ದೂರದ ಊರಿನಲ್ಲಿರುವ ಸಂಬಂಧಿಕರಿಗೆ ಏನಾದ್ರು ಪಾರ್ಸೆಲ್ ಕಳಿಸಬೇಕಾದ್ರೆ ತಟ್ಟನೆ ನೆನಪು ಬರೋದು ಕೆಎಸ್‌ಆರ್‌ಟಿಸಿ. ಚಾಲಕನಿಗೂ, ನಿರ್ವಹಕನಿಗೂ ಏನಾದರೂ ಗೌರವಧನ ಕೊಟ್ಟರೆ ಆಯ್ತು, ಪಾರ್ಸೆಲ್ ಖಚಿತವಾಗಿಯೂ ತಲಪುತ್ತೆ ಎನ್ನುವ ನಂಬಿಕೆ. ಹೆಚ್ಚಿನ ಬಸ್ ಗಳಲ್ಲಿ ಈ ಸೇವೆ ಇದೆ. ಜನ ಮಾತ್ರವಲ್ಲದೆ ಸರಕುಗಳನ್ನು ಕೆಎಸ್‌ಆರ್‌ಟಿಸಿ ಸಾಗಿಸುತ್ತದೆ. ಇನ್ನು ಮೇಲೆ ಭವಿಷ್ಯದಲ್ಲಿ ಸರಕು ಸಾಗಾಣಿಕೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ ಕೆಎಸ್‌ಆರ್‌ಟಿಸಿ.
ಕೆಎಸ್‌ಆರ್‌ಟಿಸಿ #KSRTC ಶೀಘ್ರದಲ್ಲೇ ಲಾರಿಗಳ ಸೇವೆ ಒದಗಿಸಲಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಸರಕು #Goods ಸಾಗಾಣಿಕೆಗಾಗಿಯೇ ಪ್ರತ್ಯೇಕ ವಾಹನಗಳ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಸರಕು ಸಾಗಾಣಿಕೆ ಸೇವೆಯನ್ನು ನೀಡಲು ಲಾರಿಗಳನ್ನು ಒದಗಿಸಲು ಮುಂದಾಗುತ್ತಿದೆ. ಪ್ರಸ್ತುತ KSRTC ತನ್ನ ಸರಕು ಸಾಗಾಣಿಕೆಗಳನ್ನು ಬಸ್ಗಳಲ್ಲೇ ಪಾರ್ಸೆಲ್ ಮೂಲಕ ಸಾಗಣೆ ಮಾಡುತ್ತದೆ. ಆದರೆ ಭವಿಷ್ಯದಲ್ಲಿ ಸರಗು ಸಾಗಾಣಿಕೆ ವ್ಯವಹಾರದ ಮೇಲೆ ಕಣ್ಣಿಟ್ಟು ಲಾರಿಗಳನ್ನು ಖರೀದಿಸಲು ಮುಂದಾಗಿದೆ.
ಯೋಜನೆಯ ಮೊದಲ ಹಂತದ ಭಾಗವಾಗಿ ಒಟ್ಟು 10 KSRTC ಲಾರಿಗಳು ಸೇವೆ ಒದಗಿಸಲಿವೆ ಎನ್ನಲಾಗಿದೆ. ಇತ್ತ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾಗಿರುವ ಶಕ್ತಿ ಯೋಜನೆಗೆ ನಾಡಿನಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಸಾವಿರಾರು ಮಹಿಳೆಯರು ಯೋಜನೆಯ ಲಾಭವನ್ನು ತಮ್ಮ ಪ್ರತಿನಿತ್ಯದ ಜೀವನದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಸರ್ಕಾರಿ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಕೆಗೆ 30.74 ಕೋಟಿ ರೂಪಾಯಿ ವೆಚ್ಚದ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಂಪುಟ ಅಸ್ತು ಎಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಹೇಮಾವತಿ ನದಿ ನೀರಿಗೆ…
ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಗಮನದಲ್ಲಿಟ್ಟುಕೊಂಡು ಮಧ್ಯ ರೈಲ್ವೆಯು ಛತ್ರಪತಿ ಶಿವಾಜಿ…
ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಪ್ರಮುಖ ಜಲಾಶಯಗಳ ನಿರ್ವಹಣೆ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಪತ್ತೆ ಹಾಗೂ ಅವುಗಳ ಚಲನವಲನದ ಮಾಹಿತಿ ಪಡೆಯಲು ರೇಡಿಯೋ…
ನಂದಿನಿಯ ಎಲ್ಲಾ ಬ್ರ್ಯಾಂಡ್ ಹಾಲಿನ ಜೊತೆಗೆ ಮೊಸರಿನ ದರವು ಒಂದು ಲೀಟರ್‌ಗೆ 4…