ಈಚೆಗೆ ವೀಕೆಂಡ್ ಟೂರ್‌ನಲ್ಲಿ ತುಳುನಾಡಿನ ದೈವಾರಾಧನೆಯೂ ಸೇರಿದಂತೆ ಪ್ಯಾಕೇಜ್ ವ್ಯವಸ್ಥೆಯಲ್ಲಿ ಕಂಡುಬಂದ ಉದ್ಯಮವೊಂದು ವಿರೋಧದ ಕಾರಣದಿಂದ ಸ್ಥಗಿತವಾಯಿತು. ಇದೀಗ ಕುಕ್ಕೆಯಲ್ಲಿ ಆಶ್ಲೇಷ ಬಲಿಯೂ ವ್ಯವಹಾರವಾಗಿದೆ. Online ನಲ್ಲಿ ಬುಕಿಂಗ್ ಮಾಡಿ ಪ್ರಸಾದವೂ ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥೆ ಇದಾಗಿದೆ..!.
ರಾಜ್ಯದ ನಂಬರ್ ವನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಸರ್ಪ ದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ. ಈಗ ಇದುವೇ ಕೆಲವು ಕಡೆ ಉದ್ಯಮದ ಭಾಗವಾಗಿ ಬೆಳೆದಿದೆ. ಧಾರ್ಮಿಕ ಭಾವನೆಗಳೂ ಉದ್ಯಮ, ವ್ಯವಹಾರವಾದಾಗಲೂ ಯಾವ ಆಡಳಿತವೂ ಧ್ವನಿ ಎತ್ತುತ್ತಿಲ್ಲ. ಮೌನವಾಗಿದೆ ಎಂದು ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವ-ಸೇವಾ ಎನ್ನುವ ಆನ್ ಲೈನ್ ವ್ಯವಹಾರದ ಧಾರ್ಮಿಕ ಕಾರ್ಯಕ್ರಮದ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಶುಕ್ರವಾರ ಬೆಳಗಿನಿಂದ ಜಾಹೀರಾತು ರೂಪದಲ್ಲಿ ಪ್ರಸಾರವಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಯಂದು ವಿಶೇಷವಾಗಿ ಆಶ್ಲೇಷ ಬಲಿ ಪೂಜೆ ಮಾಡಲಾಗುತ್ತದೆ. ತಮ್ಮ ದೋಷ ನಿವಾರಣೆಗೆ ಇಲ್ಲಿ ಬುಕಿಂಗ್ ಮಾಡಿ ಸೇವೆ ಸಲ್ಲಿಸಬಹುದು. ರಾಶಿ ಹಾಗೂ ನಕ್ಷತ್ರವನ್ನು ತಿಳಿಸಿದರೆ ಪುರೋಹಿತರು ಸಂಕಲ್ಪ ಮಾಡಿ ತಮ್ಮ ದೋಷ ನಿವಾರಣೆಗೆ ಪೂಜೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಲಾಗಿದೆ. ಈ ಪೂಜೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತದೆ, ನೇರ ಪ್ರಸಾರದ ಮೂಲಕವೂ ನೋಡಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ ಪ್ರಸಾದವನ್ನು ಕೂಡಾ ಕಳುಹಿಸಿ ಕೊಡುವ ವ್ಯವಸ್ಥೆ ಇದೆ ಎಂದು ಉಲ್ಲೇಖಿಸಲಾಗಿದೆ.
ಆದರೆ ಕುಕ್ಕೆ ಸುಬ್ರಹ್ಮಣ್ಯದ ಎಲ್ಲಿ ಪೂಜೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲ. ದೇವಸ್ಥಾನದಲ್ಲೋ ಅಥವಾ ಬೇರೆಲ್ಲಾದರೂ ನಡೆಯುತ್ತದೆಯೂ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಬಹುತೇಕ ಉತ್ತರ ಭಾರತದ ಮಂದಿ ಈ ಡಿಜಿಟಲ್ ಪ್ಲಾಟ್ ಫಾರಂಗೆ ಸ್ಪಂದನೆ ನೀಡಿದ್ದು ಸಂಜೆಯ ವೇಳೆಗೆ 2 ಸಾವಿರಕ್ಕೂ ಅಧಿಕ ಮಂದಿ ಸ್ಪಂದಿಸಿದ್ದಾರೆ. 60 ಕ್ಕೂ ಹೆಚ್ಚು ಜನರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೇಸ್ ಬುಕ್ ಮೂಲಕ ಪ್ರಚಾರ ನೀಡಲಾಗಿದೆ.
ಸಂಜೆಯವರೆಗೂ ಈ ಪೂಜೆ ಎಲ್ಲಿ ನಡೆಯುತ್ತದೆ, ಯಾರು ನಡೆಸುತ್ತಾರೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಇದುವರೆಗೂ ಯಾವುದೇ ಆಡಳಿತವು ಯಾವ ಪ್ರತಿಕ್ರಿಯೆಯೂ ನೀಡಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಎನ್ನುವ ಹೆಸರು ಉಲ್ಲೇಖ ಮಾಡಿರುವುದರಿಂದ ದೇವಸ್ಥಾನವು ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿತ್ತು, ಇದು ದೇವಸ್ಥಾನದ ವತಿಯಿಂದಲೇ ಮಾಡಲಾಗುತ್ತದೆಯೇ, ಅಥವಾ ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಬೇಕಾಗಿತ್ತು ಎಂಬುದು ಭಕ್ತರ ಅಪೇಕ್ಷೆಯಾಗಿದೆ. ಆಶ್ಲೇಷ ಬಲಿ ಸಹಿತ ಯಾವ ಪೂಜೆಗಳು ಎಲ್ಲಿ ಬೇಕಾದರೂ ನಡೆಯಬಹುದು, ಆದರೆ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ, ನಾಗದೋಷ ನಿವಾರಣೆಯ ಹೆಸರಿನಲ್ಲಿ ನಡೆಯುವ ಪೂಜೆ ಎಲ್ಲಿ ನಡೆಯುತ್ತದೆ,ಯಾರು ನಡೆಸುತ್ತಾರೆ ಎಂಬುದರ ಉಲ್ಲೇಖ ಇರಬೇಕಾಗಿದೆ.
ದರ್ಶಿತ್ ಕೆ ಎಸ್, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆದರ್ಶಿತ್…
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…
ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳ ಮತ್ತು ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕನಿಷ್ಠ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಘಾಟಿ ಕ್ಷೇತ್ರದ…
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಹಾಗು ದಟ್ಟ ಮಂಜು ಆವರಿಸಿದ…
ಓರ್ವ ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ್ ದಿ.ಪೆರುವಡಿ ನಾರಾಯಣ ಭಟ್ಟರು…