ಒಂದು ಗ್ರಾಮದಲ್ಲಿ ಒಬ್ಬ ರೈತನಿದ್ದ(Farmer). ಅವನೊಬ್ಬ ಪ್ರಗತಿಪರ ರೈತ. ಆತ ಯಾವ ಕೆಲಸ ಮಾಡಿದರೂ ತುಂಬಾ ಅಲೋಚನೆ ಮಾಡಿ, ಹತ್ತಾರು ಜನರನ್ನು ಕೇಳಿ, ಅಭಿಪ್ರಾಯ ಪಡೆದು ಮಾಡುತ್ತಿದ್ದ. ಅವನ ಬೆಳೆ(Crop) ಯಾವಾಗಲೂ ಅತ್ಯುತ್ತಮ ಮಟ್ಟದ್ದಾಗಿರುತ್ತಿತ್ತು. ಪ್ರತಿವರ್ಷ ಅವನಿಗೆ ವಾರ್ಷಿಕ ಪ್ರಶಸ್ತಿ(Award) ಬರುತ್ತಿತ್ತು.
ಒಂದು ಬಾರಿ ಅವನಿಗೆ ಅವನ ಪರಿಶ್ರಮಕ್ಕಾಗಿ ರಾಷ್ಟೀಯ ಪ್ರಶಸ್ತಿ ಬಂದಿತು. ಪ್ರಶಸ್ತಿ ಪ್ರಧಾನವಾದ ಮೇಲೆ ಪತ್ರಿಕಾ ವರದಿಗಾರರು(Journalist) ಅವನ ಸಂದರ್ಶನ(Interview) ನಡೆಸುತ್ತಿದ್ದರು. ಒಬ್ಬ ಪತ್ರಕರ್ತೆ ರೈತನನ್ನು ಕೇಳಿದರು, ಪ್ರತಿವರ್ಷವೂ ನೀವು ವಿಶೇಷವಾದ ಪ್ರಶಸ್ತಿ ಪಡೆದು ಕೊಳ್ಳುತ್ತೀರಿ. ಇದರ ಗುಟ್ಟೇನು ಆತ ಮುಗುಳ್ನಕ್ಕು ಹೇಳಿದ, ಕೃಷಿಯಲ್ಲಿ(Agriculture) ಪ್ರಶಸ್ತಿ ಬರಬೇಕೆಂದರೆ ಒಂದೇ ಕಾರಣ- ಅದು ಸತತ ಪರಿಶ್ರಮ. ಆದರಲ್ಲಿ ನನಗೆ ಸದಾ ನಂಬಿಕೆ ಇದೆ. ಅದೇ ನನ್ನನ್ನು ರಕ್ಷಿಸುತ್ತದೆ. ಆಕೆ ಮತ್ತೆ ಕೇಳಿದಳು. ಪರಿಶ್ರಮವನ್ನೇನೋ ಎಲ್ಲ ರೈತರು ಮಾಡುತ್ತಾರೆ. ಆದರೆ ಅವರಿಗೆ ತಕ್ಕ ಪ್ರತಿಫಲ ದೊರಕುವುದಿಲ್ಲ.ನೀವು ಬೀಜಗಳನ್ನು ಎಲ್ಲಿಂದಲೋ ತರಿಸುತ್ತೀರಂತೆ ಹೌದೇ. ಹೌದು ನಾನು ನಾಲ್ಕಾರು ಕಡೆಗೆ ಹೋಗಿ ವಿಚಾರಮಾಡಿ., ನಮ್ಮ ತರಹದೇ ಭೂಮಿಯಲ್ಲಿ ಅತ್ಯಂತ ಹೆಚ್ಚು ಬೆಳೆ ಯನ್ನು ಬೆಳೆದವರಲ್ಲಿ ಮಾತಾಡಿ ಬೀಜ ತರುತ್ತೇನೆ. ಅಲ್ಲದೇ ನನ್ನ ಹೊಲದ ಸುತ್ತಮುತ್ತ ಇರುವ ಎಲ್ಲ ಹೊಲಗಳ ಯಜಮಾನರಿಗೆ ಈ ಬೀಜಗಳನ್ನು ಪುಕ್ಕಟೆಯಾಗಿ ಕೊಡುತ್ತೇನೆ.
ಆಕೆಗೆ ಭಾರಿ ಆಶ್ಚರ್ಯವಾಯಿತು. ಇದು ವಿಚಿತ್ರ ವಲ್ಲವೇ?ನೀವು ಕಷ್ಟಪಟ್ಟು ಮುತುವರ್ಜಿವಹಿಸಿ ತಂದ ಬೀಜಗಳನ್ನು ಯಾಕೆ ಹಂಚುತ್ತೀರಿ? ಬರಿ ನಿಮ್ಮದೇ ಬೇಳೆ ಮಾತ್ರ ಚೆನ್ನಾಗಿದ್ದರೆ ಅದಕ್ಕೆ ಹೆಚ್ಚಿನ ಬೆಲೆ ಬಂದು ಲಾಭವಾಗುವುದಿಲ್ಲವೇ? ಯಾವ ಪ್ರಯತ್ನವನ್ನೂ ಮಾಡದ ಸುತ್ತಮುತ್ತಲಿನ ರೈತರಿಗೆ, ಅದೂ ಅವರು ಕೆೇಳದೇ, ಯಾಕೆ ಕೊಡುತ್ತೀರಿ? ಆತ ನಿಧಾನವಾಗಿ ಉತ್ತರಿಸಿದರು. ನೋಡಿ ಎರಡು ಕಾರಣಕ್ಕಾಗಿ ನಾನು ಬೀಜಗಳನ್ನು ಹಂಚುತ್ತೇನೆ. ಮೊದಲನೆಯದಾಗಿ ನನ್ನ ಬೆಳೆ ಮಾತ್ರ ಚೆನ್ನಾಗಿದ್ದು ಅವರ ಬೆಳೆ ಚೆನ್ನಾಗಿಲ್ಲದೇ ಹೋದರೆ ಅವರಿಗೆ ಅಸೂಯೆಯಾಗುವುದಿಲ್ಲವೇ? ಅಸೂಯೆ ಹೆಚ್ಚಾದರೆ ಅವರು ನನ್ನ ಹೊಲದಲ್ಲಿ ದನಗಳನ್ನು ನುಗ್ಗಿಸಬಹುದು, ಬೆಂಕಿ ಹಾಕಬಹುದು.
ಎರಡನೆಯ ಕಾರಣ, ಬಹುಮುಖ್ಯವಾದದ್ದು. ನನ್ನ ಬೆಳೆ ಎದೆ ಎತ್ತರಕ್ಕೆ ಬೆಳೆದು ನಿಂತಾಗ, ಹೂ ಬಿಟ್ಟಾಗ ಗಾಳಿಯಿಂದ ನನ್ನ ಬೆಳೆಗಳ ಹೂಗಳ ಪರಾಗ ರೇಣುಗಳು ಪಕ್ಕದ ಬೆಳೆಯ ಹೂಗಳ ಮೇಲೆ ಬೀಳುತ್ತವೆ ಫಲಿತಗೊಳ್ಳುತ್ತವೆ. ಅಂತೆಯೇ ಅವರ ಹೂಗಳ ಪರಾಗ ಕಣ ನನ್ನ ಬೆಳೆಯ ಹೂಗಳ ಮೇಲೆ ಬೀಳುತ್ತವೆ. ಅವರ ಬೆಳೆ ಚೆನ್ನಾಗಿಲ್ಲದಿದ್ದಾಗ, ಪರಾಗ ಸ್ಪರ್ಶದಿಂದ ನನ್ನ ಬೆಳೆಯೂ ಕೆಡುವುದಿಲ್ಲವೇ? ಆದ್ದರಿಂದ ನಾನು ಅವರೆಲ್ಲರಿಗೂ ಒಳ್ಳೆ ಬೀಜಗಳನ್ನು ಕೊಡುತ್ತೇನೆ. ಆಗ ಪರಾಗ ಸ್ಪರ್ಶವಾದರೂ ನನ್ನ ಬೆಳೆ ಕೆಡುವುದಿಲ್ಲ. ಆದ್ದರಿಂದ ನಾನು ಒಳ್ಳೆಯ ಬೆಳೆ ತೆಗೆಯಬೇಕಾದರೆ ನಮ್ಮ ಸುತ್ತಮುತ್ತಲಿನವರೂ ಒಳ್ಳೆ ಬೀಜ ಹಾಕುವುದು ಅನಿವಾರ್ಯ.
ಇದನ್ನು ನಮ್ಮ ಜೀವನಕ್ಕೆ ಅನ್ವಯಿಸಿ ಕೊಳ್ಳಬಹುದು. ನಾವು ಶಾಂತಿಯಿಂದ ಇರಬೇಕಾದರೆ ನಮ್ಮ ಸುತ್ತಮುತ್ತ ಶಾಂತಿ ಇರಬೇಕು. ಸಂತೋಷ ವಾಗಿರಬೇಕಿದ್ದರೆ ನಮ್ಮ ವಾತಾವರಣದ ಎಲ್ಲ ಜನ ಸಂತೋಷವಾಗಿರಬೇಕು. ಅದು ಹಾಗಿರುವಂತೆ ನೋಡಿ ಕೊಳ್ಳುವುದು ನಮ್ಮ ಪ್ರಯತ್ನ ವಾಗಬೇಕು. ಇದು ಸಮಾಜ ಜೀವನದ ಬಹು ಮುಖ್ಯ ಪಾಠ ಅಲ್ಲವೇ ?
Source : Digital Media
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…
ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…
ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…
ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…
ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…
ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…