Advertisement
ಸುದ್ದಿಗಳು

ಕುಕ್ಕೆಯ ಜಾತ್ರೆಗೆ ಬರ್ತೀರಾ… ? | ಪಾರ್ಕಿಂಕ್‌ ವ್ಯವಸ್ಥೆ ಗಮನಿಸಿ | ಪೋಲೀಸ್‌ರಿಂದ ವ್ಯವಸ್ಥಿತ ವಾಹನ ಸಂಚಾರಕ್ಕೆ ಕ್ರಮ |

Share

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಭಕ್ತಾದಿಗಳು ಇದಕ್ಕೆ ಸಹಕರಿಸಿದರೆ ವಾಹನ ಸಂಚಾರವೂ, ವಾಹನ ಪಾರ್ಕಿಂಗ್‌ ವ್ಯವಸ್ಥೆಯೂ ಸುಗಮವಾಗಲಿದೆ. ಇದಕ್ಕಾಗಿ ಭಕ್ತಾದಿಗಳು ಸಹಕರಿಸಿ.

ಡಿ.17ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲೇ ನಿಲುಗಡೆಗೊಳಿಸಬೇಕು. ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿದವರು 4 ಗಂಟೆಯ ಒಳಗೆ ನಿಗದಿ ಪಡಿಸಿದ ವಸತಿಗೃಹಗಳಿಗೆ ತೆರಳಬೇಕು. ಅಲ್ಲದೆ ತುರ್ತು ಸಂದರ್ಭ ಹೊರತು ಪಡಿಸಿ ಸರ್ವರಿಗೂ ಈ ನಿಯಮಗಳು ಅನ್ವಯವಾಗಲಿದೆ.ಅಲ್ಲದೆ ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಲ್ದಾಣ ಮಾರ್ಗಸೂಚಿ: ಗುಂಡ್ಯ, ಉಪ್ಪಿನಂಗಡಿ, ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ಲಘು ವಾಹನಗಳಿಗೆ ಕುಮಾರಧಾರ ಹಲಿಪ್ಯಾಡ್ ಮತ್ತು ಪದವಿ ಪೂರ್ವ ಕಾಲೇಜು ಮೈದಾನ, ದ್ವಿಚಕ್ರ ವಾಹನಗಳಿಗೆ ಪದವಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಮೈದಾನಗಳನ್ನು ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ, ದ್ವಿಚಕ್ರ ವಾಹನಗಳು ಮತ್ತು ಲಘು ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.ಅಟೋ ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಎದುರಿನ ತನಕ ಸಾಗಾಟ ಮಾಡಬಹುದಾಗಿದೆ. ಜಾತ್ರೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಅವರ ಸುರಕ್ಷತಾ ದೃಷ್ಠಿಯಿಂದ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳಿಗೆ ಡಿ.17 ಮತ್ತು 18 ರಂದು ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದುದರಿಂದ ಸಾರ್ವಜನಿಕರು ಮತ್ತು ಭಕ್ತರು ಸಹಕರಿಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

30 minutes ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

1 hour ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

2 hours ago

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

3 hours ago

ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ- ಸಚಿವ ಜಾರ್ಜ್ ಸ್ಪಷ್ಟನೆ

ಕರ್ನಾಟಕದಲ್ಲಿ ಸದ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ…

4 hours ago

ಸೂಪರ್ ಎಲ್ ನಿನೋ ಆತಂಕ – ಫೆಬ್ರವರಿವರೆಗೆ 4.51 ಲಕ್ಷ ತಾಪಮಾನ ಸಂಬಂಧಿ ಸಾವುಗಳ ಅಂದಾಜು

ಸೂಪರ್ ಎಲ್ ನಿನೋದಿಂದ 2027ರ ಫೆಬ್ರವರಿವರೆಗೆ ಸಾಮಾನ್ಯ ವರ್ಷಕ್ಕಿಂತ 4.51 ಲಕ್ಷ ತಾಪಮಾನ…

4 hours ago