ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಹೊಳೆ, ನದಿಯ ನೀರಿನ ಮಟ್ಟ ಈಗಲೇ ಕುಸಿತ ಆರಂಭವಾಗಿದೆ. ಹಲವಾರು ಗ್ರಾಮೀಣ ಭಾಗಗಳಲ್ಲೂ ನೀರಿನ ವರತೆ ಈಗಲೃ ಬರಿದಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಹೊತ್ತಿನಲ್ಲಿ ಇರಬೇಕಾದ ನೀರಿನ ಮಟ್ಟ ಈಗಲೇ ತಲುಪಿದೆ. ಹೀಗಾಗಿ ಇನ್ನುಳಿದ ದಿನಗಳಲ್ಲಿ ಮಳೆಯಾಗದೇ ಇದ್ದರೆ ಹೇಗೆ ಎನ್ನುವ ಆತಂಕ ಹಲವು ಕಡೆಗಳಲ್ಲಿ ಕೇಳಿಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಶಿಶಿಲಾ ನದಿಯಲ್ಲಿ ಕೂಡಾ ನೀರಿನ ಮಟ್ಟ ಇಳಿಕೆಯಾಗಿದೆ. ನೇರವಾಗಿ ಕಾಡಿನಿಂದಲೇ ಆರಂಭವಾಗುವ ಈ ನದಿಯ ಆರಂಭವೇ ಶಿಶಿಲ ದೇವಸ್ಥಾನದ ಪಕ್ಕದಲ್ಲಿದೆ. ಇಲ್ಲಿ ಕೂಡಾ ಈಗಲೇ ನೀರಿನ ಮಟ್ಟ ಇಳಿಕೆಯಾಗಿರುವುದು ಹಾಗೂ ಡಿಸೆಂಬರ್ ಸಮಯಕ್ಕೆ ಇರಬೇಕಾದ ನೀರಿನ ಮಟ್ಟ ಈಗ ಇದೆ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು. ಇಲ್ಲಿ ದೇವರ ಮೀನಿಗಳು ಸಾಕಷ್ಟು ಇದೆ, ನೀರಿನ ಕೊರತೆಯಾದರೆ ಮೀನಿಉಗಳಿಗೂ ಸಂಕಷ್ಟವಾಗಲಿದೆ. ಹೀಗಾಗಿ ನೀರಿನ ಕೊರತೆಯಾಗದಂತೆ ಇಲ್ಲಿ ಬಹಳ ಎಚ್ಚರಿಕೆ ವಹಿಸಬೇಕಿದೆ. ಇದಕ್ಕಾಗಿ ದೇವಸ್ಥಾನ ಹಾಗೂ ಆಸುಪಾಸಿನ ಜನರಿಗೂ ನೀರಿನ ಮಟ್ಟ ಇಳಿಕೆಯಾಗಿರುವುದು ಆತಂಕವೇ ಹೌದು. ಗ್ರಾಮೀಣ ಭಾಗದಲ್ಲಿ ಈ ರೀತಿಯಾಗಿ ನೀರಿನ ಮಟ್ಟ ಇಳಿಕೆಯಾಗುವುದು ಆತಂಕಕ್ಕೆ ಕಾರಣ.
ಈಗ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಮಧ್ಯಾಹ್ನದ ಹೊತ್ತಿಗೆ ವಾತಾವರಣದ ಉಷ್ಣತೆ ತೀವ್ರವಾಗಿ ಏರಿಕೆಯಾಗುತ್ತಿದೆ. ಸುಮಾರು 33 ಡಿಗ್ರಿಯಿಂದಲೇ ಆರಂಭವಾಗುತ್ತದೆ. ಇದು ಕೂಡಾ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ. ಭತ್ತದ ಗದ್ದೆಗಳಿಗೆ ನೀರುಣಿಸಬೇಕಾದ ಸ್ಥಿತಿ ಹಲವು ಕಡೆ ಇದೆ. ಗ್ರಾಮೀಣ ಭಾಗಗಳಲ್ಲಿ ಈಗಲೇ ನೀರಿನ ಕೊರತೆ ಹೀಗಾದರೆ ನಗರ ಪ್ರದೇಶಗಳ ಕತೆ ಏನಾಗಬೇಡ ಎಂಬುದು ಹಲವು ಕಡೆ ಚರ್ಚೆಯಾಗುವ ಸಂಗತಿ. ಎಲ್ಲಾ ಕಡೆಯೂ ಈಗ ಮಾತು, “ಮಳೆಯ ಅವಸ್ಥೆ ಎಂತ” ಅಂತಲೇ…!.
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ…
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490