ಕೆಎಸ್‌ಆರ್‌ಟಿಸಿಯು(KSRTC) ಪ್ರಯಾಣಿಕರಿಗೆ ನೂತನ ಸೇವೆಗಳಿಗೆ ಮುಂದಾಗಿದ್ದು, ಬ್ರಾಂಡಿಂಗ್ ಪರಿಕಲ್ಪನೆಯನ್ನು ಜನರ ತೀರ್ಮಾನಕ್ಕೆ ಬಿಟ್ಟಿದೆ. ಬಿಎಸ್ 6-9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಮತ್ತು ಒಲೆಕ್ಸಾ ಎಲೆಕ್ಟ್ರಿಕ್ ಈ ಎರಡು ಮಾದರಿಯ ಬಸ್‌ಗಳಿಗೆ ನಿಮ್ಮ ಉತ್ತಮವಾದ ಐಡಿಗಳನ್ನು ಕಳುಹಿಸುವ ಮೂಲಕ ನಗದು ಬಹುಮಾನವನ್ನು ಪಡೆಯಬಹುದು ಎಂದು ತಿಳಿಸಿದೆ.
ನೂತನ ಶ್ರೇಣಿಯ ಎರಡು ರೀತಿಯ ಬಸ್‌ಗಳಿಗೆ ತಮ್ಮಿಂದ ಸೂಕ್ತವಾದ ಬ್ರಾಂಡ್, ಹೆಸರು, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸಗಳನ್ನು ನಿರೀಕ್ಷಿಸುತ್ತಿದೆ. ಅಲ್ಲದೇ ಉತ್ತಮ ಟ್ಯಾಗ್‌ನೊಂದಿಗೆ ಬ್ರಾಡ್ ಹೆಸರನ್ನು ಯಾರು ಸೂಚಿಸುತ್ತಾರೆಯೋ ಅಂತಹವರಿಗೆ 10,000 ರೂಪಾಯಿ ನಗದು ಬಹುಮಾನವನ್ನು ಕೊಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಅಲ್ಲದೆ ಉತ್ತಮವಾಗಿ ಗ್ರಾಫಿಕ್ಸ್ ನೀಡಿದವರಿಗೆ 25,000 ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದೆ.
ನೀವು ಮಾಡುವ ಬ್ರಾಂಡ್ ಐಡಿಯಾಗಳನ್ನು cpro@ksrtc.org ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅಥವಾ ಟ್ವಿಟರ್ ಖಾತೆಯಾದ KSRTC-journeys, KSRTC.karnataka ಫೇಸ್ ಬುಕ್ ಐಡಿಗೆ ಕಳುಹಿಸಬಹುದಾಗಿದೆ. ನೀವು ಡಿಸೆಂಬರ್ 05, 2022ರ ಒಳಗೆ ನಿಮ್ಮ ಐಡಿಯಾಗಳನ್ನು ಕಳುಹಿಸಬೇಕು ಎಂದು ತಿಳಿಸಿದೆ.
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜ ಚನ್ನ ಬೋಂಡಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ ಎಂ ಜಿ ಸಿದ್ದೇಶ…