ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಹೆಸರಿನಿಂದ ಪ್ರಥಮ ಅಕ್ಷರಗಳನ್ನು ಆರಿಸಿಕೊಂಡು ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿ ಯುಗದ ಕವಿ ಜಗದ ಕವಿಯೆಂದು ಬೇಂದ್ರೆಯವರಿಂದಲೇ ಬಿರುದಾಂಕಿತರಾದವರು. ತಮ್ಮ ಬಾಲ್ಯವನ್ನು ಕುಪ್ಪಳ್ಳಿಯಲ್ಲಿ ಹಾಗೂ ಮುಂದಿನ ದಿನಗಳನ್ನು ಮೈಸೂರಿನ ಉದಯರವಿಯಲ್ಲೇ ಕಳೆದರು. ಅವರು 29 ಡಿಸೆಂಬರ್ 1904 ರಲ್ಲಿ ಜನಿಸಿದರು. ಇಂದು ಕವಿಯ 116 ನೇ ಹುಟ್ಟು ಹಬ್ಬ.
ಕುವೆಂಪು ಎಂಬ ಹೆಸರಿನೊಂದಿಗೆ ತಟ್ಟನೆ ನೆನಪಾಗುವುದು’ ಓ ನನ್ನ ಚೇತನ ‘ಎಂಬ ವಿಶ್ವ ಮಾನವ ಸಂದೇಶ ಸಾರುವ ಗೀತೆ. ಪ್ರೌಢಶಾಲಾ ವಿದ್ಯಾಭ್ಯಸದ ಆರಂಭದ ದಿನಗಳಲ್ಲಿ ನಮ್ಮ ಕನ್ನಡ ಟೀಚರ್ ಬಿ .ಎನ್. ಕಲಾವತಿಯವರು ಸೂಕ್ತ ರಾಗ ಅಳವಡಿಸಿ ಹಾಡುತ್ತಿದ್ದುದು ಇನ್ನೂ ಕಿವಿಯಲ್ಲಿ ರಿಂಗಿಣಿಸುತ್ತಿದೆ. ಕಣ್ಣು ಮುಚ್ಚಿ ಓ ನನ್ನ ಚೇತನ ಗೀತೆಯನ್ನು ಅವರು ಹಾಡುತ್ತಿದ್ದರೆ ಒಂದರೆಗಳಿಗೆ ಅಕ್ಕಪಕ್ಕದ ತರಗತಿಗಳು ಸ್ಥಬ್ದವಾಗುತ್ತಿತ್ತು.
ಭಾವಗೀತೆಗಳೇ ಆಗಿರಲಿ, ದೇಶಭಕ್ತಿ ಗೀತೆಗಳೇ ಆಗಿರಲಿ ಮನಸಿಗೆ ಮುಟ್ಟುವಂತೆ ಬರೆಯುತ್ತಿದ್ದವರು ಕುವೆಂಪು ಅವರು. ನಮ್ಮ ನೆಚ್ಚಿನ ಕವಿ ‘ರಾಷ್ಟ್ರ ಕವಿ’ಯೆಂಬ ಹೆಮ್ಮೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿಗೈದವರು ಕುವೆಂಪುರವರು. ಅವರ ಕವಿತೆಗಳು, ನಾಟಕಗಳು , ಕಾದಂಬರಿಗಳು ಮುಖ್ಯವಾಗಿ ಪ್ರಕೃತಿ, ದೇಶಪ್ರೇಮ, ಪ್ರೀತಿ ಆಧ್ಯಾತ್ಮ, ವೈಚಾರಿಕತೆಯ ವಿಷಯಗಳ ಆಧಾರಿತವಾಗಿರುತ್ತಿದ್ದುವು. ಕೆಲವೊಂದು ಕವಿತೆಗಳಂತು ಮನಸಿನಲ್ಲಿ ಕ್ರಾಂತಿಯ ಕಿಚ್ಚು ಹಚ್ಚುವಂತಿವೆ. ಕನ್ನಡ ನಾಡು ನುಡಿಯ ಒಳಿತಿಗಾಗಿ ಬರೆದ ಹಾಡುಗಳು ಕ್ರಾಂತಿಕಾರಿ ಯಾಗಿರುತ್ತಿತ್ತು. ಜನರ ಭಾವನೆಗಳನ್ನು ಬಡಿದೆಬ್ಬಿಸುವಂತಿರುತ್ತವೆ.
ಅವು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತ.
“ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ ||
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ ಹೇ! ಭವವಿದೂರ……………
ಎಂದು ಗಾಯಕ ಸಿ ಅಶ್ವಥ್ ಹಾಡುತ್ತಿದ್ದರೆ ಮೈ ರೋಮಾಂಚನವಾಗದಿರದು.
ಅವರೊಬ್ಬ ಕವಿ, ಕಾದಂಬರಿಗಾರ, ಚಿಂತಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ, ವಿಮರ್ಶಕ , ಹೋರಾಟಗಾರ ಎಲ್ಲವೂ.
ಸ್ವಾವಲಂಬನೆ , ಸ್ವಾತಂತ್ರ್ಯ , ಇಚ್ಛಾಶಕ್ತಿ ಸಾಧಿಸದ ಹೊರತು ಅಭಿವೃದ್ಧಿ ಅಸಾಧ್ಯವೆಂಬುದನ್ನು ಬಲವಾಗಿ ಪ್ರತಿಪಾದಿಸಿದರು ಕುವೆಂಪುರವರು.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…