ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ | ವಸತಿಗೆ ಕೊಠಡಿ ಸಿಗದೆ ಪರದಾಡಿದ ಭಕ್ತರು |

April 16, 2022
10:34 PM

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಜನಸಂದಣಿ ಕಂಡುಬಂದಿದೆ. ಶನಿವಾರ ರಾತ್ರಿ ವಸತಿಗೆ ರೂಮ್ ಸಿಗದೇ ಭಕ್ತಾದಿಗಳು ಪರದಾಟ ನಡೆಸಿದರು. ಭಕ್ತಾದಿಗಳು  ರಸ್ತೆಯಲ್ಲಿ ಹಾಗೂ ದೇವಸ್ಥಾನದ ಹಾಲ್ ಗಳಲ್ಲಿ ಮಹಿಳೆಯರು, ಮಕ್ಕಳೊಂದಿಗೆ ವಿಶ್ರಾಂತಿ ಪಡೆದರು.

Advertisement
Advertisement
Advertisement
Advertisement

Advertisement

ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ವಿವಿದೆಡೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ  ಭಕ್ತಾದಿಗಳು ಆಗಮಿಸುತ್ತಿದ್ದಾರೆ.  ಎ.16 ರ ರಾತ್ರಿ ವಿಪರೀತ ಸಂದಣಿ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ಕೊಠಡಿಗಳು ಭರ್ತಿಯಾದವು. ದೇವಸ್ಥಾನದ ಕಡೆಯಿಂದಲೂ ಯಾವುದೇ ವ್ಯವಸ್ಥೆ ಇರಲಿಲ್ಲ.  ಹೀಗಾಗು ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆಗಳಿಲ್ಲದೆ ಭಕ್ತರು ರಸ್ತೆಯಲ್ಲೇ ಮಲಗಿದ ಘಟನೆ ನಡೆಯಿತು. ಇದೇನು ಅಚ್ಚರಿಯಲ್ಲ, ಆದರೆ ಈಗ ಮಳೆಯ ಅಬ್ಬರವೂ ಇರುವ ಕಾರಣದಿಂದ ಮಳೆಯಾದರೆ ಭಕ್ತಾದಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ.  ಹೀಗಾಗಿ ಭಕ್ತಾದಿಗಳಿಗೆ ರಾತ್ರಿ ವೇಳೆ ಇಂತಹ ಸಂದರ್ಭದಲ್ಲಿ ತಂಗಲಿ ದೇವಸ್ಥಾನದ, ಖಾಸಗಿಯವರ ಹಲವು ವಸತಿ ಗೃಹಗಳು, ದೇವಸ್ಥಾನ ಸಭಾಂಗಣಗಳು, ಹಳೆ ಪ್ರಾಥಮಿಕ ಶಾಲಾ
ಕಟ್ಟಡಗಳ ಬಳಕೆ ಮಾಡಬೇಕಾಗಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದ ನಂಬರ್‌ ವನ್‌ ದೇವಸ್ಥಾನವಾಗಿದೆ. ಇಲ್ಲಿ ಭಕ್ತಾದಿಗಳಿಗೆ ರಾತ್ರಿ ತಂಗಲು ರಸ್ತೆಯ ವ್ಯವಸ್ಥೆಯಾಗಬಾರದು, ಇದಕ್ಕಾಗಿ ಸೂಕ್ತ ವ್ಯವಸ್ಥೆ ಇಲ್ಲಿನ ಆಡಳಿತ ಹಾಗೂ ಸರ್ಕಾರ ಮಾಡಬೇಕು ಎಂದು ಗ್ರಾ. ಪಂಚಾಯತ್ ಸದಸ್ಯರಾದ ಹರೀಶ ಇಂಜಾಡಿ ಮಾಧ್ಯಮದ ಮೂಲಕ ಮನವಿ ಮಾಡಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
February 28, 2025
8:45 PM
by: ದ ರೂರಲ್ ಮಿರರ್.ಕಾಂ
ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |
February 28, 2025
7:51 AM
by: The Rural Mirror ಸುದ್ದಿಜಾಲ
ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ
February 28, 2025
7:40 AM
by: ದ ರೂರಲ್ ಮಿರರ್.ಕಾಂ
ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗುತ್ತಿರುವ ಅರಣ್ಯ ಇಲಾಖೆ |
February 28, 2025
7:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror