ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆ ರಾಮಮಂದಿರ ಭೇಟಿ | ವಿಪರೀತ ನೂಕುನುಗ್ಗಲು |

January 23, 2024
8:17 PM
ರಾಮ ಭಕ್ತರ ದಂಡು ಅಯೋಧ್ಯೆಯಲ್ಲಿದೆ. ರಾಮಲಲ್ಲಾನ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸಾಲಿನಲ್ಲಿ ನಿಂತಿದ್ದಾರೆ. ವಿಪರೀತ ರಶ್‌ ಹಿನ್ನೆಲೆಯಲ್ಲಿ ಸಮಯದ ಬದಲಾವಣೆ ಮಾಡಲಾಗುತ್ತಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ನಿನ್ನೆ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಭಾರೀ ಜನಸಾಗರವೇ ಹರಿದು ಬಂದಿದೆ. ಮಂಗಳವಾರ ಬೆಳಗ್ಗೆಯೇ ರಾಮಲಲ್ಲಾನ ದರ್ಶನ ಪಡೆಯಲು ಸಾವಿರಾರು ಭಕ್ತರು  ಆಗಮಿಸಿದ್ದರು. ಮೊದಲ ದಿನ 1.5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯದ ಸುತ್ತ ಬಂದಿದ್ದರಿಂದ ವಿಪರೀತ ರಶ್‌ ಕಂಡುಬಂದಿತ್ತು. ಹೀಗಾಗಿ ಜನಸಂದಣಿಯನ್ನು ತಡೆಯಲು ಅಯೋಧ್ಯಾ ಆಡಳಿತವು ಮಧ್ಯಾಹ್ನ 2 ಗಂಟೆಯವರೆಗೆ ದರ್ಶನವನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ.ಮುಂದೆ ಓದಿ

Advertisement
Advertisement

ವಿಶೇಷ ಪೂಜೆ ಹಾಗೂ ಬಾಲರಾಮನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಇದರಿಂದ ಅಪಾರ ಜನಸ್ತೋಮವನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಅಯೋಧ್ಯೆ ಪೊಲೀಸರು ಮಧ್ಯಾಹ್ನ 2.30ರವರೆಗೆ ದೇವಾಲಯದ ದ್ವಾರಗಳನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ. ದರ್ಶನಕ್ಕಾಗಿ ಬಂದಿರುವ ಭಾರತ ಮತ್ತು ಹೊರಗಿನ ಪ್ರವಾಸಿಗರು ದಯವಿಟ್ಟು ದೇವಾಲಯದ ದ್ವಾರಗಳಿಗೆ ಬರದಂತೆ ಕೇಳಿಕೊಳ್ಳುತ್ತೇವೆ” ಎಂದು ಪೊಲೀಸರು ರಾಂಪತ್‌ನಲ್ಲಿ ಘೋಷಿಸಿದ್ದಾರೆ.ಮುಂದೆ ಓದಿ

ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ವಿಪರೀತ ಸಂದಣಿ ಕಾರಣದಿಂದ ಭದ್ರತಾ ಸಿಬ್ಬಂದಿ ಸುವ್ಯವಸ್ಥೆ ಕಾಪಾಡಲು ಹರಸಾಹಸ ಪಡಬೇಕಾಯಿತು. ಮಂಗಳವಾರ ಸಂಜೆಯ ವೇಳೆಗೆ ಸುಮಾರು 2.5 ಲಕ್ಷದಿಂದ 3 ಲಕ್ಷ ಜನರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದರು. 8,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.ಮುಂದೆ ಓದಿ

ಶ್ರೀರಾಮ ಜನ್ಮಭೂಮಿ  ಟ್ರಸ್ಟ್ ಈ ಅವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿ ದರ್ಶನದ ಸಮಯ ಮತ್ತು ಭಕ್ತರಿಗೆ ಸಲಹೆಯನ್ನು ನೀಡಿದೆ. ಬೆಳಗ್ಗೆ 7 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ರಾಮ್ ಲಲ್ಲಾ ವಿಗ್ರಹವನ್ನು ವೀಕ್ಷಿಸಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ.  ಟ್ರಸ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ, ರಾಮನ ವಿಗ್ರಹಕ್ಕೆ ಹಣ್ಣುಗಳು ಮತ್ತು ಹಾಲನ್ನು ಅರ್ಪಿಸಬಹುದು.

Source : PTI

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ
May 17, 2025
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group