Advertisement
ಸುದ್ದಿಗಳು

ಪರಿಸರೋತ್ಸವದೊಂದಿಗೆ ಬಿಡುಗಡೆಯಾದ “Echo…. The reflection of reality” ಕಿರುಚಿತ್ರ |

Share

“ಇಕೋ.. ನೈಜತೆಯ ಪ್ರತಿಫಲನ”(Echo…. The reflection of reality) ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ನಡೆಯಿತು.

ರಂಗಚೇತನ ಕಾಸರಗೋಡು ಮತ್ತು ರಿದಮ್ ಮೀಡಿಯಾ ಕ್ರೀಯೇಷನ್ ಅವರ ಗಡಿನಾಡ ಖ್ಯಾತ ಯುವ ರಂಗಕರ್ಮಿ ಸದಾಶಿವ ಬಾಲಮಿತ್ರ ಅವರ ಚಿತ್ರಕಥೆ, ನಿರ್ದೇಶನ ,  ಮೆಲ್ವಿನ್ ಮಾಸ್ಟರ್ ಪೆರ್ಮುದೆ ಹಾಗೂ  ರಂಜಿತ್ ರಮಣ ಶರ್ಮರವರ ಕ್ಯಾಮರಾ ,ಎಡಿಟಿಂಗ್, ಡಬ್ಬಿಂಗ್ ಮತ್ತು ಸಂಗೀತದೊಂದಿಗೆ , ಖ್ಯಾತ ಚಲನಚಿತ್ರ ನಟ ಬಾಲಕೃಷ್ಣ ಅಡೂರು , ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳ ಐವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳು ಹಾಗೂ ರಂಗಚೇತನ ಕಾಸರಗೋಡು ಇದರ ಸದ್ಯರು ಮನೋಜ್ಞ ಅಭಿನಯ ನೀಡಿದ ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಿತು.

ವಿಶ್ವ ಪರಿಸರ ದಿನದಂದು ” ಪರಿಸರೋತ್ಸವ ದೊಂದಿಗೆ ಪೆರ್ಮುದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ “ಶಾಲೆಗೊಂದು ವಿದ್ಯಾವನ”  ಮುರಳಿ ಮಾದವ ಪೆಲ್ತಾಜೆ ಅವರಿಂದ “ಒಂದೇ ಒಂದು ಭೂಮಿ,” ಪರಿಸರ ಜಾಗೃತಿ ಕಾರ್ಯಾಗಾರ, ಅಪೂರ್ವ ಗಿಡಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಗಳು ಗಮನಸೆಳೆಯಿತು.

ನಂತರ ನಡೆದ “ಇಕ್ಕೋ…” ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಲಿಮ್ಕಾ ವಿಶ್ವ ದಾಖಲೆಯ ಯೋಗ ರತ್ನ ಕು.ಅಭಿಜ್ಞಾನ ಹರೀಶ್ ಮತ್ತು  yoga for kid,s kasaragod ತಂಡದ ಯೋಗ ನೃತ್ಯ, ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯೆಯರಾದ ತನ್ವಿ.ಕೆ.ಟಿ.ಮತ್ತು ಇಷಿಕಾ.ಕೆ.ಟಿ, ನೃತ್ಯ ವಿದೂಷಿ ವಿದ್ಯಾಲಕ್ಷ್ಮಿ ಯವರ ಶಿಷ್ಯರಾದ ಚೇತನ್ ಎಡಕ್ಕಾನ ಮತ್ತು ನೂತನ್ ಎಡಕ್ಕಾನರವರ ಭರತನಾಟ್ಯ, ಅರಸು ಡ್ಯಾನ್ಸ್ ಅಕಾಡೆಮಿ ಮಂಜೇಶ್ವರ ತಂಡದ ನೃತ್ಯ ರೂಪಕಗಳು ಸಾಂಸ್ಕೃತಿಕ ಸಂಭ್ರಮವನ್ನು ನೀಡಿತು.

ಸಂಜೆ ಚಲನಚಿತ್ರ ನಟ  ಬಾಲಕೃಷ್ಣ ಮಾಸ್ಟರ್ ಅಡೂರು ಅವರ ಅದ್ಯಕ್ಷತೆ ಯಲ್ಲಿ ನಡೆದ ಪರಿಸರ ಕಾಳಜಿಯ ಇಕ್ಕೋ ಕಿರುಚಿತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ  ದಿನೇಶ್. ವಿ ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಶಿವ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ  ಚನಿಯಪ್ಪ ನಾಯಕ್ ,ಮಂಜೇಶ್ವರ ಬಿ.ಆರ್.ಸಿ ಯ ಬಿ ಪಿ.ಸಿ  ವಿಜಯಕುಮಾರ್ ಪಾವಳ ಮೊದಲಾದವರು ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳು ರಂಗಚೇತನ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತೆ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು.ಕಾರ್ಯದರ್ಶಿ ಅಶೋಕ ಕುಮಾರ್ ಕೊಡ್ಲಮೊಗೆರು ಸ್ವಾಗತಿಸಿ ,ಸದಾಶಿವ ಬಾಲಮಿತ್ರ ವಂದಿಸಿದರು. ಕಾರ್ಯಕ್ರಮ ದಲ್ಲಿ ಕಿರುಚಿತ್ರ ತಂಡದ ಎಲ್ಲಾ ಸದಸ್ಯರನ್ನು ರಂಗಚೇತನ ಕಾಸರಗೋಡು ವತಿಯಿಂದ ಗೌರವಿಸಲಾಯಿತು. ಬಳಿಕ ಕಿರುಚಿತ್ರದ ಪ್ರದರ್ಶನ ನಡೆಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

2 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

2 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 days ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

2 days ago