Advertisement
MIRROR FOCUS

ಬೀದಿ ಬದಿಗೆ ಬಂದ ಹೋರಿಗಳು | ವಾಹನ ಸವಾರರಿಗೂ ಸಂಕಷ್ಟ | ತೋಟದವರಿಗೂ ಕಾಟ…! |

Share

ಗೋವು ಉಳಿಯಬೇಕು, ಆದರೆ ನಮ್ಮ ಮನೆಯಲ್ಲಿ ಅಲ್ಲ.. ಪಕ್ಕದ ಮನೆಯಲ್ಲಿ…!, ಈಗ ಅದೂ ಅಲ್ಲ, ರಸ್ತೆ ಬದಿಯಲ್ಲಿ ಎಂಬ ಹಾಗೆ ಆಗಿದೆ ಕಾಲ. ರಸ್ತೆ ಬದಿಗಳಲ್ಲಿ ಹೋರಿಗಳು ಬಂದು ಇಳಿಯುತ್ತವೆ, ಸಮೀಪದ ಮನೆಗಳಿಗೆ, ತೋಟಗಳಿಗೂ ಈಗ ಸಂಕಷ್ಟ. ವಾಹನ ಸವಾರರಿಗೂ ಕಷ್ಟ ಕಷ್ಟ..!. ಈಚೆಗೆ ಸುಳ್ಯದ ಎಲಿಮಲೆ ಬಳಿಯಲ್ಲಿ ಕೆರೆಗೆ ಹೋರಿ ಬಿದ್ದು ಸಂಕಷ್ಟ ಅನುಭವಿಸಿದೆ.

ಸುಳ್ಯದ ಹಲವು ಕಡೆಗಳಲ್ಲಿ ಹೋರಿ ಕರುಗಳಲ್ಲಿ ರಸ್ತೆ ಬದಿ, ಕಾಡಿನ ಬದಿಗಳಲ್ಲಿ , ಪೇಟೆ ಬದಿಗಳಲ್ಲಿ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಎಲಿಮಲೆ ಬಳಿಯ ಚಳ್ಳ ಗೋವಿಂದ ಭಟ್ ಅವರ ತೋಟದ ಕೆರೆಯಲ್ಲಿ ಹೋರಿ ಕರುವೊಂದು ಕೆರೆಗೆ ಬಿದ್ದಿತ್ತು. ನಂತರ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು.ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿದ್ದ ಹೋರಿಯೊಂದು ಗುತ್ತಿಗಾರು ಬಳಿಯ ವಳಲಂಬೆಯಲ್ಲಿ ಬ್ಯಾರೆಲ್‌ ಒಳಗೆ ತಲೆಹಾಕಿ ಒದ್ದಾಟ ನಡೆಸಿತ್ತು. ಬಳಿಕ ಅಟೋ ಚಾಲಕರು ತೆರವುಗೊಳಿಸಲು ಹರಸಾಹಸ ಪಟ್ಟಿದ್ದರು. ಕೆಲವು ಸಮಯದ ಹಿಂದೆ ಉಬರಡ್ಕದ ಬಳಿಯೂ ಹೊಳೆಯಲ್ಲಿ ಹೋರಿ ಕರು ಕೆಸರಿನಲ್ಲಿ ಹೋತು ಹೋಗಿ ಪರದಾಟ ನಡೆಸಿತ್ತು.

ಹೀಗೆ ಕೆಲವು ಹೋರಿ ಕರುಗಳನ್ನು ಅಲ್ಲಲ್ಲಿ  ಕೆಲವೊಂದು ಅನಾಮಧೇಯರು ಬಿಟ್ಟು ಹೋಗುತ್ತಿದ್ದಾರೆ. ಈ ಹೋರಿಗಳು ಸಂಧಿಗಳಲ್ಲಿ ನುಗ್ಗಿ, ತರಕಾರಿ ಹಾಗೂ ಕೃಷಿ ಕಾರ್ಯಗಳಿಗೆ ಹಾನಿ ಮಾಡುತ್ತಿದೆ. ರಸ್ತೆ ಬದಿ ವಾಹನಗಳಿಗೂ ಅಡ್ಡ ಬಂದ ದ್ವಿಚಕ್ರ ಸವಾರರಿಗೂ ಸಂಕಷ್ಟವಾಗಿದೆ. ಹೋರಿ ಸಾಕಲಾಗದೇ ರಸ್ತೆಯಲ್ಲಿ ಬಿಡುವವರ ಕಾಟ ಹೆಚ್ಚಾಗಿದೆ.

ಇದಕ್ಕಾಗಿ ಆಯಾ ಗ್ರಾಮ ಪಂಚಾಯತ್‌ ಆ ಭಾಗದ ಗೋಮಾಳವನ್ನು ಗುರುತಿಸಿ ಗೋಪಾಲಕರ ಅನುಕೂಲಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಕೆಲವು ಕಡೆ ಲಭ್ಯವಿರುವ 50 ಎಕರೆಯಷ್ಟು ಗೋಮಾಳ ಯಾರಿಗೂ ಉಪಕಾರಕ್ಕೆ ಇಲ್ಲದಂತಾಗಿದೆ. ರಸ್ತೆ ಬದಿ ಇರುವ ಗೋವುಗಳನ್ನು ಇಂತಹ ಗೋಮಳಗಳಲ್ಲಿ ಬಿಡಬಹುದಾಗಿದೆ. ಇದಕ್ಕಾಗಿ ಗೋಮಳಗಳ ರಕ್ಷಣೆ ಹಾಗೂ ರಸ್ತೆ ಬದಿ ಹೋರಿಗಳನ್ನು  ಬಿಡುವವರ ಸಂಖ್ಯೆಯೂ ಕಡಿಮೆ ಆಗಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

2 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

5 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

11 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

15 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

17 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

1 day ago