Advertisement
Open ಟಾಕ್

Open Talk | ಕುಕ್ಕೆ ಸುಬ್ರಹ್ಮಣ್ಯದ ಎರಡು ಕಡೆ ಆಶ್ಲೇಷ ಬಲಿ ಪೂಜೆ ನಡೆಸಿದ ಸಚಿವರು…! |

Share

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಚಿವರು ಒಂದೇ ದಿನ ಎರಡು ಕಡೆ ಆಶ್ಲೇಷ ಬಲಿ ಪೂಜೆ ಮಾಡಿರುವುದು  ಈಗ ಭಕ್ತರ ನಡುವೆ ಚರ್ಚೆಗೆ ಕಾರಣವಾಗಿದೆ. ಒಂದೇ ದಿನ, ಒಂದು ಕ್ಷೇತ್ರದ ಎರಡು ಕಡೆ ಒಂದೇ ಸೇವೆ ಮಾಡಿರುವುದರ  ವಿಶೇಷತೆ ಏನು ಹಾಗೂ ಈ ಬಗ್ಗೆ ಇರುವ ಧಾರ್ಮಿಕ ಜಿಜ್ಞಾಸೆಗಳು ಚರ್ಚೆಯ ವಿಷಯ.

Advertisement
Advertisement
Advertisement
Advertisement

ಧಾರ್ಮಿಕ ಆಚರಣೆ ಈ ದೇಶದ ಪ್ರತಿಯೊಬ್ಬನ ಖಾಸಗಿ ವಿಷಯ. ಯಾರು ಎಲ್ಲಿ ಬೇಕಾದರೂ ಪೂಜೆ, ಸೇವೆ ಮಾಡಬಹುದು. ಯಾವ ಧರ್ಮವೂ ಇದಕ್ಕೆ ಹೊರತಲ್ಲ. ಹೇಗೆ ಬೇಕಾದರೂ ದೇವತಾ ಆರಾಧನೆ ಮಾಡಲಿ ಅದು ಖಾಸಗಿ ವಿಷಯ. ಆದರೆ ಸಚಿವರೊಬ್ಬರು ಸಾರ್ವಜನಿಕವಾಗಿ ಮಾಡುವ ಎಲ್ಲಾ ಕಾರ್ಯಗಳು ಸಮಾಜದಲ್ಲಿ ಗಮನ ಸೆಳೆಯುತ್ತದೆ. ಈಗ ಅದೇ ಮಾದರಿಯಲ್ಲಿ ಗಮನ ಸೆಳೆದ ವಿಷಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಡಾ.ಅಶ್ವತ್ಥ್‌ ನಾರಾಯಣ ಮಾಡಿಸಿರುವ ಆಶ್ಲೇಷ ಬಲಿ ಪೂಜೆ.

Advertisement

Advertisement

ಈ ರಾಜ್ಯದ ಸಚಿವರು ಯಾವುದೇ ಕ್ಷೇತ್ರಕ್ಕೆ ಆಗಮಿಸುವ ವೇಳೆ, ಖಾಸಗಿ ಕಾರ್ಯಕ್ರಮವಾದರೂ ಸರ್ಕಾರವೇ ಎಲ್ಲಾ ವ್ಯವಸ್ಥೆ ಮಾಡುತ್ತದೆ, ಪೊಲೀಸ್‌ ಭದ್ರತೆಯೂ ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯವೂ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ, ಈ ರಾಜ್ಯದ ನಂಬರ್‌ ವನ್‌ ದೇವಸ್ಥಾನ.  ಹೀಗಾಗಿ ಎಲ್ಲಾ ವ್ಯವಸ್ಥೆಗೂ ದೇವಸ್ಥಾನದ ವತಿಯಿಂದಲೇ ಮಾಡಲಾಗುತ್ತದೆ. ಆದರೆ ಸಚಿವರು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಬೆಳಗ್ಗೆ ಆಶ್ಲೇಷ ಬಲಿ ಪೂಜೆ ನಡೆಸಿ ಆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಸಿದರು. ಒಂದೇ ದಿನ ಎರಡು ಕಡೆ ಒಂದೇ ಸೇವೆ ಮಾಡಿಸಿರುವುದು  ಈಗ ಭಕ್ತಾದಿಗಳ ನಡುವೆ ಇರುವ ಚರ್ಚೆಯ ವಿಷಯ. ಇದೇ ವಿಷಯಕ್ಕೆ ಸಂಬಂಧಿಸಿ ಈ ಹಿಂದೆ ಸಾಕಷ್ಟು ಚರ್ಚೆಗಳು, ವಾದ-ವಿವಾದಗಳು ನಡೆದಿತ್ತು. ಇದೀಗ ಸಚಿವರೇ ಸೇವೆಗಳನ್ನು ಎರಡು ಕಡೆ ಮಾಡಿಸಿರುವುದು  ಭಕ್ತಾದಿಗಳಲ್ಲಿ  ಚರ್ಚೆಗೆ ಕಾರಣವಾದ ವಿಷಯ.

ಇಲ್ಲಿ ಸರ್ಪಸಂಸ್ಕಾರ ಸೇವೆಗಳು ಕೂಡಾ ಇದೇ ಮಾದರಿಯಲ್ಲಿ ನಡೆದ ಬಗ್ಗೆ ಭಕ್ತರು ಹೇಳುತ್ತಾರೆ. ಇತರ ಭಕ್ತಾದಿಗಳು ಇಲ್ಲಿ ಸೇವೆಯನ್ನು ಎರಡು ಕಡೆ ಮಾಡಿಸಿದ್ದೂ ಇದೆ. ಇದೇ ಕಾರಣದಿಂದ ಈ ಹಿಂದೆ ಪ್ರಕರಣಗಳು ದಾಖಲಾಗಿತ್ತು. ಇದು ಧಾರ್ಮಿಕ ಸೂಕ್ಷ್ಮ ವಿಷಯವಾದ್ದರಿಂದ ಚರ್ಚೆಯಾಗದೆ , ವಿದ್ವಾಂಸರೂ ಈ ಬಗ್ಗೆ ಮೌನ ವಹಿಸಿ ಪ್ರಕರಣಗಳು ಅಲ್ಲಿಗೇ ತಿಳಿಯಾಗಿತ್ತು.

Advertisement

ಧಾರ್ಮಿಕ ಸಂಗತಿಗಳು ಯಾವತ್ತೂ ಖಾಸಗಿ, ಅದು ಪ್ರಶ್ನಾತೀತ, ಅದು ನಂಬಿಕೆಯ ಪ್ರಶ್ನೆ. ಇಲ್ಲಿ ಸಚಿವರು ಅಥವಾ ಪ್ರಮುಖರು ಎರಡು ಕಡೆಗಳಲ್ಲಿ ಒಂದೇ ಸೇವೆಗಳನ್ನು ಮಾಡುವಾಗ ಸಾಮಾನ್ಯ ಭಕ್ತರಲ್ಲಿ  ಅದು ಚರ್ಚೆ ಹಾಗೂ ಚಿಂತನೆಗೆ ಕಾರಣವಾಗುತ್ತದೆ. ನಂಬಿಕೆಗಳ ಮೇಲೆಯೇ ಚರ್ಚೆಯಾಗುತ್ತದೆ. ಹೀಗಾಗಿ ಸಾಮಾನ್ಯ ಭಕ್ತನಿಗೆ ಈ ಮಾದರಿಯಲ್ಲಿ ಒಂದೇ ಕ್ಷೇತ್ರದಲ್ಲಿ ಎರಡೆರಡು ಕಡೆ ಒಂದೇ ಸೇವೆ ಮಾಡಿಸಲು ಸಾಧ್ಯವೇ ? ಎನ್ನುವುದು  ಧಾರ್ಮಿಕ ನೆಲೆಗಟ್ಟಿನ ಚರ್ಚೆ.

ಇಲ್ಲಿ ಗೋವು ರಾಜಕೀಯ ವಿಷಯವಾಗುತ್ತದೆ, ಧರ್ಮ ರಾಜಕೀಯ ವಿಷಯವಾಗುತ್ತದೆ. ಅತಿ ಸೂಕ್ಷ್ಮ ಸಂಗತಿಯಾಗಿರುವ ಧರ್ಮವು ರಾಜಕೀಯವಾಗಿ ಚರ್ಚೆಯಾಗುವಾಗ, ರಾಜಕೀಯವಾಗಿ ಮುನ್ನೆಲೆಗೆ ಬರುವಾಗ,  ಇಂತಹ ಸೂಕ್ಷ್ಮ ಸಂಗತಿಗಳೂ ಏಕೆ ರಾಜಕೀಯವಾಗಿ ಚರ್ಚೆಯಾಗುವುದಿಲ್ಲ ಎನ್ನುವುದು  ಪ್ರಶ್ನೆ.

Advertisement
Open Talk
ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

8 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago