#ಕುಕ್ಕೆಸುಬ್ರಹ್ಮಣ್ಯ | ನೌಕಾವಿಹಾರ ಹಾಗೂ ಅವಭೃತೋತ್ಸವ |

Advertisement
Advertisement

 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಬಳಿಕ ಬುಧವಾರ ಬೆಳಗ್ಗೆ ಕುಮಾರಧಾರಾ ನದಿಯಲ್ಲಿ ಶ್ರೀದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.

Advertisement

Advertisement
Advertisement

ದೇವಳದಿಂದ ಬಂಡಿ ರಥದಲ್ಲಿ ಶ್ರೀದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು. ತದನಂತರ ಕುಮಾರಧಾರಾ ನದಿ ತಟದವರೆಗೆ ಸಾಗಿಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾವಿಹಾರ ನಡೆಯಿತು. ಬಳಿಕ ಅವಭೃತೋತ್ಸವ ನಡೆಯಿತು. ಶ್ರೀ ಕ್ಷೇತ್ರದ ಆನೆ ಯಶಸ್ವಿಯು ನದಿನೀರಿನಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸಿತು. ನೂರಾರು ಭಕ್ತಾದಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

Advertisement
Advertisement

Reaction :
ನಿಮ್ಮ ಪ್ರತಿಕ್ರಿಯೆಗೆ :

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "#ಕುಕ್ಕೆಸುಬ್ರಹ್ಮಣ್ಯ | ನೌಕಾವಿಹಾರ ಹಾಗೂ ಅವಭೃತೋತ್ಸವ |"

Leave a comment

Your email address will not be published.


*