿಳಿಸಿದೆ.
ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…
ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…
ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…
ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…
ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…